ಬಿಸಿ ಬಿಸಿ ಸುದ್ದಿ

ಮಾಜಿ ಸಿಎಂ ದಿ.ವಿರೇಂದ್ರ ಪಾಟೀಲ್ ಕ್ಷೇತ್ರಕ್ಕಿಂದು ಜಾಧವ್ ಕಳಂಕ ತಂದಿದ್ದಾರೆ: ಪರಮೇಶ್ವರ

ಕಲಬುರಗಿ: ಚಿಂಚೋಳೀ  ಕ್ಷೇತ್ರದಲ್ಲಿ ಉಪಚುನಾವಣೆ ಯಾಕೆ ಬಂತು ಎನ್ನೊದು ಎಲ್ಲರಿಗೆ ಗೋತ್ತಿದೆ, ಹಿಂದುಳಿದ ವರ್ಗದ ವಿದ್ಯಾವಂತ ಇದಾನೆ ಅಂತಾ ಎರಡು ಬಾರಿ ಟಿಕೆಟ್ ನೀಡಿದ್ವಿ ಅದಕ್ಕಾಗಿ ಈ ಕ್ಷೇತ್ರದ ಜನರು ಅಭಿಮಾನದಿಂದ ಆರಿಸಿ ಕಳಿಸಿದ್ರು, ಮಾಜಿ ಸಿಎಂ ದಿ ವಿರೇಂದ್ರ ಪಾಟೀಲ್ ಕ್ಷೇತ್ರಕ್ಕಿಂದು ಜಾಧವ್ ಕಳಂಕ ತಂದಿದ್ದಾರೆ ಎಂದು ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಕೈ ಬೆಂಬಲಿತ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಡಿಸಿಎಂ ಡಾ ಜಿ ಪರಮೇಶ್ವರ ಹೇಳಿದ್ದಾರೆ.

ಬಂಜಾರ ಸಮಾಜದಿಂದ ಪಿ.ಟಿ ಪರಮೇಶ್ವರ ನಾಯಕ್‌ಗೆ ಸಚಿವ ಸ್ಥಾನ ನೀಡಬೇಕೆಂದು ತಿರ್ಮಾನಿಸಲಾಗಿತ್ತು, ಚಿಂಚೋಳಿ ಕ್ಷೇತ್ರದ ಅಭಿವೃದ್ದಿಗಾಗಿ ಅಂದಿನ ಸಿಎಂ ಸಿದ್ದರಾಮಯ್ಯ ಎಲ್ಲ ಸಹಕಾರ ನೀಡಿದ್ದರು.  ಬಂಜಾರ ಸಮುದಾಯಕ್ಕೆ‌ ನ್ಯಾಯ‌ ಒದಗಿಸಲು ಒಬ್ಬ ವಿದ್ಯಾವಂತನಿದ್ದಾನೆ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂದು ಎರಡು‌ಬಾರಿ ಗೆಲ್ಲಿಸಿ ಕಳಿಸಿದೆವು ಎಂದು ತಿಳಿಸಿದರು.

ಅಧಿವೇಷನ ಸಮಯದಲ್ಲೇ ಜಾಧವ್ ಬಿಜೆಪಿಗರೊಂದಿಗೆ ಬಾಂಬೆಗೆ ಹೋಗಿದ್ದರು. ಯಾರ ಸಂಪರ್ಕಕ್ಕೆ ಸಿಗದೆ ಹೋದರು. ಬಿಜೆಪಿಯರೊಂದಿಗೆ ಹೋಗಿದ್ದೀರಲ್ಲ  ಜಾಧವ್ ಕ್ಷೇತ್ರದ ಜನರನ್ನು ಕೇಳಿದಿರಾ? ಏನಾದರೂ ಸಮಸ್ಯೆ ಇದ್ದರೆ ನಮಗೆ ಹೇಳಿದಿರಾ? ಇಲ್ಲ. ಯಾಕೆಂದರೆ‌ ನೀವು 50 ಕೋಟಿಗೆ ಮಾರಾಟವಾಗಿದ್ರಿ. ಮತದಾರರ ಅಮೂಲ್ಯ ಮತವನ್ನು ಮಾರಿಕೊಂಡವರು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಿಲ್ಲ ಎಂದು ಜಾಧವ್ ವಿರುದ್ಧ ಕೀಡಿಕಾರಿದರು.

ಸಾರ್ವಜನಿಕ ಬದುಕು ಬೇರೆ ಬೇರೆ ಅರ್ಥದಲ್ಲಿ ಉಲ್ಲೇಖಿಸಲಾಗುತ್ತಿದೆ. ಶಾಸಕರನ್ನು ಖರೀದಿ ಮಾಡುವಂತ ಪರಂಪರೆಯನ್ನು ಬಿಎಸ್ವೈ ಹುಟ್ಟುಹಾಕಿದರು. ಬಿಎಸ್ ವೈ ಸಿಎಂ ಅಗಲು ತುಂಬಾ ಅವಸರದಲ್ಲಿದ್ದಾರೆ. 24 ಮೇ ನಂತರ ಸಿಎಂ ಆಗುವ ಆತುರದಲ್ಲಿದ್ದಾರೆ. ಏನೇ ಆದರೂ ಅವರು ಸಿಎಂ ಆಗಲ್ಲ. ಈ‌ ಮೈತ್ರಿ ಸರಕಾರ ಐದು ವರ್ಷ ಇರ್ತದೆ. ಮಾನ ಮರ್ಯಾದೆ ನಯ ವಿನಯ ಇಟ್ಟುಕೊಂಡ ಎಲ್ ಎಲ್ ಎಮ್ ಪದವೀಧರ ಸುಭಾಷ ರಾಠೋಡ್ ನಿಮ್ಮ ಮುಂದೆ ನಿಂತಿದ್ದಾರೆ. ನೀವು ದೊಡ್ಡ ಮನಸು ಮಾಡಿ ಆಶೀರ್ವಾದ ನೀಡಬೇಕು ಎಂದು ಕೇಳಿಕೊಂಡರು.

ವಿಶ್ವದಲ್ಲಿಯೇ ಸಮಾನತೆಯ ಮಾತುಗಳನ್ನು ಕಾರ್ಯಗತ ಮಾಡಿರುವುದು ಬಸವಣ್ಣ ಮಾತ್ರ. ಅವರ ನಂತರ ಪ್ರಯತ್ನಪಟ್ಟವರು ಮಹಾತ್ಮ ಗಾಂಧೀ. ಲಂಡನ್ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನ ಪ್ರತಿಷ್ಟಾಪನೆ ಸೂಕ್ತ. ಶ್ರೇಷ್ಠ ಕಾನೂನುಗಳನ್ನು ರೂಪಿಸುವ ಸಂಸತ್ ಮುಂದೆ ಪ್ರತಿಮೆ ಸ್ಥಾಪಿಸಿದ್ದು ಸೂಕ್ತ ಎಂದು ನಾನು ಲಂಡನ್ ಗೆ ಹೋಗಿದ್ದಾಗ ಅಲ್ಲಿರುವ ಸ್ನೇಹಿತರಿಗೆ ಹೇಳಿದ್ದೆ.

ಬಿಜೆಪಿಯವರಿಗೆ ಬಸವಣ್ಣನ ತತ್ವಗಳು ಬೇಕಿಲ್ಲ. ಬಸವಣ್ಣನ ಸಿದ್ದಾಂತ ಪಾಲನೆ ಮಾಡದ ಪಕ್ಷದಲ್ಲಿ‌ ಬಿಎಸ್ ವೈ ಶೆಟ್ಟರ್ ಹೇಗೆ ಇರುತ್ತಾರೋ. ಇವತ್ತು ಅಥವಾ ನಾಳೆನೇ ರಾಜೀನಾಮೆ ನೀಡಿ ಹೊರಗೆ ಬರಬೇಕು. ವೇದಿಕೆ ಮೇಲೆ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಪ್ರಿಯಾಂಕ್ ಖರ್ಗೆ, ಸೇರಿದಂತೆ ಮತ್ತಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago