ಆಳಂದ: ಪಟ್ಟಣದಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಮಾನಿ ಬಳಗದವರಿಂದ ಕೊರೋನಾ ವೈರಸ್‍ನಿಂದ ರಕ್ಷಿಸಿಕೊಳ್ಳಲು ಜನರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.
ಪಟ್ಟಣದ ಶ್ರೀರಾಮ ಮಾರುಕಟ್ಟೆ, ಗಣೇಶ ಚೌಕ್, ಪುರಸಭೆ ಕಚೇರಿ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಶಾಸಕರ ಅಭಿಮಾನಿಗಳು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಜನರಿಗೆ ಮತ್ತು ಪುರಸಭೆಯ ಪೌರಕಾರ್ಮಿಕರಿಗೆ ಮಾಸ್ಕ್ ವಿತರಣೆ ಮಾಡಿದರು.
ಜಗತ್ತನ್ನು ಆವರಿಸಿರುವ ಭಯಾನಕ ವೈರಾಣು ಕೊರೋನಾ ವೈರಸ್ ವಿರುದ್ಧ ಎಲ್ಲರು ಹೋರಾಡುವುದು ಅಗತ್ಯವಾಗಿದೆ ಜನತೆ ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮಗಳನ್ನು ಪಾಲಿಸಿ ಸರ್ಕಾರದ ಜೊತೆ, ಅಧಿಕಾರಿಗಳ ಜೊತೆ ಕೈ ಜೋಡಿಸಿ ಸಹಕಾರ ನೀಡುವುದು ತುರ್ತು ಕೆಲಸವಾಗಬೇಕಿದೆ ಎಂದು ಜನರಿಗೆ ಮನವರಿಕೆ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಂಕಷ್ಟದ ಸಮಯದಲ್ಲಿ ಜನತೆಯ ಒಳಿತಿಗಾಗಿ ಎಲ್ಲ ಪ್ರಯತ್ನವನ್ನು ಮಾಡುತ್ತಿವೆ. ವೈದ್ಯಕೀಯ ಲೋಕವು ಈ ವೈರಸಗೆ ಮದ್ದು ಕಂಡು ಹಿಡಿಯಲು ನಿರಂತರವಾಗಿ ಯತ್ನಿಸುತ್ತಿದೆ ಆದರೂ ಕೂಡ ನಾವು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಕೆಲವು ನಿಯಮಗಳನ್ನು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಳ್ಳುವುದರಿಂದ ಈ ವೈರಸ್‍ನಿಂದ ಮುಕ್ತಿ ಪಡೆಯಬಹುದಾಗಿದೆ ಜೊತೆಗೆ ದಿನನಿತ್ಯ ನಿಯಮಿತವಾಗಿ ಕೈಗಳನ್ನು ತೊಳೆಯಬೇಕು ಎಂದು ಜನರಿಗೆ ಮಾಹಿತಿ ನೀಡಿದರು.
ಗಿರೀಶ ತಡಕಲ್, ದಯಾನಂದ ಮೂಲಗೆ, ಮಹೇಶ ಮುನ್ನೊಳ್ಳಿ, ಮಹೇಶ ಗೌಳಿ, ಅರವಿಂದ ನಾಟೀಕಾರ, ಮಂಜುನಾಥ ಗುತ್ತೇದಾರ, ತಿಪ್ಪೇರುದ್ರ ಮಠಪತಿ ಮಾಸ್ಕ್ ನೀಡಿದರು. ಈ ಸಂದರ್ಭದಲ್ಲಿ ಮುಬಾರಕ ಮೂಲಗೆ, ಮಹಾಂತೇಶ ಪೂಜಾರಿ, ರೋಹಿತ ಬಂಡಗಾರ, ರವಿ ಪಾಟೀಲ, ಓಂಕಾರ ಕಾಂಬಳೆ, ಮೋಹನ ಪರೀಟ್, ಗಣೇಶ ಗೌಳಿ, ಖಂಡು ಬಲ್ವಾನಿ , ಗಣೇಶ ಭೋಸಲೆ, ಉಮೇಶ ಭೋಸಲೆ, ಶ್ಯಾಮ ಉಮರೆ, ಕಾರ್ತಿಕ ರಾಠೋಡ, ಅಮೋಲ ಘನಾತೆ , ಶುಭಂ ರಂಗದಾಳ, ಭೀಮಾ ಜಾಧವ, ನಿತೀನ ಬಲ್ವಾನಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…