ಬಿಸಿ ಬಿಸಿ ಸುದ್ದಿ

ಶರಣರ ವಿಚಾರಗಳ ಅಳವಡಿಕೆಯಿಂದ ಸಮಾಜ ಪರಿವರ್ತನೆ: ಮಾಜಿ ಸಚಿವ ಎಸ್.ಕೆ.‌ಕಾಂತಾ

ಕಲಬುರಗಿ: ಕಾಯಕಕ್ಕೆ ಹೆಚ್ಚಿನ ಮಹತ್ವ ಕೊಟ್ಟ ಶರಣ ಪರಂಪರೆ ಮುಂದುವರಿಸಿಕೊಂಡು ಹೋಗುವ ಹಿನ್ನೆಲೆಯಲ್ಲಿ ಕಾಯಕ ಶರಣರನ್ನು ಸನ್ಮಾನಿಸುವುದು ಹಾಗೂ ಸಮಾಜದ ಬದಲಾವಣೆಗೆ ವಚನ ಸಾಹಿತ್ಯಕ್ಕೆ ಮಹತ್ವ ಕೊಟ್ಟಿರುವುದು ಅನುಕರಣೀಯ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಲಿಂ. ಶರಣ ಬಿ.ಬಿ.‌ಪಾಟೀಲ ಕುಳೇಕುಮಟಗಿ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ತ ಪತ್ರಕರ್ತ,ಶರಣ ಸಾಹಿತಿ ಶಿವರಂಜನ್ ಸತ್ಯಂಪೇಟೆ ರಚಿಸಿದ ‘ವಚನ ಹೃದಯ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಸವಾದಿ ಶರಣರ ಬದುಕು ಹಾಗೂ ಬೋಧನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಇಂದಿನ ಯುವಕರು ಬಸವಣ್ಣನವರ ವಿಚಾರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ಬದುಕಿನ ದಾರಿ ಸುಗಮವಾಗಲಿದೆ ಎಂದು ಹೇಳಿದರು.

‘ವಚನ ಹೃದಯ’ ಕೃತಿ ವಚನಗಳ ಒಡಲಾಳದ ಆಶಯಗಳನ್ನು ಎತ್ತಿ ಹಿಡಿಯುವಂತಿದ್ದು, ವಚನ ಒಂದು ರೀತಿ ಹಲವು ಎನ್ನುವಂತೆ ಅತ್ಯಂತ ವಿಭಿನ್ನ, ವಿಶಿಷ್ಟ ವಿಶ್ಲೇಷಣಾತ್ಮಕ ಕೃತಿಯಾಗಿದೆ. – ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ

ಕಾರ್ಯಕ್ರಮ ಉದ್ಘಾಟಿಸಿದ ಎಸ್.ಕೆ. ಕಾಂತಾ ಮಾತನಾಡಿ, ಜ್ಞಾನಕ್ಕೆ ಪರಿಸರ, ಸಹವಾಸ ಮುಖ್ಯವಾಗಿದೆ. ಸಮಾಜಸೇವೆಯಿಂದಾಗಿ ಸಮಾಜ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಶರಣ ಚಳವಳಿ ಜಾತ್ಯಾತೀತ ಚಳವಳಿ. ಜನತೆಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ‘ವಚನ ಹೃದಯ’ ಕೃತಿ ಬಿಡುಗಡೆ ಮಾಡಿದ್ದು, ಸಮಾಜದ ವಿವಿಧ ಕಾಯಕವರ್ಗದವರನ್ನು ಸನ್ಮಾನಿಸಿರುವುದು ತುಂಬಾ ಮಹತ್ವದ ಕಾರ್ಯ ಎಂದು ವಿವರಿಸಿದರು.

ಕಾಂತಾ ಸಾಹೇಬರ ಕ್ರಾಂತಿಕಾರಿ ಮಾತುಗಳು;- ಕಲ್ಬುರ್ಗಿಯಲ್ಲಿ ಶರಣ ಬಿ.ಬಿ.ಪಾಟೀಲರ ಪ್ರಥಮ ಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಶಿವರಂಜನ್ ಸತ್ಯಂಪೇಟೆಯವರು ಬರೆದ “ವಚನ ಹೃದಯ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಮಾಜವನ್ನು ಎಲ್ಲಾ ರೀತಿಯಿಂದ ಹೊಲಸು ಮಾಡುವವರಿಗೆ ಸಮಾಜ ಗೌರವದಿಂದ ಕಾಣ್ತದೆ. ಅದೇ ಹೊಲಸನ್ನು ಸ್ವಚ್ಚಗೊಳಿಸುವವರನ್ನು ಕನಿಷ್ಟ ತಿಳಿದು ಅವರನ್ನು ಅಗೌರದಿಂದ ಕಾಣುತ್ತದೆ, ಇದು ಸಮಾಜದ ದುರಂತ. ಉಳ್ಳವರು ಯಾರೆಂದರೆ ಕಳ್ಳರು ಎನ್ನುವ ಮೂಲಕ ಉಳ್ಳವರು ದೇವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ ಎನ್ನುವ ವಚನದ ಮಾರ್ಮಿಕತೆಯನ್ನು ಎಳೆಎಳೆಯಾಗು ಬಿಡಿಸಿಟ್ಟರು. 

ಜಿಲ್ಲಾ ವೀರಶೈವ ಸಮಾಜ ಉಪಾಧ್ಯಕ್ಷ ಕಲ್ಯಾಣರಾವ ಪಾಟೀಲ ಮಳಖೇಡ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದ ಒಳಿತಿಗೆ ಬಡಿದಾಡಿದ ಪಾಟೀಲರು, ಬಸವಾದಿ ಶರಣರ ಆದರ್ಶದ ತತ್ವ ಅಳವಡಿಸಿಕೊಂಡಿದ್ದರು ಎಂದರು.

ಶರಣರು ಕಲ್ಲು, ಮಣ್ಣುಗಳ ದೇವರನ್ನು ನಂಬಲಿಲ್ಲ.‌ ಆದರೆ ತನ್ನ ತಾ ತಿಳಿಯುವುದೇ ದೇವರು ಎಂದು ಹೇಳಿದರು. ಶರಣರ ಸತ್ಪಥದಲ್ಲಿ ಸಾಗುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಅವರು ಕರೆ ನೀಡಿದರು.

ಮಾಜಿ ಶಾಸಕ ಅರುಣಾದೇವಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಪಾಟೀಲ ಅಷ್ಟಗಿ, ಹಣಮಂತ ಪೂಜಾರಿ, ಇಂದಿರಾ ಬಿ.ಬಿ. ಪಾಟೀಲ ವೇದಿಕೆಯಲ್ಲಿದ್ದರು. ಇದೇವೇಳೆಯಲ್ಲಿ ಅಂಬಾರಾಯ ಮಡಿವಾಳ, ಶ್ರೀಶೈಲ ಪಾಟೀಲ, ಚಂದ್ರಕಾಂತ ಹೆಡೆ, ರಾಧಾ ಸುರೇಶ, ಉಮೇಶ ಗೋಡಬೋಲೆ, ಲಕ್ಷ್ಮೀ ಸಂಗೋಳ್ಳಿ, ಶಿವಾನಂದ ಬಿರಾದಾರ, ಬಾಬುರಾವ ಜನವಾಡೆ, ಖ್ವಾಜಾ ಮೈನುದ್ದೀನ್, ಜಗದೀಶ ಗಾಜರೆ ಇತರರನ್ನು ಸನ್ಮಾನಿಸಲಾಯಿತು.

ಡಾ.‌ಪರಮೇಶ್ವರ ಶೆಟಕಾರ ನಿರೂಪಿಸಿದರು. ಡಾ. ಬಾಬುರಾವ ಶೇರಿಕಾರ ಪ್ರಾಸ್ತಾವಿಕ ಮಾತನಾಡಿದರು. ಡಾ. ಬಸವಂತ ಸಿ.ಪಾಟೀಲ ಸ್ವಾಗತಿಸಿದರು. ಸಂಗಮೇಶ ಶಾಸ್ತ್ರೀ ಪ್ರಾರ್ಥಿಸಿದರು.‌

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸುರೇಶ ಬಡಿಗೇರ, ಜಾಗತಿಕ ಲಿಂಗಾಯತ ಮಹಾಸಭಾದರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್, ಸತೀಶ ಸಜ್ಜನ್, ಶಿವಶರಣಪ್ಪ ದೇಗಾಂವ, ಬಸವರಾಜ ಮೊರಬದ, ಸಂಗಣ್ಣ ಗುಳಗಿ, ಹಣಮಂತರಾವ ಅಟ್ಟೂರ, ಆದಪ್ಪ ಬಗಲಿ, ಎಸ್.ಎಂ. ಪಟ್ಟಣಕರ ಇತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago