ವಾಡಿ: ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಮಾನವ ದೇಹ ಪ್ರವೇಶಿಸದಂತೆ ತಡೆಯಲು ಮಾಸ್ಕ್ ಅತ್ಯಂತ ಸುರಕ್ಷತಾ ಕವಚಬಾಗಿದ್ದು, ಎಲ್ಲೆಡೆ ಅವುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೊರತೆಯೂ ಉಂಟಾಗಿದೆ. ದುಡ್ಡು ಕೊಟ್ಟರೂ ಮೇಡಿಕಲ್‌ಗಳಲ್ಲಿ ಮಾಸ್ಕ್‌ಗಳು ಸಿಗುತ್ತಿಲ್ಲ. ಸಾಮಾನ್ಯ ಜನರಿಗೆ ಕೈಗೆಟಕುವಂತಹ ಮಾಸ್ಕ್ ಗಗನಕುಸುಮವಾಗಿವೆ. ಇಂತಹ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಲು ಮುಂದಾಗಿರುವ ಹೊಲಿಗೆ ತರಬೇತಿ ಕೇಂದ್ರವೊಂದರ ಯುವತಿಯರು, ಮುಖಗವಚ ಹೊಲಿಯುವಲ್ಲಿ ನಿರತರಾಗಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಮೆರಿಟ್ಯೂಡ್ ಸ್ಕಿಲ್ ಡೆವಲಪ್‌ಮೆಂಟ್ ಆದೀನದ ಕೌಶಲ್ಯ ಕರ್ನಾಟಕ ಸಂಸ್ಥೆಯ ಹೊಲಿಗೆ ತರಬೇತಿ ಕೇಂದ್ರದ ಸುಮಾರು ೫೦ಕ್ಕೂ ಹೆಚ್ಚು ಜನ ಮುಸ್ಲಿಂ ಯುವತಿಯರು, ಕಳೆದ ಮೂರು ದಿನಗಳಿಂದ ಮಾಸ್ಕ್ ಸಿದ್ಧತೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈಗಾಗಲೆ ೭೦೦ ಮಾಸ್ಕ್‌ಗಳ ಹೊಲಿಗೆ ಕಾರ್ಯ ಪೂರ್ಣಗೊಳಿದ್ದಾರೆ. ಔಷಧ ಲಭ್ಯವಿಲ್ಲದ ಕೊರೊನಾ ವೈರಸ್ ಜನರಲ್ಲಿ ಸಾವಿನ ಭಯ ಹುಟ್ಟಿಸಿದ್ದು, ಕೈಗಳ ಸ್ವಚ್ಚತೆ ಹಾಗೂ ಮಾಸ್ಕ್‌ಗಳ ಸುರಕ್ಷತೆಯೊಂದಿಗೆ ಮಾತ್ರ ವೈರಸ್ ಹರಡದಂತೆ ತಡೆಯಬೇಕಾದ ಅನಿವಾರ್ಯತೆಯಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರಿಂದ ಮಾಸ್ಕ್‌ಗಳ ಕೊರತೆ ದೊಡ್ಡಮಟ್ಟದಲ್ಲಿದೆ. ಜನರ ಜೀವ ಸುರಕ್ಷತೆ ದೃಷ್ಠಿಯಿಂದ ಬಟ್ಟೆ ಹೊಲೆಯುವ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಮಾಸ್ಕ್ ಸಿದ್ಧತೆಗೆ ಮುಂದಾಗಿದೆ ಎಂದು ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಮಲ್ಲೇಕಾ ಖಾತೂನ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರೀಯಿಸಿರುವ ಕೌಶಲ್ಯ ಕರ್ನಾಟಕ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ಮಹ್ಮದ್ ಇಮ್ತೀಯಾಜ್, ಕೊರೊನಾ ಜಾಗೃತಿ ಹೆಚ್ಚಾಗುತ್ತಿದ್ದಂತೆ ಜನರು ಮಾಸ್ಕ್‌ಗಳಿಗಾಗಿ ಪರದಾಡುತ್ತಿದ್ದಾರೆ. ವಾಡಿ ನಗರದ ಸಾಮಾನ್ಯ ಜನರಿಗೆ ಒಟ್ಟು ೨೫೦೦ ಮಾಸ್ಕ್‌ಗಳನ್ನು ಸಂಸ್ಥೆ ವತಿಯಿಂದ ಉಚಿತವಾಗಿ ವಿತರಿಸಬೇಕು ಎಂಬ ಸೇವಾ ಮನೋಭಾವದ ಉದ್ದೇಶ ಹೊಂದಲಾಗಿದೆ. ನಮ್ಮ ಗುರಿಯನ್ನು ಮೀರಿ ಸ್ಥಳೀಯರಿಂದ ಬೇಡಿಕೆ ಎದುರಾದರೆ ಅತ್ಯಂತ ಕಡಿಮೆ ದರದಲ್ಲಿ ಮಾಸ್ಕ್‌ಗಳನ್ನು ಹೊಲಿದುಕೊಡಲಾಗುವುದು ಎಂದರು. ಕೊರೊನಾ ರೋಗದಿಂದ ಜನರನ್ನು ರಕ್ಷಿಸಲು ಮಾಸ್ಕ್ ತಯ್ಯಾರಿಕೆಗೆ ಮುಂದಾಗಿರುವ ಹೊಲಿಗೆ ತರಬೇತಿ ಕೇಂದ್ರದ ಸ್ವಯಂ ಉದ್ಯೋಗ ಕೌಶಲ್ಯದ ಯುವತಿಯರ ಈ ಕಾರ್ಯ ಮೆಚ್ಚುವಂತಹದ್ದು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…