ಕೇಂದ್ರ ಸರ್ಕಾರವು ಕೂರೋನಾ ವೈರಸ್ ನಿಯಂತ್ರಿಸಲು ಪರಿಹಾರ ಪ್ಯಾಕೇಜ್‌ ನೀಡಿರುವುದು ಸ್ವಾಗತಾರ್ಹವಾದದು ಈಗಾಗಲೇ ದಿನನಿತ್ಯದ ಆವಶ್ಯಕ ಸೇವೆಗಳ ಹೊರತಾಗಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳೂ ಉದ್ಯಮಗಳೂ ಬಾಗಿಲು ಮುಚ್ಚಿವೆ ಈ ಬಂದ್‍ನ ನೇರ ಹೊಡೆತ ಬೀಳುತ್ತಿರುವುದು ಆಯಾ ದಿನ ದುಡಿದರೆ ಮಾತ್ರ ಊಟ ಸಿಗುವ ದಿನಗೂಲಿಗಳು ಮತ್ತು ಆಸರೆಯೇ ಇಲ್ಲದ ನಿರ್ಗತಿಕ ಒಂಟಿಜೀವಗಳ ಮೇಲೆ ಸಂಘಟಿತ ವಲಯದ ಕಾರ್ಮಿಕರಿಗೆ ಕಷ್ಟ ಅನ್ನಿಸಬಹುದಾದರೂ ಅಸಂಘಟಿತ ವಲಯದ ಕಾರ್ಮಿಕರ ಗೋಳು ಇನ್ನಷ್ಟು ವಿಪರೀತವಾಗಿದೆ ದುಡಿಯಲು ಕೆಲಸವೇ ಇಲ್ಲದಿದ್ದರೆ ಅವರು ಬದುಕುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತೀದೆ ಕೊರೊನಾ 2 ವೈರಸ್‍ಗಿಂತ ಭೀಕರವಾಗಿ ಹಸಿವು ಇವರನ್ನು ಕಾಡಬಹುದು ಹಳ್ಳಿ ಪ್ರದೇಶಗಳಲ್ಲಿ  ಕೃಷಿ ಕೂಲಿಕಾರ್ಮಿಕರಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೂ ಸ್ಥಗಿತಗೊಂಡಿದೆ.

ದೇಶದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿರುವ ದಿನಗೂಲಿಗಳು ಗುತ್ತಿಗೆ ನೌಕರರು ಸಣ್ಣಪುಟ್ಟ ಸ್ವಉದ್ಯೋಗಗಳನ್ನು ನಡೆಸಿ ಅಂದಿನ ಅನ್ನವನ್ನು ಅಂದೇ ಗಳಿಸಿಕೊಳ್ಳುವ ಜನರು ಕೆಲಸವಿಲ್ಲದೆ ಮನೆಯಲ್ಲಿ ಕೂರುವಂತಾಗಿದೆ ಒಂದು ವರದಿಯ ಅಂದಾಜಿನ ಪ್ರಕಾರ ಉದ್ಯೋಗ ಖಾತರಿ ಯೋಜನೆಯಡಿ ದೇಶದಲ್ಲಿ 26 ಕೋಟಿ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದರು ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಯಡಿ 7.75 ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಇದೇ  ಇವರೆಲ್ಲ ಈಗ ಅತಂತ್ರರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರತ್ತ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ ಕೇಂದ್ರ ಸರ್ಕಾರ ರೂ 1.70 ಲಕ್ಷ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್ ನೀಡಿದೆ ಜನಧನ್ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ ರೂ 500ರಂತೆ ಮೂರು ತಿಂಗಳು ಹಣ ನೀಡುವುದು 80 ಕೋಟಿ ಬಡವರಿಗೆ 5 ಕೆ.ಜಿ. ಉಚಿತ ಆಹಾರ ಪದಾರ್ಥ, ನೇರ ನಗದು ವರ್ಗಾವಣೆ ಯೋಜನೆಯಡಿ 8.6 ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರ ತಲಾ ರೂ. 2,000 ನೀಡುವುದು ಕಾರ್ಮಿಕರ 3 ತಿಂಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ಭರಿಸುವುದು ಮುಂತಾದ ಕ್ರಮಗಳು ಈ ಪ್ಯಾಕೇಜ್‍ನಲ್ಲಿ ಸೇರಿಸಿದರಿಂದ ಉತ್ತಮವಾದದ್ದು ದೇಶದಾದ್ಯಂತ 3.5 ಕೋಟಿ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಅವರಿಗೆ ಮೀಸಲಿಟ್ಟಿರುವ ₹ 31,000 ಕೋಟಿಯಷ್ಟು ನಿಧಿಯನ್ನು  ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಚಿವೆ ಸೂಚನೆ ನೀಡಿರುವುದು ಸ್ಪಷ್ಟ ನಿರ್ಧಾರವಾಗಿದೆ ಪ್ರತಿದಿನ ಮೂಟೆ ಹೊತ್ತು ಕೂಲಿ ಪಡೆಯುವ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಸುಮಾರು 4 ಲಕ್ಷದಷ್ಟಿದೆ.

ಇದರಲ್ಲಿ, ಎಪಿಎಂಸಿ ಹಮಾಲಿಗಳು ಸಂಘಟಿತ ವಲಯದಡಿ ಬರುತ್ತಾರೆ. ಅವರ ಸಂಖ್ಯೆ ಹೆಚ್ಚೆಂದರೆ 25 ಸಾವಿರ ದಾಟುವುದಿಲ್ಲ. ಬಸ್‌ ನಿಲ್ದಾಣ, ಮಾರುಕಟ್ಟೆ, ಮಿಲ್‍ ಮುಂತಾದೆಡೆ ಮೂಟೆ ಹೊರುವ ಕಾರ್ಮಿಕರಿಗೆ ಸರ್ಕಾರದ ಈ ಪರಿಹಾರ ತಲುಪುವ ಬಗೆ ಹೇಗೆ? ರಾಜ್ಯದಲ್ಲಿ ಬಿಸಿಯೂಟದ ಕಾರ್ಮಿಕರು ಸುಮಾರು ಒಂದು ಲಕ್ಷದಷ್ಟಿದ್ದು, ಶಾಲೆಗಳು ಮುಚ್ಚಿರುವುದರಿಂದ ಅವರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಬೆಂಗಳೂರು ಸಹಿತ ರಾಜ್ಯದಾದ್ಯಂತ ಬಾಗಿಲು ಮುಚ್ಚಿರುವ ಗಾರ್ಮೆಂಟ್ಸ್‌ ಕಾರ್ಮಿಕರ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಪ್ಲಾಂಟೇಶನ್ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೊ ಚಾಲಕರು, ಕಾರು ಬಾಡಿಗೆಗೆ ಓಡಿಸುವ ಚಾಲಕರ ಭವಿಷ್ಯವೂ ಅತಂತ್ರವಾಗಿದೆ. ಈ ಬಗೆಯ ಎಲ್ಲ ವರ್ಗಗಳ ನೋವಿಗೂ ಸರ್ಕಾರ ಗಮನಹರಿಸಬೇಕು.

ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ
emedialine

View Comments

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago