ಶಹಾಬಾದ: ಕೋವಿಡ್ 19 ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ 21 ದಿನಗಳ ಕಾಲ ಭಾರತ ಸರ್ಕಾರ ದೇಶವ್ಯಾಪಿ ಲಾಕ್ ಡೌನ್ ಆದೇಶ ಹೊರಡಿಸಿ, ಮನೆಯಿಂದ ಯಾರು ಹೊರಗಡೆ ಬರದಂತೆ ಮನವಿ ಮಾಡಿದರೂ ನಗರದ ಕೆಲವು ಪಡ್ಡೆ ಹುಡುಗರು ವಿನಾಕಾರಣ ರಸ್ತೆಯ ಮೇಲೆ ಬರುತ್ತಿರುವುದನ್ನು ಕಂಡ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಸುಮಾರು ಹತ್ತಾರು ದಿನಗಳಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ಇದರ ತೀವ್ರತೆ ಬಗ್ಗೆ ತಿಳಿಹೇಳಲಾಗಿದ್ದರೂ, ಕೆಲವು ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.ಅಲ್ಲದೇ ತಾಲೂಕಾಢಳಿತದ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ.ಆದ್ದರಿಂದ ಅವರಿಗೆ ಚಳಿ ಬಿಡಿಸಲು ತಹಸೀಲ್ದಾರ ಸುರೇಶ ವರ್ಮಾ,ಡಿವಾಯ್‍ಎಸ್‍ಪಿ ವೆಂಕನಗೌಡ ಪಾಟೀಲ,ಪಿಐ ಅಮರೇಶ.ಬಿ ಹಾಗೂ ಪಿಎಸ್‍ಐ ಮಹಾಂತೇಶ ಮತ್ತು ಯಲ್ಲಮ್ಮ ಅವರು ಸ್ವತಃ ತಾವೇ ರಸ್ತೆಯಗೆ ಇಳಿದು ಲಾಠಿ ರುಚಿ ತೋರಿಸಿ, ಮನೆಗೆ ತೆರಳುವಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ಬುಧವಾರ ನಗರದ ಮುಖ್ಯ ರಸ್ಯೆಗಳು, ವೃತ್ತಗಳು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ವಾಹನಗಳಿಲ್ಲದೇ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.ಸಮೀಪ್ ದೇವನತೆಗನೂರ ಗ್ರಾಮದಲ್ಲಿ ಜನರು ಗುಂಪು ಗುಂಪಾಗಿ ಇರುವುದನ್ನು ಕಂಡು ತಹಸೀಲ್ದಾರ ಹಾಗೂ ಪೊಲಿಸ್ ಅಧಿಕಾರಿಗಳು ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಹೋಗುವಂತೆ ಮಾಡಿದ್ದಾರೆ.ಯಾವುದೇ ಕಾರಣಕ್ಕೂ ಜನರು ಕಟ್ಟೆಯ ಮೇಲೆ ಕೂಡುವುದು, ಇಸ್ಪೀಟ್ ಆಡುವುದು ಕಂಡರೆ ಥಳಿಸಿ, ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೆಡಿಕಲ್ ಅಂಗಡಿ ಮಾತ್ರ ಬಿಟ್ಟರೇ ತರಕಾರಿ, ಹಣ್ಣು ಹಾಗೂ ಹಾಲಿನ ಅಂಗಡಿಗಳು 9 ಗಂಟೆಗೆ ಬಂದ ಮಾಡಲಾಗಿತ್ತು.ಇತ್ತ
ನಗರಸಭೆಯ ಆರೋಗ್ಯ ನಿರೀಕ್ಷಕರು ಹಾಗೂ ಪೌರಾಕಾರ್ಮಿಕರು ನಗರದಲ್ಲೇ ಸಂಚರಿಸಿ ಸ್ವಚ್ಛತೆ ಕಡೆಗೆ ಗಮನಹರಿಸುತ್ತಿದ್ದರು.
ಡಿವಾಯ್‍ಎಸ್‍ಪಿ ವೆಂಕನಗೌಡ ಪಾಟೀಲ, ಪಿಐ ಅಮರೇಶ.ಬಿ ನೇತೃತ್ವದಲ್ಲಿ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಗರದ ಪ್ರತಿ ವೃತ್ತಗಳಲ್ಲಿ, ಮುಖ್ಯ ಬೀದಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮುಖ್ಯ ವೃತ್ತಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…