ಕಲಬುರಗಿ: ಜಿಲ್ಲೆಯ ಎಲ್ಲಾ ಲೋಕೊಪಯೋಗಿ ಇಲಾಖೆಯ ಗುತ್ತಿಗೆದಾರರು ನಿಮ್ಮ ಅಧಿನದಲ್ಲಿ ಕೆಲಸ ಮಾಡುತ್ತಿರುವ ವೃತ್ತಿನಿರತ ಕಾರ್ಮಿಕರು ಮತ್ತು ಇತರ ಇಲಾಖೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಕೆಲಸಗಳು ಮಾಡುತ್ತಿರುವ ಕಾರ್ಮಿಕರಿಗೆ ಅವರು ತೊಂದರೆಯಲ್ಲಿದ್ದರೆ ಅವರು ಇಛೆ ಬಯಸಿದ ಸ್ಥಳಗಳಿಗೆ ಹಾಗೂ ಆಸ್ಪತ್ರೆಗಳಿಗೆ ತಲುಪಿಸಲು ಮುಂದಾಗಬೇಕು ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ‍್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಜಗನ್ನಾಥ ಜಿ. ಶೇಗಜಿ ಹಾಗೂ ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ ಅವರು ಜಂಟಿಯಾಗಿ ಜಿಲ್ಲೆಯ ಗುತ್ತಿಗೆದಾರರಲ್ಲಿ ಮನವಿ ಮಾಡಿದ್ದಾರೆ.
ಗುತ್ತಿಗೆದಾರರು ತಮ್ಮ ಸ್ವಂತ ವಾಹಗಳಿಂದ ಆ ಕಾರ್ಮಿಕರ ಕೈಯಿಂದ ಯಾವುದೇ ಖರ್ಜು ಪಡೆಯದೆ ಅವರು ಹೇಳಿದ ಸ್ಥಳಗಳಿಗೆ ಬಿಡಬೇಕು. ಅವರು ಗುತ್ತಿಗೆದಾರರ ಪಾಲಿಗೆ ಭಾಗ್ಯದ ಲಕ್ಷ್ಮಿ ಇದ್ದ ಹಾಗೆ ಆದಕಾರಣ ಇಂತಹ ಕಷ್ಟ ಕಾಲದಲ್ಲಿ ಅವರಿಗೆ ನೆರವು ಮಾಡುವುದು ಆಧ್ಯ ಕರ್ತವ್ಯವಾಗಿದೆ. ತಮಗೆ ಯಾವುದೇ ಕಾರ್ಮಿಕರು ತೊದರೆಯಲ್ಲಿದ್ದರೆ ಅವರ ಸೇವೆಗೆ ನಾವುಗಳು ಮುಂದಾಗಬೇಕು ಎಂದರು.
ಈ ಸೇವೆಯನ್ನು ಸಲ್ಲಿಸುತ್ತಿರುವಾಗ ಪೋಲಿಸ್‌ರಿಂದ ಹಾಗೂ ತಾಲೂಕ ಆಡಳಿತ ಮಂಡಳಿಯಿಂದ ತೊಂದರೆ ಆದರೆ ನಿಮ್ಮ ವಾಹನ ಚಾಲಕನ ಹತ್ತಿರ ನಿಮ್ಮ ಗುತ್ತಿಗೆದಾರರ ಲೈಸನ್ಸ್ ಪ್ರತಿಯನ್ನು ಇಡಬೇಕು. ಈ ನಮ್ಮ ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿಯ ಹಾಗೂ ಸೂಚನೆಯನ್ನು ಕೊಡಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ನಮ್ಮ ಗುತ್ತಿಗೆದಾರರ ಸಂಘದ ಹೆಸರು ಹಾಗೂ ಪದಾಧಿಕಾರಿಗಳ ಮತ್ತು ಗುತ್ತಿಗೆದಾರರ ಮೋಬೈಲ್ ಸಂಖ್ಯೆಗಳನ್ನು ಜಿಲ್ಲಾಧಿಕಾಯವರ ಕಛೇರಿಗೆ ಸಲ್ಲಿಸಿರುತ್ತೇವೆ ಎಂದು ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…