ಬಿಸಿ ಬಿಸಿ ಸುದ್ದಿ

ಬಸವ ಲೋಕದಲ್ಲಿ ಮಿಂದೆದ್ದ ಕಲಬುರಗಿ ಜನತೆ

ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು ಮತ್ತು ಕಾಯಕ ಶರಣರ ಸಮಾಜಗಳ ಸಂಘಟನೆಗಳ ಆಶ್ರಯದಲ್ಲಿ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಮೇ 8 ರಿಂದ ಜರುಗುತ್ತಿದ್ದ ಲಿಂಗಾಯತ ಧರ್ಮ‌ ಸಂಸ್ಥಾಪಕ ವಿಶ್ವಗುರು ಬಸವಣ್ಣನವರ 886ನೇ ಜಯಂತ್ಯುತ್ಸವ ಕಾರ್ಯಕ್ರಮ ಇಂದು ವೈಭವದ ತೆರೆ ಕಂಡಿತು.

ಕಳೆದ ನಾಲ್ಕು ದಿನಗಳಿಂದ ವಿವಿಧ ಬಸವಪರ ಮಠಾಧೀಶರು, ಬಸವತತ್ವ ವಿದ್ವಾಂಸರಿಂದ ನಡೆದ ಉಪನ್ಯಾಸ ಕಾರ್ಯಕ್ರಮ ಇಂದು ಅದ್ದೂರಿ ಹಾಗೂ ಅರ್ಥಪೂರ್ಣ ಮೆರವಣಿಗೆಯೊಂದಿಗೆ ಮುಕ್ತಾಯಗೊಂಡಿತು.

ಭಾರತ ದೇಶ ಜೈ ಬಸವೇಶ, ಒಬ್ಬ ಲಿಂಗಾಯತ ಕೋಟಿ ಲಿಂಗಾಯತ, ಲಿಂಗಾಯತ ಧರ್ಮದ ಮಾನ್ಯತೆ ಪಡೆದೆ ತೀರುತ್ತೇವೆ, ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಲಿಂಗಾಯತ ಧರ್ಮಕ್ಕೆ ಜಯವಾಗಲಿ ಎಂಬ ಜಯಘೋಷಗಳು ಮೊಳಗಿದವು.

ತಿಪ್ಪಣ್ಣಪ್ಪ ಕಮನೂರ ಗೌರವಾಧ್ಯಕ್ಷತೆ, ಶಿವಶರಣಪ್ಪ ಕಲ್ಬುರ್ಗಿ ಅಧ್ಯಕ್ಷತೆ, ಬಿ.ಬಿ. ರಾಂಪುರೆ ಕಾರ್ಯಾಧ್ಯಕ್ಷತೆ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ರಾಜ್ಯ ಕಾರ್ಯದರ್ಶಿ ರವೀಂದ್ರ ಶಾಬಾದಿ, ರಾಜ್ಯ ಸಂಚಾಲಕ ಆರ್.ಜಿ.ಶೆಟಗಾರ, ಜಿಲ್ಲಾ ಕೋಶಾಧ್ಯಕ್ಷ ಬಸವರಾಜ ಮೊರಬದ ನೇತೃತ್ವದಲ್ಲಿ ನಡೆದ ಈ ಬಾರಿಯ ಬಸವ ಜಯಂತಿ ಉತ್ಸವ ಕಾರ್ಯಕ್ರಮ ಬಹಳಷ್ಟು ಜನರಿಗೆ ಹಿಡಿಸುವಂತಿತ್ತು.
ಇಂದು ಸಂಜೆ ನೆಹರು ಗಂಜ್ ನ ನಗರೇಶ್ವರ ಶಾಲೆಯಿಂದ ಆರಂಭಗೊಂಡ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಸಾರ್ವಜನಿಕರ ಗಮನಸೆಳೆಯುವಂತಿತ್ತು.

ಬಸವ ಕೇಂದ್ರದ ಕೋಶಾಧ್ಯಕ್ಷ ಸೋಮಣ್ಣ ನಡಕಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಯಾವುದೇ ರೀತಿಯ ಅಬ್ಬರದ ಡಿಜೆ ಸೌಂಡ್ ನ ಮೆರವಣಿಗೆ ಇಲ್ಲದೆ ಕೇವಲ ವಚನಗಳ ಹಾಡಿಗೆ ನೃತ್ಯ ಮಾಡಿದ ಶರಣ- ಶರಣೆಯರು ಬಸವ ಧ್ಯಾನದಲ್ಲಿ ಮಿಂದೆದ್ದಂತಿತ್ತು. ಬಾ ಬಸವಣ್ಣ, ಬಾರೋ ಬಸವಣ್ಣ ಎಂಬ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳು , ಮಹಿಳೆಯರು ಹಾಗೂ ಪುರುಷರು ವಚನ ಉನ್ಮಾದದಲ್ಲಿ ತೇಲಾಡಿದರು.

ಸೂಪರ್ ಮಾರ್ಕೆಟ್ ಮೂಲಕ ಬಸವ ಸಾಂಸ್ಕೃತಿಕ ವೇದಿಕೆವರೆಗೆ ನಡೆದ ಈ ಮೆರವಣಿಗೆಯಲ್ಲಿ ಅಯ್ಯನಗೌಡ, ಮಹಾಂತೇಶ ಕಲ್ಬುರ್ಗಿ, ಅಶೋಕ ಘೂಳಿ, ಮಲ್ಲಿಕಾರ್ಜುನ ವಡ್ಡನಕೇರಿ, ರಾಜು ಕಾಡಾದಿ, ಸತೀಶ ಸಜ್ಜನ್, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಿ.ಎಂ. ಪಾಟೀಲ ಕಲ್ಲೂರ, ಗುಂಡಣ್ಣ ಡಿಗ್ಗಿ, ವೀರಸಂಗಪ್ಪ ಸುಲೇಗಾಂವ, ನಾಗರಾಜ ಕಾಮಾ, ಎಚ್.ಬಿ. ಪಾಟೀಲ, ಶಿವಶರಣಪ್ಪ ದೇಗಾಂವ, ಶ್ರೀದೇವಿ ಏರಿ, ನಳಿನಿ ಮಹಾಗಾಂವಕರ, ಶಕುಂತಲಾ ಧಮ್ಮೂರ, ದೀಪಾಲಿ ಬಿರಾದಾರ, ಜಗದೇವಿ ಚಟ್ಟಿ, ಸಂಗೀತಾ ಕಾಡಾದಿ ಇತರರು ಸೇರಿಸಂತೆ ಸಾವಿರಾರು ಜನರು ಪಾಲ್ಗೊಂಡು ಬಸವ ಸೇವೆ ಸಲ್ಲಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago