ಬಿಸಿ ಬಿಸಿ ಸುದ್ದಿ

ಅಂತರಂಗ, ಬಹಿರಂಗ ಶುದ್ಧಿ ಕಲಿಸಿಕೊಟ್ಟ ಕೊರೊನಾ

ಸರ್ಕಾರದ ನಿಯಮದಂತೆ ಗೃಹಬಂಧನದಲ್ಲಿ ಇದು ವಿಶ್ವದಲ್ಲೆಡೆ ಎದ್ದಿರುವ ಈ ವೈರಾಣುವಿನ ಕೋಲಾಹಲದಿಂದಾಗಿ, ವಿಸ್ಮಯಗೊಂಡ ಈ ಲೋಕ ಬದುಕುವುದು ಬದುಕಲ್ಲ ಆರೋಗ್ಯವಾಗಿ ಬದುಕುವುದೇ ಬದುಕು ಎಂಬ ಸತ್ಯ ಅರಿತು ಕೊಳ್ಳುವಂತಾಗಿದೆ.

ಗುಡಿ ಗುಂಡಾರಗಳು ಆಯಾ ಧರ್ಮ,  ಧರ್ಮದ ಅನುಯಾಯಿಗಳು ಮೂಲೆಗುಂಪಾಗಿ ತನ್ನ ಕೈಯನ್ನು ತಾನೇ ತೋಳೆದುಕೊಳ್ಳುವಂತಾಗಿದೆ. ಜಗತ್ತಿನಲ್ಲಿ ಎದ್ದಿರುವ ಕೊರೆನ ಮಹಾಮಾರಿಯ ಕೋಲಾಹಲದಿಂದ ಮನಸ್ಸಾಕ್ಷಿ ಗಿಂತ ಮತ್ತೇನು ಸಾಕ್ಷಿ ಮುಖ್ಯವಲ್ಲ ಎಂಬ ಅರಿವು ಮೂಡಿಸಿದೆ.

ಒಬ್ಬ ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ನಕರಾತ್ಮಕ ಧೋರಣೆಯನ್ನು ಕಡಿಮೆ ಮಾಡಿಕೊಂಡು,   ಸಕಾರಾತ್ಮವಾಗಿ ವಿಚಾರಿಸುವ ಮನೋಧೈರ್ಯ ತಂದು ಕೊಟ್ಟಂತಾಗಿದೆ,  ಇದೇ ವಿಚಾರದ ಮೇರೆಗೆ ಇಂತಹ ಸಮಯದಲ್ಲಿ ಮನೆ ಕೆಲಸದವರ ಮಹತ್ವ ಗೊತ್ತಾಯ್ತು. ಸಮಯದ ಅರಿವು ಮೂಡಿತು,  ಕೂಲಿ ಕಾರ್ಮಿಕರ ಕೆಲಸ ಮಾಡುವಂತಹ ಜೀವನದ ಸತ್ಯ ನಮಗೆ ಅರಿವಿಗೆ ಬಂದಿದೆ ಎಂದು ಹೇಳಬಹುದು.

ಈ ಕೊರೊನಾ ವೈರಾಣುವನ್ನೂ ಸಕರಾತ್ಮಕವಾಗಿ ತೆಗೆದುಕೊಂಡಲ್ಲಿ ಇದು ಪ್ರಕೃತಿಯ ಒತ್ತಡ ಕಡಿಮೆ ಮಾಡಿ ಜೊತೆಗೆ ಇಡೀ ಜಗತ್ತಿಗೆ ಪಾಠ ಕಲಿಸಿದೆ, ಅಷ್ಟೇ ಅಲ್ಲದೆ ಮನುಷ್ಯನ ಸ್ವಾರ್ಥ ದುರಾಸೆ ಗೆ ತಿರುಗೇಟು ಕೊಟ್ಟು  ಯಾವ ಪ್ರಾಣಿ ಪಕ್ಷಿ ಗೆ ಬರದ ವೈರಾಣು ಮನುಷ್ಯನನ್ನೇ ತಿಂದು ಹಾಕಿ ಚಾಟಿಯೇಟು ನೀಡಿದೆ ಎನ್ನಬಹುದು.

ಜೀವನದಲ್ಲಿ ನಿಜಕ್ಕೂ ಮನುಷ್ಯನಿಗೆ ಅಗತ್ಯ ಇರುವುದು ಏನು ಮತ್ತು ಯಾಕೆ? ಎನ್ನುವ ಪ್ರಶ್ನೆ ಅರಿತಂತೆ ಆಗಿದೆ. ಇವತ್ತು ಹಣ ಆಸ್ತಿ ಪ್ರಯೋಜನ ಇಲ್ಲ ಎನ್ನುವ ಸತ್ಯ ಗೊತ್ತಾಯ್ತು. ಮನೆ ಜವಾಬ್ದಾರಿ ಹೆಚ್ಚಿದೆ. ಮಕ್ಕಳ ಒಡನಾಟದಲ್ಲಿ ದಿನ ಬೆಳಿಗ್ಗೆ ಸಂಜೆ ಯಾವುದು ಅರಿವಿಗೆ ಬಾರದೆ ಎಲ್ಲೋ ಒಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಇರುವಂತಹ ಸಮಾಚಾರಗಳನ್ನು ನೋಡಿ ಮನಸ್ಸು ತಲ್ಲಣ ಗೊಳ್ಳುತ್ತಿದೆ ಆದರೂ ಸಹಿತ ಕುಟುಂಬದವರೊಡನೆ ಮಕ್ಕಳ ಜೊತೆ ಒಡನಾಟ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಆಸ್ಪದ ಮಾಡಿಕೊಟ್ಟಿದೆ ಎನ್ನಬಹುದು. ನಿಜದಲ್ಲಿ ಇದರಿಂದ ಪಾಠ ಕಲಿತಿದ್ದು ಪ್ರತಿಯೊಬ್ಬ ಮನುಷ್ಯ ನಾನೇ ಎಂಬ ಅಹಂಕಾರ ಇಳಿದು ಮನುಷ್ಯ ಜನ್ಮ ಬಗ್ಗು ಬಡಿದಂತಾಗಿದೆ. ಜೊತೆಗೆ ನಮಗೆ ಗಿಡಮರ ನೆಡಬೇಕು ಪ್ರಕೃತಿಯನ್ನು ಕಾಪಾಡಬೇಕು ನೀರಿನ ಮಹತ್ವ ಗೊತ್ತಾಗಿದೆ , ಒಟ್ಟಾರೆ ಜೀವನದಲ್ಲಿ  ನಾವು ಹೇಗೆ ಬದುಕಬೇಕು ಎಂಬ ಅರಿವು ಮೂಡಿಸಿದೆ.

ಶುದ್ಧವಾಗಿ ಶುಭ್ರವಾಗಿ ಅಂತರಂಗ-ಬಹಿರಂಗ ಎರಡು ಹೇಗೆ ಇಟ್ಟುಕೊಳ್ಳಬೇಕು ಎಂಬ ದೊಡ್ಡ ಪಾಠ ಜೊತೆಗೆ ಮಾನವೀಯ ಮೌಲ್ಯಗಳು ತಿಳಿಯುವಂತಾಗಿದೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು  ಬೇಡ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ.

ವಿಶ್ವಗುರು ಬಸವಣ್ಣನವರ ಈ ವಚನದ ಸಾರಾಂಶ ನಿಜದಲ್ಲಿ ಇವತ್ತು ಇಡೀ ಜಗತ್ತಿಗೆ ಅರಿತಂತಿದೆ.

ಮೇನಕಾ ಪಾಟೀಲ್, ಶರಣ  ಸಾಹಿತಿ, ಬೀದರ್
emedialine

Recent Posts

ಎಂ.ಎಸ್ ಇರಾಣಿ ವಿದ್ಯಾರ್ಥಿಗೆ ದ್ವೀತಿಯ ಸ್ಥಾನ

ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…

6 mins ago

ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…

14 mins ago

ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಹಕ್ಕು ಪತ್ರ ನೊಂದಣಿ ಖಾತ ಪ್ರತಿ ವಿತರಣೆ

ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ  ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ  ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…

15 mins ago

ಸಂವಿಧಾನ ದಿನಾಚರಣೆ

ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…

17 mins ago

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪೆÇೀಲೀಸ್ ಇಲಾಖೆಗೆ ಅಭಿನಂದನೆ

ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…

21 mins ago

ಲೋಕೋಪಯೋಗಿ ಕಚೇರಿ ಮುಂದೆ ನಮ್ಮ ಕರ್ನಾಟಕ ಸೇನೆಯಿಂದ ಧರಣಿ ಸತ್ಯಾಗ್ರಹ

ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ  ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…

27 mins ago