ಸುರಪರ: ಕೆಲಸ ಅರಸಿ ಗೋವಾ ಮುಂಬೈ ಮಹಾರಾಷ್ಟ್ರ ಮತ್ತು ಬೆಂಗಳೂರು ಮತ್ತಿತರೆಡೆಗೆ ಹೋಗಿರುವ ತಾಲೂಕಿನ ವಿವಿಧ ಗ್ರಾಮಗಳ ಜನತೆ ಸದ್ಯ ತಾವಿರುವ ಸ್ಥಳಗಳಿಂದಲೆ ವೀಡಿಯೊ ಮಾಡಿ ಇಲ್ಲಿಯ ಸರಕಾರ ಮತ್ತು ಸ್ಥಳಿಯ ಶಾಸಕರಲ್ಲಿ ವಿನಂತಿಸುತ್ತಿದ್ದಾರೆ.
ವೀಡಿಯೊದಲ್ಲಿ ಅನೇಕ ಜನ ಮಹಿಳೆಯರು ಮಾತನಾಡಿ,ನಾವು ಕೆಲಸಕ್ಕೆಂದು ಇಲ್ಲಿ ಬಂದಿದ್ದೇವೆ ಈಗ ಕೊರೊನಾ ಸೊಂಕಿನಿಂದ ನಮಗೆ ಇಲ್ಲಿ ಕೆಲಸವು ಇಲ್ಲ ಊಟಕ್ಕೆ ಆಹಾರವು ಇಲ್ಲ,ಅಲ್ಲದೆ ನಮಗೆ ಮರಳಿ ನಮ್ಮೂರಿಗೆ ಬರಲು ವಾಹನಗಳು ಇಲ್ಲ,ಇಲ್ಲಿಯ ಸರಕಾರವೂ ನಮಗೆ ಯಾವುದೆ ಸೌಲಭ್ಯ ನೀಡುತ್ತಿಲ್ಲ.ಆದ್ದರಿಂದ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ,ನಾವು ನಮ್ಮೂರಿಗೆ ಬಂದು ಸಾಯಲು ಬಯಸುತ್ತೇವೆ ಎಂದು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ.
ಕಷ್ಟಕ್ಕೆ ಸಿಲುಕಿರುವ ಜನರ ಗೋಳನ್ನು ಅರಿತ ಶಾಸಕ ನರಸಿಂಹ ನಾಯಕ (ರಾಜುಗೌಡ) ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿ,ನನ್ನ ಕ್ಷೇತ್ರದ ಜನತೆ ಗೋವಾ ಮುಂಬೈಗಳಲ್ಲಿ ತೀವ್ರ ಸಂಕಟದಲ್ಲಿದ್ದಾರೆ.ಅವರೆಲ್ಲರನ್ನು ಕರೆತರಲು ಅಲ್ಲಿಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಮ್ಮ ಜನರು ಬರಲು ವ್ಯವಸ್ಥೆ ಕಲ್ಪಿಸಲು ನೋವಿನಿಂದ ವಿನಂತಿಸಿದ್ದಾರೆ.ಕೊರನಾ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಆದಷ್ಟು ಬೇಗ ಕರೆದುಕೊಂಡು ಬರಲಿ ಎಂದು ಜನರು ಕೂಡ ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…