ಬಿಸಿ ಬಿಸಿ ಸುದ್ದಿ

ಕರೋನೊ ತಡೆಯಲು ಮಾಸ್ಕ್ ಧರಿಸುವುದು ಮುಖ್ಯ: ಪಿಎಸ್‌ಐ ಚೇತನ್

ಸುರಪುರ: ಅನೇಕ ರಾಷ್ಟ್ರಗಳಲ್ಲಿ ಕರೋನಾ ಎಂಬಾ ಮಹಾ ಮಾರಿ ರೋಗ ಹರಿಡಿ ಜನರು ಇದರಿಂದ ಬಳಲುತ್ತಿದ್ದು ಇತಂಹ ರೋಗದಿಂದ ಸಾವಿಗಿಡಾಗಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಎರುತ್ತಿದ್ದು ಈ ರೋಗವನ್ನು ತಡೆಯಲು ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಅವಶ್ಯವಾಗಿದೆ ಎಂದು ನಗರ ಠಾಣೆ ಪಿಎಸ್‌ಐ ಚೇತನ್ ತಿಳಿಸಿದರು.

ನಗರದ ರಂಗಂಪೇಟೆಯ ನಗರಸಭೆ ಶಾಖಾ ಕಚೇರಿಯಲ್ಲಿ ಪೌರ ಕಾರ್ಮಿಕರಿಗೆ ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ತಾವೆಲ್ಲ ಕಾರ್ಮಿಕರು ಇಡೀ ದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗುವಿರಿ,ನಿಮ್ಮ ಮೊದಲ ಆದ್ಯತೆ ಆರೋಗ್ಯದ ಕಡೆಗಿರಲಿ.ಮಾಸ್ಕ್ ಧರಿಸುವುದರಿಂದ ಕರೋನಾ ಮಾತ್ರವಲ್ಲದೆ ಅನೇಕ ಕಾಯಿಲೆಗಳನ್ನು ತಡೆಯಬಹುದಾಗಿದೆ.ಆದ್ದರಿಂದ ಸದಾಕಾಲ ಮಾಸ್ಕ್ ಧರಿಸಿ ಕೆಲಸ ಮಾಡುವಂತೆ ತಿಳಿಸಿದರು.

ಮುಖಂಡ ಮಲ್ಲು ಬಿಲ್ಲವ್ ಮಾತನಾಡಿ,ಕರೋನಾ ಎಂಬುದು ಜಗತ್ತಿನ ದೊಡ್ಡ ಭೂತವಾಗಿದೆ.ಈಗಾಗಲೆ ಈ ರೋಗಕ್ಕೆ ನಾಲ್ಕು ಸಾವಿರಕ್ಕು ಹೆಚ್ಚು ಜನ ಬಲಿಯಾಗಿದ್ದಲ್ಲದೆ,ಒಮದು ಲಕ್ಷದ ಇಪ್ಪತ್ತು ಸಾವಿರಕ್ಕು ಅಧಿಕ ಜನ ಕರೋನಾ ವೈರಸ್ ನಿಂದ ಬಳಲುತ್ತಿದ್ದಾರೆ.ಅದು ಮನುಷ್ಯನಿಂದ ಮನುಷ್ಯನಿಗೆ ಬಹು ಬೇಗ ಅರಡುತ್ತದೆ.ಆದ್ದರಿಂದ ಪೌರಾಕಾರ್ಮಿಕರಾದ ತಾವೆಲ್ಲರು ನಿತ್ಯವು ಸಾರ್ವಜನಿಕ ಸ್ಥಳಗಳಲ್ಲಿಯೆ ಹೆಚ್ಚಾಗಿ ಕೆಲಸ ಮಾಡುವುದರಿಂದ ನಿತ್ಯವು ಮಾಸ್ಕ್ ಧರಿಸಿ ಕೆಲಸ ಮಾಡಿದರೆ ಕರೋನಾದಂತಹ ಅನೇಕ ರೋಗಗಳಿಂದ ಬಚಾವಾಗಬಹುದಾಗಿದೆ.ಆದ್ದರಿಂದ ಎಲ್ಲರಿಗೂ ಮಾಸ್ಕ್ ವಿತರಿಸಲಾಗುತ್ತಿದ್ದು.ತಪ್ಪದೆ ಮಾಸ್ಕ್ ವಿತರಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ನಗರಸಭೆ ನೈರ್ಮಲ್ಯ ನಿರೀಕ್ಷಕ ಲಕ್ಷ್ಮಣ ಕಟ್ಟಿಮನಿ ಮಾತನಾಡಿ,ಈಗಾಲೆ ನಗರಸಭೆಯಿಂದ ಕೈಗಳಿಗೆ ಮತ್ತು ಕಾಲುಗಳಿಗೆ ಧರಿಸಲು ರಕ್ಷಾ ಕವಚಗಳನ್ನು ನೀಡಲಾಗಿದೆ.ಅವುಗಳನ್ನು ಧರಿಸಿ ಜೊತೆಗೆ ಮಾಸ್ಕ್ ಧರಿಸಿ ನಿಮ್ಮ ಕೆಲಸದಲ್ಲಿ ತೊಡಗಿ,ಇದರಿಂದ ಯಾವುದೆ ರೋಗರುಜಿನಗಳು ಬರುವುದನ್ನು ತಡೆಯುವ ಸಾಧ್ಯತೆಯಿದೆ ಎಂದರು.

ಇದೇ ಸಂದರ್ಭದಲ್ಲಿ ಪಿಎಸ್‌ಐ ಚೇತನ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ಎಲ್ಲಾ ಕಾರ್ಮಿಕರಿಗೆ ಮಾಸ್ಕ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ಆವಂಟಿ,ಮಲ್ಕಪ್ಪಗೌಡ ಬಿರಾದಾರ, ದೇವೆಂದ್ರಪ್ಪ ಸುಗೂರ, ಶರಣಪ್ಪ ದಫೇದಾರ,ರತ್ನಪ್ಪ ಹೊಸಮನಿ, ಚಂದ್ರಶೇಖರ, ಶೇಖರ, ಗುರಪ್ಪ, ಶರಣಪ್ಪ, ಬಸಪ್ಪ, ಗೌಡಮ್ಮ,ಎಲ್ಲಮ್ಮ,ನೀಲಮ್ಮ,ನಾಗಮ್ಮ,ಶರಣಮ್ಮ,ರೇಣುಕಮ್ಮ,ಮಲ್ಲಮ್ಮ ಮತ್ತು ಜಯಮ್ಮ ಸೇರಿದಂತೆ ಅನೇಕರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago