ಕಲಬುರಗಿ: ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಸ್ವಯಂ ಉದ್ಯೋಗವಾಗಿ ಕಲ್ಲಿನಲ್ಲಿ ಗೃಹೋಪಯೋಗಿ ಸಮಾನುಗಳನ್ನು ಕೆತ್ತನೆ ಮಾಡಿ ಮಾರಾಟದಿಂದ ಬರುವ ಅಲ್ಪ ಹಣದಲ್ಲಿ ಬದುಕು ಸಾಗಿಸುವ ಅಲೆಮಾರಿ ಜನಾಂಗದವರ ಗುಡಿಸಲಿಗೆ ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ಅವರು ಶುಕ್ರವಾರ ಭೇಟಿ ನೀಡಿ ಸ್ವತಃ ಕಿರಾಣಿ ದಿನಸಿಗಳನ್ನು ನೀಡಿದರು.
ಲಾಕ್ ಡೌನ್ ಪರಿಣಾಮ ಅಲೆಮಾರಿ, ಭಿಕ್ಷುಕರಿಗೆ, ನಿರ್ಗತಿಕರಿಗೆ ಆಹಾರ ಸಮಸ್ಯೆಯನ್ನು ಮನಗಂಡು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಇಂತವರಿಗೆ ಅಹಾರ ಸರಬರಾಜು ಮಾಡಲು ಕ್ರಮ ವಹಿಸಿದೆ.
ಅಂತೆಯೆ ಶುಕ್ರವಾರ ಶಹಾಬಾದ ಪಟ್ಟಣದ ಬಸವೇಶ್ವರ ಚೌಕ್, ಜೇವರ್ಗಿ ರಸ್ತೆಯ ಬೆಟ್ಟ ಪ್ರದೇಶ, ಭಂಕೂರ ಗ್ರಾಮದಲ್ಲಿ ಟೆಂಟ್ ಹಾಕಿ ನೆಲೆಸಿರುವ ಅಲೆಮಾರಿ ಜನಾಂಗಕ್ಕೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ತರಕಾರಿ, ಅಕ್ಕಿ, ಬೇಳೆ ಹೀಗೆ ಅಡುಗೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದರು.
ಇನ್ನೂ ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಸಿದ್ಧ ಅಹಾರ, ಸ್ವಚ್ಚ ಕುಡಿಯುವ ನೀರನ್ನು ತಹಶೀಲ್ದಾರ ನೇತೃತ್ವದ ಅಧಿಕಾರಿಗಳ ನೀಡಿ ಅವರು ಹಸಿವು ತಣಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…