ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ಇದು ಕಾರಣ ಕೂಡಲಸಂಗಮದೇವ ಲಿಂಗಸ್ಥಲವನರಿದವನೇ ಕುಲಜನು.
ಬೇರೆಬೇರೆ ವ್ಯಕ್ತಿಗಳು ಬೇರೆಬೇರೆ ಕಾಯಕಗಳನ್ನು ಕೈಗೊಂಡ ಮಾತ್ರಕ್ಕೆ ಅವರು ಬೇರೆ ಬೇರೆ ವರ್ಣ ವರ್ಗಗಳ ಚೌಕಟ್ಟುಗಳಲ್ಲಿ ಸೇರಿಸುವುದು ಸಲ್ಲದ ಮಾತು ಅಲ್ಲವೇ?
ವರ್ಣರಹಿತ ವರ್ಗರಹಿತ ಸಮತ್ವದ ವಿಚಾರ ಕೊನೆಗೊಂಡು ನಿಂತಂತಿದೆ ಈಗಿನ ಪರಿಸ್ಥಿತಿಯಲ್ಲಿ ಕುಲವೇನೋ ಕುಲವೇನೊ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರು.
*ಮನುಷ್ಯನ ಆತ್ಮ ವಿಕಾಸಕ್ಕೆ ಮಹತ್ವವಿದೆ ವಿನಹ ಜನ್ಮ ಕಲ್ಲ ಜಾತಕ ಕಲ್ಲ, ಎಂಬುದು ಮನವರಿಕೆ ಆಗಿರಬೇಕು ಎಲ್ಲರಿಗೂ?
ತನ್ನ ತಾನರಿಯದೆ , ಇತರರನ್ನು ಅರಿತುಕೊಳ್ಳಬೇಕು ಎಂಬ ಮನುಷ್ಯನ ವಿಚಾರಕ್ಕೆ ಎಂತಹ ಚಾಟಿಯೇಟು , ಏಕ ಭಾವವನ್ನು ಅರಸುವುದು ಶರಣರ ಸಮದೃಷ್ಟಿ ಯ ಅಮೂಲ್ಯ ಕೊಡುಗೆ.
ಒಳಗೆ ಕುಟಿಲ ಹೊರಗೆ ವಿನಯ ಇಂಥಾ ಭಕ್ತರನ್ನು ವಲ್ಲ ನಲ್ಲ ನಯ್ಯಾ ನಮ್ಮ ಲಿಂಗವು, ಜೀವನದ ಹಲವೊಂದು ಸ್ಥಳದಲ್ಲಿ ಸಮಭಾವ ಸಿದ್ಧಿಯನ್ನು ಸಾಧಿಸಲು ಶರಣರು ಹೆಣಗಿದ್ದಾರೆ , ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಂತಹ ಮನುಷ್ಯ ನಡುವೆ ಸಮತ್ವ, ಸ್ತ್ರೀ ಪುರುಷರ ನಡುವೆ ಸಮತ್ವ, ಜೀವ ಶಿವರ ನಡುವೆ ಸಮತ್ವ, ಮತ್ತೆ ವರ್ಗಗಳ ನಡುವೆ ಸಮತ್ವ ಹೀಗೆ ಬದುಕಿನ ಆದರ್ಶ ಮಾತು ಕೃತಿಗಳಲ್ಲಿ ಆಗಬಾರದು,
ಆಚರಣೆಗೆ ಬಂದಾಗ ಲಿಂಗವನ್ನ ಪೂಜಿಸಿದ್ದು ಸಾರ್ಥಕವಾಗುತ್ತದೆ.
ಬನ್ನಿ ನಾಳೆದಿನದ ಇಷ್ಟಲಿಂಗ ಪೂಜೆ ನಮ್ಮ ಸದೃಢ ಆರೋಗ್ಯ ಸಮಾಜಕ್ಕಾಗಿ ಮನುಷ್ಯನ ಒಳಹೊರಗು ಸಮಭಾವ ಸ್ಥಿರ ಗೊಳ್ಳಲಿ ಎಂದು ಹಾರೈಸುತ್ತಾ ಸೃಷ್ಟಿಕರ್ತ ಪರಮಾತ್ಮನಿಗೆ ಮೊರೆ ಹೋಗೋಣ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…