ಶಹಾಬಾ: ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರದ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ನಗರದ ಶಾಂತನಗರದ ಬಡಾವಣೆಯ ಆಶ್ರಯ ಕಾಲೋನಿಯ ಬಡಜನರಿಗೆ ಹಾಗೂ ನಿರ್ಗತಿಕರ ಕುಟುಂಬದವರಿಗೆ ಆಹಾರ ಪದಾರ್ಥಗಳನ್ನು ನೀಡಿ ಮಾತನಾಡಿದರು.
ದಿನದಿಂದ ದಿನಕ್ಕೆ ಕರೋನಾ ರೋಗ ಹೆಚ್ಚುತ್ತಿದೆ. ಎಲ್ಲರಲ್ಲೂ ಆತಂಕ ಸೃಷ್ಠಿಸಿದೆ. ಈ ರೋಗಕ್ಕೆ ಔಷಧಿಯಿಲ್ಲ. ಮನೆಯಲ್ಲಿರುವುದೇ ಇದಕ್ಕೆ ಮದ್ದು. ಆದ್ದರಿಂದ ಯಾರೂ ಯಾವುದೇ ಕಾರಣಕ್ಕೂ ಅನಾವಶ್ಯವಾಗಿ ಮನೆಯಿಂದ ಹೊರಗೆ ಬರಬೇಡಿ.ನಿಮ್ಮ ವ್ಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಗಮನಕೊಡಿ. ನಿಮ್ಮ ನಿಷ್ಕಾಳಜಿಯಿಂದ ನಿಮ್ಮ ಕುಟುಂಬದ ಸದಸ್ಯರಿಗೆ ತೊಂದರೆ ತರುವಂಥ ಕೆಲಸಕ್ಕೆ ಕೈಹಾಕಬೇಡಿ. ಯಾರಿಗಾದರೂ ಆಹಾರದ ಸಮಸ್ಯೆ ಇದ್ದರೇ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಅಣವೀರ ಇಂಗಿನಶೆಟ್ಟಿ, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ನೀಲಗಂಗಾ ಬಬಲಾದ, ತಹಸೀಲ್ದಾರ ಸುರೇಶ ವರ್ಮಾ, ತಾಪಂ ಇಓ ಲಕ್ಷ್ಮಣ ಶೃಂಗೇರಿ, ಪಿಐ ಅಮರೇಶ.ಬಿ, ಪಿಎಸ್‍ಐ ಮಹಾಂತೇಶ ಪಾಟೀಲ, ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೋಳಕರ್, ಚಂದ್ರಕಾಂತ ಗೊಬ್ಬೂರಕರ್, ಸುಭಾಷ ಜಾಪೂರ, ರವಿ ರಾಠೋಡ, ಸದಾನಂದ ಕುಂಬಾರ,ಕನಕಪ್ಪ ದಂಡಗುಲಕರ್, ಅಣ್ಣಪ್ಪ ದಸ್ತಾಪೂರ,ಭೀಮಯ್ಯ ಗುತ್ತೆದಾರ, ಶ್ರೀಧರ್ ಜೋಷಿ, ಡಿ.ಸಿ.ಹೊಸಮನಿ, ಅಮರ ಕೋರೆ, ಸಂಜಯ ಕೋರೆ, ಶರಣು ಕವಲಗಿ,ದುರ್ಗಪ್ಪ ಪವಾರ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…