ಬಿಸಿ ಬಿಸಿ ಸುದ್ದಿ

ಕೇಂದ್ರಿಯ ವಿವಿಯಿಂದ ಐವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಅನುಮೋದನೆ

ಕಲಬುರಗಿ: ರಾಜ್ಯದ ಪ್ರತಿಷ್ಠಿತ ಏಕೈಕ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯು ಸಾಧಕರಿಗೆಗೌರವಡಾಕ್ಟರೇಟ್ ನೀಡಲು ಸಲ್ಲಿಸಿದ ಪ್ರಸ್ತಾವನೆಯನ್ನು ಭಾರತದಘನವೆತ್ತ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಅನುಮೋದನಾ ಪತ್ರವು ಮಾರ್ಚ್ ೧೮ ರಂದು ವಿಶ್ವವಿದ್ಯಾನಿಲಯಕ್ಕೆತಲುಪಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯಅವರು ತಿಳಿಸಿದರು.

ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯವುತನ್ನಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ತನ್ನ ಮುಂಬರುವಘಟಿಕೋತ್ಸವದಲ್ಲಿಗೌರವಡಾಕ್ಟರೇಟ್ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ವಿಶ್ವವಿದ್ಯಾಲಯವು ಶಿಫಾರಸ್ಸು ಮಾಡಿದ ಹೆಸರುಗಳಲ್ಲಿ ಸಾಧಕರಾದ ಡಾ.ಎಂ.ಜಿ.ಬಿರಾದಾರ, ಡಾ.ಎಸ್.ಎಲ್.ಭೈರಪ್ಪ, ಡಾ.ಚೆನ್ನವೀರಕಣವಿ, ಸಾಲುಮರದತಿಮ್ಮಕ್ಕ, ಕೆ.ಶಿವನ್ ಅವರಿಗೆಗೌರವಡಾಕ್ಟರೇಟ್ ನೀಡಲು ಭಾರತದಘನವೆತ್ತ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಡಾ.ಎಂ.ಜಿ.ಬಿರಾದಾರ : ೧೯೩೩ರಲ್ಲಿ ಬಿಜಾಪುರಜಿಲ್ಲೆಯ ಬಬಲೇಶ್ವರದ ಕೃಷಿ ಕುಟುಂಬದಲ್ಲಿ ಜನಿಸಿದ ಮಲ್ಲನಗೌಡಗುರುಗೌಡ ಬಿರಾದಾರರು, ೧೯೭೦ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವೃತ್ತಿಜೀವನ ಆರಂಭಿಸಿ ಜಾನಪದ ಸಂಗ್ರಹ, ಹಸ್ತಪ್ರತಿ ಸಂಗ್ರಹ, ದಾಖಲಾತಿ ಮಾಡುತ್ತಾ ೭೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕಲಬುರ್ಗಿಯಲ್ಲಿಕನ್ನಡವನ್ನುಕಟ್ಟುವ, ಬೆಳಸುವ ಅನನ್ಯ ಸೇವೆಯನ್ನು ಮಾಡಿದ್ದಾರೆ.

ಡಾ.ಎಸ್.ಎಲ್.ಭೈರಪ್ಪ : ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರು ೧೯೩೪ರಲ್ಲಿ ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದರು. ಕನ್ನಡದ ಸಣ್ಣಕಥೆ, ಸಂಶೋಧನೆ ಮತ್ತು ವಿಮರ್ಶಾಕ್ಷೇತ್ರದಲ್ಲಿ ಕೆಲಸ ಮಾಡಿದಇವರು ೨೫ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ದೇಶವಿದೇಶಗಳಲ್ಲಿ ಕೀರ್ತಿ ಪಡೆದಿದ್ದಾರೆ. ಇವರ ಕಾದಂಬರಿಗಳು ಇಂಗ್ಲೀಷ್ ಸೇರಿದಂತೆ ಭಾರತದ ಅನೇಕ ಭಾಷೆಗಳಲ್ಲಿ ಅನುವಾದಕಂಡಿದೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದಇವರ ಕಾದಂಬರಿಗಳು ಚಲನಚಿತ್ರವಾಗಿಕನ್ನಡಿಗರ ಮನಸ್ಸನ್ನುಗೆದ್ದಿದೆ. ಶ್ರೇಷ್ಠ ಕಾದಂಬರಿಕಾರರಾದಇವರಿಗೆಕೇಂದ್ರ ಸಾಹಿತ್ಯಅಕಾಡೆಮಿ ಮುಂತಾದ ಸಂಸ್ಥೆಗಳ ಗೌರವದೊರಕಿದೆ.

ಡಾ.ಚೆನ್ನವೀರಕಣವಿ : ಗದಗಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರಲ್ಲಿ ಜನಿಸಿದ ಡಾ.ಚೆನ್ನವೀರಕಣವಿಯವರು ಸೌಜನ್ಯದ, ಮೃದುಮಾತಿನಅನನ್ಯ ಕವಿ. ಅವರ ಕಾವ್ಯಗಳು ಕನ್ನಡಿಗರಿಗೆ ಅಚ್ಚುಮೆಚ್ಚು. ಕನ್ನಡದ ಮಹತ್ವದಕವಿಯೆಂದುಖ್ಯಾತರಾಗಿರುವಕಣವಿಯವರ ಸಂವೇದನಾಶೀಲತೆ, ಭಾವಸ್ಪಂದನೆ, ಪ್ರಕೃತಿಪ್ರೇಮಅವರ ಕಾವ್ಯಗಳ ಜೀವಧ್ವನಿಯಾಗಿದೆ. ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿಗೆ ಗೌರವತಂದಿರುವಇವರುಕನ್ನಡದಜನಪ್ರಿಯ ಕವಿಗಳಾಗಿದ್ದಾರೆ.

ಸಾಲುಮರದತಿಮ್ಮಕ್ಕ: ಸಾಲುಮರಅಥವಾಆಲದಮರದತಿಮ್ಮಕ್ಕಎಂದು ಪ್ರಸಿದ್ಧರಾಗಿರುವ ಇವರು ೧೯೧೦ರಲ್ಲಿ ತುಮಕೂರುಜಿಲ್ಲೆಯಗುಬ್ಬಿತಾಲೂಕಿನಲ್ಲಿ ಜನಿಸಿದ್ದಾರೆ. ೩೮೫ ಆಲದಮರಗಳನ್ನು ೪ ಕಿಲೋಮೀಟರ್‌ ರಹದಾರಿಯ ಅಕ್ಕಪಕ್ಕದಲ್ಲಿ ನೆಟ್ಟು ಅವುಗಳಿಗೆ ನೀರೆರೆದು ಬೆಳೆಸಿದ ಮಹಾತಾಯಿ. ಅಲ್ಲದೆ ೮೦೦೦ ಇತರ ಗಿಡಗಳನ್ನು ನೆಟ್ಟು ಪ್ರಕೃತಿಯ ಸಮತೋಲನವನ್ನುಕಾಪಾಡಿಜನಪರಜೀವತರ ಕಾಳಜಿಯನ್ನು ತೋರಿದ್ದಾರೆ. ೨೦೧೯ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದಇವರು ಶತಾಯುಷಿಗಳಾಗಿದ್ದಾರೆ.

ಕೆ.ಶಿವನ್ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಚೇರಮನ್ನರಾದಕೈಲಾಸವಡಿವೂ ಶಿವನ್ ಅವರು ೧೯೫೭ರಲ್ಲಿ ಕನ್ಯಾಕುಮಾರಿಜಿಲ್ಲೆಯ ಸರಕ್ಕವಿಲೈನಲ್ಲಿ ಜನಿಸಿದ್ದಾರೆ. ಬಡಕುಟುಂಬದಿಂದ ಬಂದಇವರು ನಂತರ ವಿಕ್ರಮ ಸಾರಾಬಾಯಿ ಬಾಹ್ಯಾಕಾಶ ಸಂಸ್ಥೆ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಅಧ್ಯಯನ ಮಾಡಿದ್ದಾರೆ. ಬಾಹ್ಯಕಾಶದ ’ಚಂದ್ರಯಾನ-೨’ರ ರುವಾರಿಯಾದಇವರು ಭಾರತ ಹೆಮ್ಮೆಯಪಡುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದಾರೆ.

emedialine

View Comments

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

1 hour ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago