ಬಿಸಿ ಬಿಸಿ ಸುದ್ದಿ

ಕರೋನಾ ರೋಗದ ಬಗ್ಗೆ ಭಯಬೇಡ, ಮುಂಜಾಗೃತೆ ವಹಿಸಿ: ಸುರೇಶ ಮೇಕಿನ್

ಶಹಾಬಾದ: ಕರೋನಾ ರೋಗದ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅವಶ್ಯಕತೆಯಿಲ್ಲ. ಮುಂಜಾಗೃತ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಿವುದರ ಜತೆಗೆ ಜನಬೀಡಾದ ಪ್ರದೇಶಗಳಲ್ಲಿ ಆದಷ್ಟು ಭಾಗವಹಿಸುವುದು ಕಡಿಮೆ ಮಾಡಿದರೇ ರೋಗ ಬಾರದಂತೆ ತಡೆಗಟ್ಟಬಹುದು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಸುರೇಶ ಮೇಕಿನ್ ಹೇಳಿದರು.

ಅವರು ಶುಕ್ರವಾರ ನಗರಸಭೆಯ ಸಭಾಂಗಣದಲ್ಲಿ ತಾಲೂಕಾ ಆರೋಗ್ಯ ಇಲಾಖೆ ಮತ್ತು ನಗರಸಭೆ ವತಿಯಿಂದ ಆಯೋಜಿಸಲಾದ ಕರೋನಾ ಸೋಂಕಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅನೇಕ ರಾಷ್ಟ್ರಗಲ್ಲಿ ಕರೋನಾ ಎಂಬ ಮಹಾಮಾರಿ ರೋಗ ಹರಡಿ ಜನರು ಇದರಿಂದ ಬಳಲುತ್ತಿದ್ದು, ಇಂತಹ ರೋಗದಿಂದ ಸಾವಿಗೀಡಾಗಿರುವವರ ಸಂಖ್ಯೆ ದಿನದಿಂದ ದಿನ ಏರುತ್ತಿದ್ದು ಈ ರೋಗವನ್ನು ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅವಶ್ಯಕ.ಅಲ್ಲದೇ ತಣ್ಣನೇಯ ಪದಾರ್ಥಗಳನ್ನು ಬಳಸದೇ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸತಕ್ಕದ್ದು.ಯಾರಿಗಾದರೂ ನೆಗಡಿ, ಗಂಟಲು ನೋವು, ಉಸಿರಾಟದ ತೊಂದರೆ ಹಾಗೂ ಸೀನುಗಳು ಬರುವ ಲಕ್ಷಣಗಳು ಕಂಡು ಬಂದರೆ ಆದಷ್ಟು ಬೇಗನೆ ಸ್ಥಳೀಯ ಆಸ್ಪತ್ರೆಗೆ ಬೇಟಿ ನೀಡಿ, ಚಿಕಿತ್ಸೆಗೆ ಒಳಗಾಗತಕ್ಕದ್ದು. ಇದು ಒಬ್ಬರಿಂದ ಒಬ್ಬರಿಗೆ ಬಹು ಬೇಗ ಹರಡುವುದರಿಂದ ಇದನ್ನು ನಿಯಂತ್ರಣ ಮಾಡಲು ಮಾಸ್ಕ್ ಧರಿಸುವುದು, ಕೈಗಳನ್ನು ಶುಚಿತ್ವವಾಗಿ ತೊಳೆದುಕೊಳ್ಳುವುದು.ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ಹೇಳಿದರು.

ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಗರಸಭೆಯಿಂದ ಆಟೋಗಳ ಧವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವಾರ್ಡ ಮತ್ತು ಮುಖ್ಯ ಬೀದಿಗಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ.ಈಗಾಗಲೇ ನಗರಸಭೆಯ ಪೌರಾಕಾರ್ಮಿಕರಿಗೆ ಕೈಗಳಿಗೆ,ಕಾಲುಗಳಿಗೆ ಧರಿಸಲು ರಕ್ಷಾ ಕವಚಗಳು ನೀಡುವುದರ ಜತೆಗೆ ಮಾಸ್ಕ್‌ಗಳನ್ನು ನೀಡಲಾಗಿದೆ.ಇವುಗಳನ್ನು ಧರಿಯೇ ನಿಮ್ಮ ಕೆಲಸದಲ್ಲಿ ತೊಡಗಿ, ಇದರಿಂದ ರೋಗ ಬರದಂತೆ ತಡೆಯುವ ಸಾಧ್ಯತೆಯಿದೆ ಎಂದು ತಿಳುವಳಿಕೆ ಮೂಡಿಸಲಾಗಿದೆ. – ಶಿವರಾಜಕುಮಾರ ನೈರ್ಮಲ್ಯ ನಿರೀಕ್ಷಕ ನಗರಸಭೆ ಶಹಾಬಾದ.

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಈಗಾಗಲೇ ದೇಶದಲ್ಲಿಯೇ ಕರೋನಾ ರೋಗಕ್ಕೆ ಕಲಬುರಗಿ ಜಿಲ್ಲೆಯ ಒಬ್ಬ ವೃದ್ಧ ಬಲಲಿಯಾಗಿದ್ದಾರೆ.ಆದ್ದರಿಂದ ಮುಂಜಾಗೃತ ಕ್ರಮವಾಗಿ ರೋಗ ಹರಡದಂತೆ ಜಿಲ್ಲಾಡಳಿತ ಮದುವೆ ಸಮಾರಂಭ,ಸಾರ್ವಜನಿಕ ಕಾರ್ಯಕ್ರಮಗಳು, ಚಲನಚಿತ್ರ ಮಂದಿರ,ಮಾಹೋಲಗಳು ಸೇರಿದಂತೆ ಜನಬೀಡು ಉಂಟಾಗುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.ಅಲ್ಲದೇ ನಗರಸಭೆಯ ಸದಸ್ಯರು ಮತ್ತು ಸಾರ್ವಜನಿಕರು ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸುತ್ತಮುತ್ತಲಿನ ಜನರಿಗೆ ತಿಳುವಳಿಕೆ ಮೂಡಿಸಿದರೇ ಈ ರೋಗದಂತೆ ಬಚಾವ್ ಆಗಲು ಸಾಧ್ಯವಾಗುತ್ತದೆ.ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ನಗರಸಭೆಯ ಎಇಇ ಪುರುಷೋತ್ತಮ, ಪಿಐ ಅಮರೇಶ.ಬಿ, ವೈದ್ಯಾಧಿಕಾರಿ ಡಾ.ಸಜ್ಜನ್, ನಗರಸಭೆಯ ಸದಸ್ಯರಾದ ರವಿ ರಾಠೋಡ, ಡಾ.ಅಹ್ಮದ್, ಪರ್ವಾತಿ ಪವಾರ, ಸಾಬೇರಾ ಬೇಗಂ, ಶರಣು ಪಗಲಾಪೂರ, ಕಿರಿಯ ಆರೋಗ್ಯ ನಿರೀಕ್ಷಕರಾದ ಶರಣು, ರಾಜೇಶ, ಎಡಿಬಿ ಎಇಇ ರೇವಣಸಿದ್ದಪ್ಪ ಕುಂಬಾರ, ನಗರಸಭೆಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago