ಸುರಪುರ: ಭಾಋತೀಯರಾದ ನಾವೆಲ್ಲರು ಒಂದೆ,ನಮ್ಮದು ವೈವಿಧ್ಯಮಯವಾದ ದೇಶವಾಗಿದ್ದು ಎಲ್ಲಾ ಧರ್ಮಗಳು ತಮ್ಮದೆ ಆದ ಆಚರಣೆಗಳನ್ನು ಹೊಂದಿವೆ,ಆದರೆ ಈಗ ಕೊರೊನಾ ಎನ್ನುವ ಸೊಂಕು ಸಾಂಕ್ರಾಮಿಕವಾಗಿ ಹರಡುವುದರಿಂದ ಯಾವುದೆ ಧರ್ಮಿಯರು ಸಾಮೂಹಿಕವಾಗಿ ಪ್ರಾರ್ಥನೆ ಅಥವಾ ಆಚರಣೆಗಳನ್ನು ಮಾಡಬೇಡಿ ಎಂದು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಸಾರ್ವಜನಿಕರಿಗೆ ಸೂಚನೆ ನೀಡಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆಸಲಾದ ಕೊರೊನಾ ಜಾಗೃತಿಯ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ವಾಟ್ಸಾಪ್ ಮತ್ತಿತರೆ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತವೆ,ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರು ಸಾಮಾಜಿಕ ಅಂತರಕ್ಕಾಗಿ,ಲಾಕ್‌ಡೌನ್ ಯಶಸ್ಸಿಗಾಗಿ ಮನೆಯಲ್ಲಿರುವಂತೆ ತಿಳಿಸಿದರು.ಅನೇಕರು ಸುಮ್ಮನೆ ಬೈಕ್ ಹತ್ತಿ ಹೊರಗಡೆ ಓಡಾಡುತ್ತಿದ್ದಾರೆ.ಅಂತವರ ಬೈಕ್‌ಗಳು ಸಿಕ್ಕರೆ ೧೫ನೇ ತಾರೀಖಿನವರೆಗು ಬಿಡುವುದಿಲ್ಲವೆಂದು ತಿಳಿಸಿದರು.ಯಾವುದೆ ಪ್ರಾರ್ಥನೆ,ಜಾತ್ರೆ,ಹಬ್ಬ,ಸಂತೆ ಹೆಸರಲ್ಲಿ ಜನ ಸೇರಬೇಡಿ,ಅಲ್ಲದೆ ಅನೇಕರು ಸುಮ್ಮನೆ ಆಸ್ಪತ್ರೆಯ ನೆಪ ಹೇಳಿಕೊಂಡು ಹೊರಗೆ ಬರುತ್ತಿರಿ,ಇದು ಬೇಡ ಇದರಿಂದ ನಿಜವಾಗಿಯು ಆಸ್ಪತ್ರೆಗೆ ಬರುವವರಿಗು ತೊಂದರೆಯಾಗಲಿದೆ ಎಂದರು ತಿಳಿಸಿದರು.
ಇದಕ್ಕು ಮುನ್ನ ಪಿಎಸ್‌ಐ ಚೇತನ್ ಮಾತನಾಡಿ,ನಾವು ನಿಮ್ಮ ರಕ್ಷಣೆಗಾಗಿಯೆ ಹಗಲಿರಳು ಶ್ರಮಿಸುತ್ತೇವೆ,ಇದಕ್ಕೆ ನಿಮ್ಮ ಸಹಕಾರ ಮುಖ್ಯ,ನೀವು ನಿಮ್ಮ ಮನೆಗಳಲ್ಲಿದ್ದರೆ ನಿಮ್ಮ ರಕ್ಷಣೆಯ ಜೊತೆಗೆ ಇತರರ ರಕ್ಷಣೆಯನ್ನು ಮಾಡಿದಂತಾಗಲಿದೆ ಎಂದರು.ಸುಮ್ಮನೆ ಹೊರಗಡೆ ಬಂದು ತಿರುಗಾಡುವವರಿಗೆ ಠಾಣೆಗೆ ಕರೆತರುವ ಅನಿವಾರ್ಯತೆ ಬರಲಿದೆ.ಆಗ ಯಾರೂ ಬಿಡಸಲು ಬರಬೇಡಿ,ಇದಕ್ಕು ಮುನ್ನ ಯುವಕರು ಹೊರಗೆ ಬರದಂತೆ ತಾವೆ ತಿಳಿಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ವೇಣುಗೋಪಾಲ ಜೇವರ್ಗಿ,ವೆಂಕೋಬ ದೊರೆ ಹಾಗು ಉಸ್ತಾದ ವಜಾಹತ್ ಹುಸೇನ್ ಮಾತನಾಡಿ,ಪೊಲೀಸರು ತುಂಬಾ ಶ್ರಮವಹಿಸುತ್ತಿದ್ದಾರೆ.ಅವರಿಗೆ ನಾವೆಲ್ಲರು ಸಹಕಾರ ಕೊಡೋಣ,ನಾಳೆ ನಮ್ಮ ಮಕ್ಕಳೆ ಹೊರಗಡೆ ಬಂದರೆ ಒಳಗೆ ಹಾಕುವಂತೆ ತಿಳಿಸಿದರು.
ವೇದಿಕೆ ಮೇಲೆ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಇದ್ದರು. ಸಭೆಯಲ್ಲಿ ರಾಜಾ ಪಿಡ್ಡನಾಯಕ (ತಾತಾ),ಮುಫ್ತಿ ಮೆಹಬೂಬ ಒಂಟಿ,ಗಫೂರಸಾಬ್ ಖುರೇಶಿ,ನಾಸಿರ ಕುಂಡಾಲೆ,ಅಬ್ದುಲ ಮಜೀದ್,ವಿಷ್ಣು ಗುತ್ತೇದಾರ,ಶಿವು ಕಟ್ಟಿಮನಿ,ಸೂಗುರೇಶ ವಾರದ,ಮಹ್ಮದ ಮೌಲಾ,ಅಬೀದ್ ಪಗಡಿ,ಧರ್ಮು ಮಡಿವಾಳ,ಲಕ್ಷ್ಮೀಕಾಂತ ದೇವರಗೋನಾಲ,ಗಂಗಾಧರ ನಾಯಕ,ಸಂದೀಪ ಜೋಷಿ,ರಾಹುಲ್ ಹುಲಿಮನಿ,ಧರ್ಮು ಬಡಿಗೇರ,ದಾನಪ್ಪ ಲಕ್ಷ್ಮೀಪುರ,ಆಕಾಶ ಕಟ್ಟಿಮನಿ,ಮಲ್ಲು ಬಿಲ್ಲವ್,ನಿಂಗಣ್ಣ ಗೋನಾಲ,ಅಯ್ಯಪ್ಪ ಅಕ್ಕಿ,ರವಿ ನಾಯಕ,ಮಲ್ಲು ದಂಡಿನ್,ರಾಜು ಬಾರಿ,ಮನವಾರ್ ಅರಕೇರಿ,ಜಹೀರ್ ಖುರೇಶಿ ಸೇರಿದಂತೆ ಅನೇಕರಿದ್ದರು.ಪೇದೆ ಚಂದ್ರಶೇಖರ ಸಭೆಯನ್ನು ನಿರೂಪಿಸಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…