ಸುರಪುರ: ನಗರದ ಮೆಡಿಕಲ್‌ಗಳಲ್ಲಿ ಮಧುಮೇಹ ಥೈರಾಯ್ಡ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದ ದೀರ್ಘ ಕಾಲದ ಕಾಯಿಲೆಗಳ ಔಷಧಿ ಸಿಗದಿರುವುದರಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಧುಮೇಹ ಮತ್ತು ಥೈರಾಯ್ಡ್ ಹಾಗು ಹೃದಯ ಸಂಬಂಧಿ ಕಾಯಿಲೆಗಳನ್ನು ಕಲಬುರ್ಗಿ ಬೆಂಗಳೂರು ಮೀರಜ್ ಮತ್ತಿತರೆಡೆಗಳಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಅಲ್ಲಿನ ಮೆಡಿಕಲ್‌ಗಳಲ್ಲಿಯೆ ಔಷಧಿಯನ್ನು ತೆಗೆದುಕೊಂಡು ಬಂದಿರುತ್ತಾರೆ.ನಂತರ ಮತ್ತೆ ಔಷಧಿ ಬೇಕಾದಲ್ಲಿ ಅದೇ ಆಸ್ಪತ್ರೆಗಳಿಗೆ ಪರೀಕ್ಷೆಗಾಗಿ ತೆರಳಿ ಅಲ್ಲಿಯೆ ಪುನಃ ಔಷಧಿ ತೆಗೆದುಕೊಂಡು ಬರುತ್ತಾರೆ.
ಆದರೆ ಈಗ ದೇಶದಲ್ಲಿ ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದರಿಂದ ಅಲ್ಲಿಯ ಮೆಡಿಕಲ್‌ಗಳು ಬಂದಾಗಿವೆ.ಇದರಿಂದ ಸದ್ಯ ಔಷಧಿ ಖಾಲಿಯಾಗಿರುವ ರೋಗಿಗಳು ಔಷಧಿ ಇಲ್ಲದೆ,ಅತ್ತ ಕಲಬುರ್ಗಿ ಬೆಂಗಳೂರುಗಳಲ್ಲಿನ ಖಾಸಗಿ ಮೆಡಿಕಲ್‌ಗಳು ಬಂದಾಗಿದ್ದರಿಂದ ಸಂಕಷ್ಟ ಪಡುವಂತಾಗಿದೆ. ದೀರ್ಘ ಕಾಲದ ಕಾಯಿಲೆಗಳ ಪೀಡಿತರಿಗೆ ಅನುಕೂಲವಾಗಲು ಎಲ್ಲಾ ವಿಧದ ರೋಗಗಳಿಗು ತಾಲೂಕು ಆಸ್ಪತ್ರೆಗಳಲ್ಲಿ ಔಷಧಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕಾದ ಜವಬ್ದಾರಿ ಸರಕಾರದ ಮೇಲಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…