ಆಳಂದ: ತಾಲೂಕಿನ ಹಿತ್ತಲಶಿರೂರ ಗ್ರಾಮದಲ್ಲಿ ಕೊರೋನಾ ಶಂಕಿತನೊಬ್ಬ ಪುಣೆ ಆಸ್ಪತ್ರೆಯಿಂದ ಪರಾರಿಯಾಗಿ ಬಂದ ಘಟನೆ ಇತ್ತೀಚಿಗಷ್ಟೇ ಭಾರೀ ಸದ್ದು ಮಾಡಿತ್ತು. ಆದರೆ ಮಂಗಳವಾರ ರೈತರೊಬ್ಬರು ಹೊಲದಿಂದ ಎತ್ತನಗಾಡಿಯಲ್ಲಿ ಬರುವಾಗ ಮುಖಕ್ಕೆ ಹೆಲ್ಮೆಟ್ ಧರಿಸಿಕೊಂಡು ಬರುತ್ತಿರುವುದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‌ಐ ಸುರೇಶಕುಮಾರ ಚವ್ಹಾಣ ತಾವೇ ಸ್ವತ: ನಿಂತು ರೈತ ಲಕ್ಕಪ್ಪ ಕೊರಬಾ ಅವರಿಗೆ ಸೆಲ್ಯೂಟ್ ನೀಡಿ ಗೌರವ ಸಲ್ಲಿಸಿದರು.
ಶಾಲೆ ಕಲಿತ ಅಕ್ಷರಸ್ಥರಿಗೆ ಇರದೇ ಇರುವ ಜ್ಞಾನ ರೈತರೊಬ್ಬರಿಗೆ ಇರುವುದನ್ನು ಕಂಡು ಮೂಕವಿಸ್ಮಿತನಾದೆ. ಮಾತು ಬರದೇ ಆ ಮಹಾಶಯರಿಗೆ ಗೌರವ ಸಲ್ಲಿಸಿದೆ ಎಂದು ಹೇಳುತ್ತಾರೆ ಪಿಎಸ್‌ಐ ಸುರೇಶಕುಮಾರ ಚವ್ಹಾಣ. ಇನ್ನೂ ರೈತ ಲಕ್ಕಪ್ಪ ಕೊರಬಾ ಕೂಡಾ ಮಾತನಾಡಿ, ಆರಕ್ಷಕರು ನಮ್ಮ ಮತ್ತು ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಈ ದೇಶದ ಸಾಮಾನ್ಯ ನಾಗರಿಕನಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೇಳಿದ ಕರ್ತವ್ಯವನ್ನು ತಪ್ಪದೇ ಪಾಲಿಸುತ್ತೇನೆ. ನನಗೆ ನನ್ನ ಜನರ ಮತ್ತು ದೇಶದ ಕಾಳಜಿ ಮುಖ್ಯ ಹೀಗಾಗಿ ಎಂತುಹುದೇ ಸಂದರ್ಭ ಬಂದರೂ ಈ ಸಮಯದಲ್ಲಿ ಸರ್ಕಾರದ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಪಿಎಸ್‌ಐ ಮತ್ತು ರೈತನ ನಡುವೆ ನಡೆದ ಈ ಮಾತುಕತೆಯ ಚಿತ್ರದ ದೃಶ್ಯ ಮತ್ತು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ದೇಶ ಗಂಡಾಂತರದ ಪರಿಸ್ಥಿತಿ ಎದುರಿಸುತ್ತಿರುವ ಈ ಸ್ಥಿತಿಯಲ್ಲಿ ಎಲ್ಲರೂ ಪಿಎಸ್‌ಐ ಸುರೇಶಕುಮಾರ ಚವ್ಹಾಣ ಹಾಗೂ ರೈತ ಲಕ್ಕಪ್ಪ ಕೊರಬಾ ಹಾಗೆ ನಡೆದುಕೊಂಡರೇ ಎಷ್ಟು ಒಳ್ಳೆಯದು ಅಲ್ವಾ?
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…