ಬಿಸಿ ಬಿಸಿ ಸುದ್ದಿ

ಮದ್ದೆ ಇಲ್ಲದ ರೋಗ ಕೊರೊನಾ ಇದಕ್ಕೆ ಸೋಶಿಯಲ್ ಡಿಸ್ಟೆನ್ಸ್ ಮದ್ದು: ರಾಜುಗೌಡ

ಸುರಪುರ: ಕೊರೊನಾ ವೈರಸ್ ಎಂಬುದು ಒಂದು ಸಾಂಕ್ರಾಮಿಕ ರೋಗವಾಗಿದ್ದು,ಮಹಾಮಾರಿಯಂತೆ ಇಂದು ಜಗತ್ತನ್ನು ಕಾಡುತ್ತಿದೆ,ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ.ಆದ್ದರಿಂದ ಯಾರು ವಿನಾ ಕಾರಣ ಅನಾವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ,ಇದೊಂದು ಮದ್ದೆ ಇಲ್ಲದ ರೊಗವಾಗಿದ್ದು ಸೋಶಿಯಲ್ ಡಿಸ್ಟೆನ್ಸ್ ಇದಕ್ಕೆ ಮದ್ದಾಗಿದೆ ಎಂದು ಶಾಸಕ ನರಸಿಂಹನಾಯಕ ತಿಳಿಸಿದರು.

ನಗರದ ತಹಶೀಲ್ದಾರ ಸಭಾಂಗಣದಲ್ಲಿ ನಡೆದೆ ಟಾಸ್ಕಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದಿಂದ ದಿನಬಳಕೆ ವಸ್ತುಗಳನ್ನು ಮತ್ತು ತರಕಾರಿಗಳನ್ನು ನಿಮ್ಮ ಮನೆಬಾಗಲಿಗೆ ತರುವ ವ್ಯವಸ್ಥೆಯನ್ನು ಕೈಗೊಳ್ಳುವ ಯೊಜನೆಯನ್ನು ಹಾಕಲಾಗಿದೆ ಮತ್ತು ೨ ತಿಂಗಳಿಗೆ ಬೇಕಾಗುವ ದಿನಸಿಯನ್ನು ನಿಮ್ಮ ಮನೆಗೆಳಿಗೆ ತಲುಪಿಸುವ ಕೆಲಸವಾಗುತ್ತಿದೆ. ಇನ್ನು ನಮ್ಮ ಆರೋಗ್ಯ ಕಾಪಾಡಲು ವೈದ್ಯಕೀಯ ಇಲಾಖೆ ಮತ್ತು ಸಫಾಯಿ ಕರ್ಮಚಾರಿಗಳು, ಪೊಲೀಸ್ ಇಲಾಖೆಯವರು ಹಗಲು ರಾತ್ರಿ ತಮ್ಮ ಜೀವವನ್ನು ಪಣಕಿಟ್ಟು ದುಡಿಯುತ್ತಿದ್ದಾರೆ ಅವರ ಸೇವೆಗೆ ನಾವುಗಳು ಬೆಲೆಕೊಟ್ಟು ನಾವುಗಳು ನಮ್ಮ ಮನೆಯಲ್ಲೆ ಇರುವುದು ಒಳಿತು ಎಂದು ತಿಳಿಸಿದರು.

ಹಾಗೆ ಗ್ರಾಮೀಣಾ ಭಾಗದಲ್ಲಿ ಹೊರ ರಾಜ್ಯದಿಂದ ಬಂದ ಜನರು ತಮ್ಮ ಮನೆಗೆ ವೈದ್ಯಾಧಿಕಾರಿಗಳು ಬಂದು ತಮ್ಮನ್ನು ತಪಾಸಣೆಗೆ ಮಾಡಲು ಬಂದಾಗ ದಯವಿಟ್ಟು ಅವರಿಗೆ ನೀವುಗಳು ನಿಮ್ಮ ಸಂಪೂರ್ಣ ಸಹಕರಿಸಿ ಹಾಗೆ ಇನ್ನು ಕ್ಷೇತ್ರದ ಸ್ವೆಯಂ ಸೇವಕರು ನಿರ್ಗತಿಕರಿಗೆ ಮತ್ತು ಅಸಾಯಕರಿಗೆ ಊಟವನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸುರಪುರ ಮತ್ತು ಹುಣಸಗಿ ಪಟ್ಟಣಗಳಲ್ಲಿ ನಾಲ್ಕು ಜನಗಳ ತಂಡವನ್ನು ರೂಪಿಸಿಕೊಂಡು ಬಡವರಿಗೆ ದಿನಗೂಲಿ ನೌಕರರಿಗೆ ನಿರ್ಗತಿಕರಿಗೆ ಊಟ ತಲುಪಿಸುತ್ತಿದ್ದಾರೆ ಅಹಾರಿಲ್ಲದೆ ಪರದಾಡುವ ಜನ ನಿವiಗೆ ಕಂಡುಬಂದಲ್ಲಿ ಸುರಪುರದಲ್ಲಿ ಸಂದೀಪ ಜೋಷಿ: 9341434143, ಲಕ್ಷ್ಮೀಕಾಂತ ದೇವರಗೋನಾಲ: 7899997771, ಗಂಗಾಧರ ನಾಯಕ: 7738772159, ಅರವಿಂದ ಕೆ: 9731639370 ಮತ್ತು ಹುಣಸಗಿ ಪಟ್ಟಣದಲ್ಲಿ: ಬಸವರಾಜ: 9535589732, ಪ್ರದೀಪ: 8105174242, ಅಂಬ್ರೇಶ:9980185172 ಈ ಸಂಖ್ಯಗಳಿಗೆ ಸಂರ್ಪಕಿಸಿ ಇವರುಗಳು ಜನವಿದ್ದಲಿಗೆ ಬಂದು ಆಹಾರ ಮತ್ತು ಕುಡಿಯುವ ನೀರನ್ನು ಒದಗಿಸುತ್ತಾರೆ ಎಂದು ತಿಳಿಸಿದರು.

ಇನ್ನು ಸಭೆಯಲ್ಲಿ ಕರೊನಾ ವೈರಸ್ ಕುರಿತು ತೆಗೆದುಕೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ಪಡೆದರು. ಸಭೆಯಲ್ಲಿ ತಹಶಿಲ್ದಾರ ನಿಂಗಣ್ಣ ಬಿರಾದರ, ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿ, ಸಿಪಿಐ ಎಸ್.ಎಮ್.ಪಾಟೀಲ್, ಇಓ ಅಂಯ್ಟಿಹೆಚ್‌ಒ ಡಾ.ಆರ್.ವಿ.ನಾಯಕ, ಗ್ರೇಡ್ ೨ ತಹಶಿಲ್ದಾರ ಸುಫಿಯಾ ಸುಲ್ತಾನ, ನಗರಸಭೆ ಅಧಿಕಾರಿಗಳಾದ ಎಇಇ ಸುನೀಲ ನಾಯಕ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago