ಶಹಾಬಾದ: ಕೊರೊನಾ ವೈರಸ್ ಹರಡದಂತೆ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಿ. ಯಾವುದಕ್ಕೂ ಹಿಂಜರಿಯದೇ ಬೇಕಾ ಬಿಟ್ಟಿ ತಿರುಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೂ ತಾಲೂಕಿನಲ್ಲಿ ಕೊರೊನಾ ರೋಗ ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡು ಹೇಳಿದರು.
ಅವರು ಗುರುವಾರ ನಗರದ ತಹಸೀಲ್ದಾರ ಕಛೇರಿಯಲ್ಲಿ ಕೊರೊನಾ ವೈರಸ್ ಹರಡದಂತೆ ಕೈಗೊಳ್ಳಲಾದ ಕ್ರಮಗಳ ಕುರಿತ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.ಅಲ್ಲದೇ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಮುಗಿದು ಮನೆಯಲ್ಲೇ ಇರಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರೂ, ಜನರು ಈ ಬಗ್ಗೆ ಗಂಭೀರತೆ ತೆಗದುಕೊಂಡಿಲ್ಲ. ಈ ರೀತಿಯಾದರೆ ಗಂಡಾಂತರ ಉಂಟಾಗುತ್ತದೆ.ಆದ್ದರಿಂದ ಸಾರ್ವಜನಿಕರು ಕೊರೊನಾದಿಂದ ನಿಮ್ಮ ಕುಟುಂಬ ಹಾಗೂ ತಾವು ಉಳಿಯಬೇಕಾದರೇ ಹೊರಗಡೆ ಬರದೇ ಮನೆಯಲ್ಲಿರಿ ಎಂದರು.
ಮಹಾಮಾರಿ ಹರಡದಂತೆ ತಡೆಗಟ್ಟಲು ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಮುಚ್ಚಿ, ಅದನ್ನು ಸರಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿದೆ.ಅಲ್ಲದೇ ಕೆಲವು ಜನರಿಗೆ ಅಲ್ಲಿ ಅವಕಾಶ ನೀಡಲಾಗಿದೆ.ಇನ್ನುಳಿದ ಬಡ ವ್ಯಾಪರಸ್ಥರಿಗೆ ಶಾಸಕರು ೨೦ ತಳ್ಳೋ ಗಾಡಿಯನ್ನು ನೀಡಲು ಒಪ್ಪಿದ್ದಾರೆ.ಅದನ್ನು ಪ್ರತಿ ವಾರ್ಡಗಳಿಗೆ ತೆರಳಿ ತರಕಾರಿ ಹಾಗೂ ಹಣ್ಣು ಮಾರಾಟ ಮಾಡಬಹುದು. -ಸುರೇಶ ವರ್ಮಾ ತಹಸೀಲ್ದಾರ.
ಅಲ್ಲದೇ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಆಗುತ್ತಿರುವುದರಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.ಜನರಿಗೆ ಎಷ್ಟೇ ತಿಳಿಸಿದರೂ ಅಸಡ್ಡೆ ತೋರುತ್ತಿದ್ದಾರೆ.ಆದ್ದರಿಂದ ಬಿವಿಎಮ್ ಆಟದ ಮೈದಾನದಲ್ಲಿ ತರಕಾರಿ ಹಾಗೂ ಹಣ್ಣು ಮಾರಾಟ ಮಾಡಲು ಆದೇಶಿಸಲಾಗಿತ್ತು.ಆದರೆ ಅಲ್ಲಿ ಮಾರಾಟಗಾರರು ಮಾರಾಟ ಮಾಡಲು ಒಪ್ಪುತ್ತಿಲ್ಲ ಎಂದು ತಹಸೀಲ್ದಾರ ನನ್ನ ಗಮನಕ್ಕೆ ತಂದಿದ್ದಾರೆ. ತರಕಾರಿ ಮಾರಾಟಗಾರರೊಂದಿಗೆ ಮಾತನಾಡಿ, ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಕೆಲವು ಕೋಣೆಗಳನ್ನು ನೀಡಲಾಗುತ್ತದೆ.ಅಲ್ಲದೇ ಅಂತರ ಕಾಪಾಡಿಕೊಂಡು ತರಕಾರಿ ಮಾರಾಟ ಮಾಡಲು ಒಪ್ಪಿಕೊಂಡಿದ್ದಾರೆ ಎಂದರು.
ಜಿಪಂ ಸದಸ್ಯ ಅಶೋಕ ಸಗರ,ತಹಸೀಲ್ದಾರ ಸುರೇಶ ವರ್ಮಾ,ಡಿವಾಯ್‌ಎಸ್‌ಪಿ ವೆಂಕನಗೌಡ.ಎನ್.ಪಾಟೀಲ, ಪಿಐ ಅಮರೇಶ.ಬಿ, ಅಣವೀರ ಇಂಗಿನಶೆಟ್ಟಿ,ಅರುಣ ಪಟ್ಟಣಕರ್, ನಾಗರಾಜ ಮೇಲಗಿರಿ, ಸದಾನಂದ ಕುಂಬಾರ,ಭೀಮಣ್ಣ ಖಂಡ್ರೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…