ಕಲಬುರಗಿ: ಮನುಷ್ಯನಿಗೆ ಮನುಷ್ಯನ ರಕ್ತವನ್ನೇ ನೀಡಬೇಕು ಆದರೆ, ಅನೇಕರಿಗೆ ರಕ್ತದಾನ ಮಾಡಲು ಆಸಕ್ತಿ ಇಲ್ಲ. ಲಕ್ಷಾಂತರ ಮಂದಿ ರಕ್ತಸ್ರಾವದಿಂದಾಗಿ ಜೀವ ಉಳಿಸಿಕೊಳ್ಳಲು ಜೀವನ್ಮರಣ ಹೋರಾಟ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ಸಂಚಾರಿ ಪೊಲೀಸ್ ಅಧಿಕಾರಿ ರಮೇಶಕುಮಾರ ಕಾಂಬಳೆ ಅವರು ಸಲಹೆ ನೀಡಿದರು.
ನಗರದ ನ್ಯೂ ಘಾಟಗೆ ಲೇಔಟ್‌ನ ಬುದ್ಧ ವಿಹಾರದ ಆವರಣದಲ್ಲಿ ರಿಪಬ್ಲೀಕನ್ ಯೂತ್ ಫೆಡ್ರೇಷನ್ ವತಿಯಿಂದ ಹಮ್ಮಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೨೯ನೇ ಜಯಂತಿ ಪ್ರಯುಕ್ತ ಉಚಿತ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಿಪಬ್ಲೀಕನ್ ಯೂತ್ ಫೆಡ್ರೇಷನ್ ಸಂಘಟನೆಯ ಸಂಚಾಲಕ ಹನುಮಂತ ಇಟಗಿ ಅವರು ಮಾತನಾಡಿ, ರಕ್ತದ ಬಗ್ಗೆ ಜಾಗೃತಿ ಇಲ್ಲದ ಕಾರಣ ರಕ್ತದಾನ ಮಾಡುವುದಕ್ಕೆ ಯಾರು ಮುಂದೆ ಬರುತ್ತಿಲ್ಲ. ಇದರಿಂದ ರಕ್ತ ಸಂಗ್ರಹ ಕಡಿಮೆಯಾಗುತ್ತಿದೆ. ಆದರೆ ದೇಶದಲ್ಲಿ ರಕ್ತದ ಕೊರತೆಯಿಂದ ಲಕ್ಷಾಂತರ ಜನರು ಆಸ್ಪತ್ರೆಯಲ್ಲೇ ಮೃತಪಡುತ್ತಿದ್ದಾರೆ. ಹೀಗಾಗಿ ರಕ್ತದಾನ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದು ಅವರು ಹೇಳಿದರು.
ಅಶೋಕ ಕಪನೂರ, ತ್ಯಾಗರಾಜ ಸಾಗರ, ಸಾಯಿ ಕಪನೂರ, ಸಿದ್ಧಾರ್ಥ ವಾರೆ, ವಿದ್ಯಾಸಾಗರ ಬಬಲಾದ, ಸತೀಶ ಕಲಕೇರಿ, ಸಾತಪ್ಪ ಭಜಂತ್ರಿ, ರಾಘವೇಂದ್ರ ಕಿರಸಾವಳಗಿ, ಸುನೀಲ ಕಟ್ಟಿಮನಿ, ದಿಲೀಪ, ಕಿರಣ ಮೊರೆ, ಶ್ರೀನಿವಾಸ ಕಾಂಬಳೆ ಸೇರಿದಂತೆ ಮುಂತಾದವರು ಉಚಿತ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘರಾಜ ವಾಲಿಕರ್, ಸಂಚಾಲಕ ಹನುಮಂತ ಇಟಗಿ, ಕಾರ್ಯಾಧ್ಯಕ್ಷ ಸಂತೋಷ ಮೇಲ್ಮನಿ, ನಾಗೇಂದ್ರ ಜವಳಿ, ನಗರಾಧ್ಯಕ್ಷ ಶೀವಕುಮಾರ ಜಾಲವಾದ, ಡಾ.ಅನೀಲ್ ಟೆಂಗಳಿ, ಬಾಲಾಜಿ ಜೆ. ಚಿತ್ತೇಕರ್, ಅನೀಲ್ ದೇವರಮನಿ, ಅಂಬರೀಶ್ ಅಂಬಲಗಿ, ರಾಣು ಮುದ್ದನಕರ್, ವಿಘ್ನೇಶ್ವರ ಟೈಗರ್, ಶಶಿ ಆಲೂರ್ಕರ್, ಅರುಣಕುಮಾರ ಗಡ್ಡದ, ವಿದ್ಯಾಸಾಗರ ಬಬಲಾದಕರ್, ಚಿದಾನಂದ ಕುಡ್ಡನ್, ಸಿದ್ಧಾರ್ಥ ಪಾರೆ, ರಮೇಶ ಹಾಗರಗಿ, ಮಹೇಶ ನವಲಗಿರಿ, ಮಯೂರ್ ವಾಘಮೋರೆ, ರುಕ್ಕೆಶ್ ಬಚ್ಚನ್, ಅನೀಲ ಸಾಜರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…