ಕಲಬುರಗಿ: ಸರಕಾರದಿಂದ ವಿತರಿಸಲಾಗುವ ನ್ಯಾಯಬೆಲೆ ಅಂಗಡಿಗಳ ಪಡಿತರ ಪಡೆಯಲು ಬಡವರು ಲಂಚ ಕೊಡಬೇಕಾದ ಅಲಿಖಿತ ಕಾನೂನು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಜಾರಿಯಲ್ಲಿದೆ. ಬೊಟ್ಟು ಒತ್ತಿ ಬೈಯೋಮೆಟ್ರೀಕ್ ನೀಡುವ ಮೂಲಕ ಉಚಿತವಾಗಿ ಪಡಿತರ ಪಡೆಯಬೇಕಾದ ಫಲಾನುಭಗಳಿಂದ ರೂ.೧೦ ರಿಂದ ೪೦ ವರೆಗೆ ಲಂಚ ವಸೂಲಿ ಮಡಲಾಗುತ್ತಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ನಗರ ಘಟಕದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ ಆರೋಪಿಸಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ನಗರದಲ್ಲಿ ಸುಮಾರು ೧೨ ನ್ಯಾಯಬೆಲೆ ಅಂಗಡಿಗಳಿವೆ. ಒಂದು ಅಂಗಡಿಯಲ್ಲಿ ೫೦೦ಕ್ಕೂ ಹೆಚ್ಚು ಬಿಪಿಎಲ್-ಎಪಿಎಲ್ ಪಡಿತರ ಚೀಟಿದಾರರಿದ್ದಾರೆ. ಕೊರೊನಾ ವೈರಸ್ ಹೋರಾಟದಲ್ಲಿ ಲಾಕ್‌ಡೌನ್ ತಂದಿಟ್ಟಿರುವ ಬೀಕರ ದಿನಗಳನ್ನು ಎದುರಿಸುವಲ್ಲಿ ಬಡ ಕುಟುಂಬಗಳು ಹೋರಾಟ ನಡೆಸುತ್ತಿವೆ. ಏ.೧೬ ಕಳೆದರೂ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಾಗಿಲ್ಲ. ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಂದ ಬೈಯೋಮೆಟ್ರೀಕ್ ಪಡೆಯಲು ಲಂಚ ನೀಡಬೇಕಾದ ಪದ್ಧತಿ ಜಾರಿಯಲ್ಲಿದೆ. ಹೋರಾಟಗಾರರು, ಬಡಾವಣೆಯ ಮುಖಂಡರುಗಳು, ಪ್ರಜ್ಞಾವಂತರು ಶುಲ್ಕ ವಸೂಲಿ ಪ್ರಶ್ನಿಸಿದರೆ ಅಂತಹವರಿಗೆ ಲಂಚ ಕೇಳುವುದಿಲ್ಲ. ಕೂಲಿ ನಾಲಿ ಮಾಡಿ ಬದುಕುವ ಬಡ ಜನರಿಗೆ ಲಂಚ ಕೆಲಲಗುತ್ತಿದೆ ಎಂದು ದೂರಿದ್ದಾರೆ.
ಕೊರೊನಾ ವೈರಸ್ ಹಾವಳಿಯಲ್ಲಿ ಬಡ ಜನರು ಕೆಟ್ಟ ದಿನಗಳನ್ನು ನೋಡುತ್ತಿದ್ದಾರೆ. ದುಡಿಮೆ ನಿಂತಿದೆ. ಕೂಡಿಟ್ಟ ಅಲ್ಪಸ್ವಲ್ಪ ಹಣ ಖಾಲಿಯಾಗಿದೆ. ಸಾಲ ಕೊಡುವವರು ಗತಿಯಿಲ್ಲ. ಸರಕಾರ ಕೊಡುವ ಪಡಿತರದ ಅಕ್ಕಿ, ಗೋದಿ ವಿತರಣೆಯ ತೂಕದಲ್ಲೂ ಮೋಸ ನಡೆಯುತ್ತಿದೆ. ವಾಡಿ ನಗರದ ಎಲ್ಲಾ ನ್ಯಾಯಬೆಲೆ ಅಂಗಡಿಯವರು ಬಿಪಿಎಲ್ ಚೀಟಿದಾರರ ಬಳಿ ರೂ. ೧೦ ರಿಂದ ರೂ.೪೦ರಷ್ಟು ಲಂಚ ಪಡೆದು ಪಡಿತರ ವಿತರಿಸುವ ಸಂಪ್ರದಾಯ ಹಾಕಿದ್ದಾರೆ. ನ್ಯಾಯಬೆಲೆ ಅಂಗಡಿವರು ಬಡವರ ಹಸಿದ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದ್ದಾರೆ. ಕೆಲವರು ಸರಿಯಾದ ಸಮಯಕ್ಕೆ ಪಡಿತರ ವಿತರಣೆ ಮಾಡುತ್ತಿಲ್ಲ. ಬಡ ಕುಟುಂಬಗಳ ಸುಲಿಗೆಗೆ ನಿಂತಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ತಪಿತಸ್ಥರ ಅಂಗಡಿ ಪರವಾನಿಗೆ ರದ್ದುಪಡಿಸಬೇಕು ಎಂದು ದೌಲತರಾವ ಒತ್ತಾಯಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…