ಶಹಾಬಾದ: ಕೋಲಿ ಸಮಾಜದ ಏಳ್ಗೆಗಾಗಿ ಸದಾಕಾಲ ತಮ್ಮನ್ನು ತಾವು ಅರ್ಪಿಸಿಕೊಂಡ ಸಮಾಜದ ಏಕೈಕ ನಾಯಕರೆಂದರೆ ವಿಠ್ಠಲ್ ಹೆರೂರ್ ಎಂದು ಕೋಲಿ ಸಮಾಜದ ಮುಖಂಡ ನಿಂಗಣ್ಣ ಹುಳಗೋಳಕರ್ ಹೇಳಿದರು.
ಅವರು ಶುಕ್ರವಾರ ಅಶೋಕ ನಗರದ ಅಂಬಿಗರ ಚೌಡಯ್ಯನವರ ಸಮುದಾಯ ಭವನದಲ್ಲಿ ಶಹಾಬಾದ ನಗರದ ಕೋಲಿ ಸಮಾಜ ಮತ್ತು ಗ್ರಾಮೀಣ ಕೋಲಿ ಸಮಾಜ ವತಿಯಿಂದ ಆಯೋಜಿಸಲಾದ ದಿ.ವಿಠ್ಠಲ ಹೇರೂರ ಅವರ ೬೭ನೇ ಹುಟ್ಟುಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಠ್ಠಲ ಹೇರೂರ ಅವರು ಬದುಕಿನುದಕ್ಕೂ ಶೋಷಿತ , ಹಿಂದುಳಿದ ಸಮಾಜದ ಅಭಿವೃದ್ಧಿಗಾಗಿ ಸದಾ ಅವರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಿದರು. ಹಿಂದುಳಿದ ವರ್ಗಗಳ ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಲು ಸಂಘಟನೆಯ ಕಿಚ್ಚನ್ನು ಹಚ್ಚಿದ ಸಮಾಜದ ಮೊಟ್ಟಮೊದಲ ನಾಯಕರು. ಜೀವನದ ಕೊನೆಯ ಗಳಿಗೆಯಲ್ಲೂ ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ ) ಸೇರಿಸಬೇಕೆಂಬ ಆಶಾಭಾವನೆ ವಿಠ್ಠಲ ಹೇರೂರ ಅವರ ಬದುಕಿನ ಕೊನೆಯ ಮಾತಾಗಿತ್ತು. ಅವರ ಕೊನೆಯ ಆಸೆಯನ್ನು ನೇರವೇರಿಸಬೇಕಾದರೆ ಸಮಾಜದ ಸಂಘಟಿತರಾಗಿ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಸಿದ್ದು ಖಣದಾಳ, ರವಿ ಸಣತಮ್, ಮರಲಿಂಗ್ ಗಂಗಭೋ, ಚಂದು ಬೊಚಮನಿ, ಬಾಬು ಹಿಪ್ಪರಗಿ, ರಾಜು ನಿಂಗಭೋ, ನಾಗು ಮಣ್ಣೂರ ಇತರರು ಎದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…