ಯಾದಗಿರಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಹಾರ ತಲುಪಿಸುವ ಕಾಯಕ ಒಂದರೆಡು ದಿನಕ್ಕೆ ಸೀಮಿತ ಅಲ್ಲ. ಲಾಕ್‌ಡೌನ್ ಅವಧಿ ಮುಗಿಯುವರೆಗೂ ನಿರಂತರವಾಗಿ ಆಗಬೇಕಾದ ಕೆಲಸ. ಅಸಹಾಯಕರು, ನಿರಾಶ್ರಿತರು ಹಾಗೂ ಬಡ ಕೂಲಿಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು,ಎಂದು ಶರಣಗೌಡ ಕಂದಕೂರ ಅಭಿಮಾನಿಗಳ ಸಂಘದ ಯುವ ಮುಖಂಡ ಮಲ್ಲು ಮಾಳಿಕೇರಿ ಹೇಳಿದರು.
ಗುರುಮಿಠಕಲ್ ಪಟ್ಟಣದಲ್ಲಿ ಇಂದು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಕೊರೊನಾ ತಂದೊಡ್ಡಿರುವ ಸಂಕ?ದ ಸಮಯದಲ್ಲಿ ಬಡ ಕೂಲಿ ಕಾರ್ಮಿಕರು ಇರುವಲ್ಲಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.ಕಾರ್ಯಕರ್ತರು ಪ್ರತಿ ದಿನ ನಿರ್ಗತಿಕರಿಗೆ ,ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುವದರ ಮೂಲಕ ಅವರ ಹಸಿವನ್ನು ನೀಗಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಜಿ.ತಮ್ಮಣ್ಣ,ಜಿ,ಕೃಷ್ಣರೆಡ್ಡಿ ಪೊಲೀಸ್ ಪಾಟೀಲ್,ನರಸಪ್ಪ ವಕೀಲ,ದೀಪಕ್ ಬೆಳ್ಳಿ,ಶರಣಪ್ಪ ಹೂಗಾರ,ಪಾಪಣ್ಣ ಹೂಗಾರ,ದೀಪಕ್ ಒಡೆಯರ್,ಆಂಜನೇಯ ಕಟ್ಟಿಮನಿ,ಸಾಬು ಹೋರುಂಚಾ,ಬಸವರಾಜ ಮಡಿವಾಳ,ಅಲ್ಲಾವುದ್ದಿನ್ ನೀಲಹಳ್ಳಿ,ಸಾಬು ನೀಲಹಳ್ಳಿ,ಪ್ರಭು ಯಡ್ಡಳ್ಳಿ,ಅನೀಲ್ ಕುಮಾರ,ಸೇರಿದಂತೆ ಇನ್ನಿತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…