ಭಾಲ್ಕಿ: ಪೂಜ್ಯ ಅಪ್ಪಗಳ ಸ್ಮರಣೋತ್ಸವ ೨೦ ವರ್ಷಗಳಿಂದ ಸತತವಾಗಿ ಶ್ರೀಮಠದ ಸದ್ಭಕ್ತರೆಲ್ಲರು ಕೂಡಿ ಪ್ರತಿವರ್ಷ ಏಪ್ರಿಲ್ ೨೨ ರಂದು ಅರ್ಥಪೂರ್ಣವಾಗಿ ಆಚರಿಸುತ್ತ ಬರಲಾಗಿದೆ. ಈ ವರ್ಷ ಕೊರೊನಾ ವೈರಸ್‌ದಿಂದಾಗಿ ಇಡೀ ವಿಶ್ವವೇ ತತ್ತರಗೊಂಡಿದೆ. ಹೀಗಾಗಿ ಎಲ್ಲಿಯೂ ಜಾತ್ರೆ, ಸಭೆ, ಸಮಾರಂಭಗಳು ಸಾಮೂಹಿಕವಾಗಿ ಆಚರಿಸುತ್ತಿಲ್ಲ. ಆದ್ದರಿಂದ ಏ.22 ರಂದು ಶ್ರೀಮಠದ ಎಲ್ಲ ಸದ್ಭಕ್ತರು ತಮ್ಮ ಮನೆಗಳಲ್ಲಿಯೇ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ 21ನೇ ಸ್ಮರಣೋತ್ಸವ ಲಿಂಗಪೂಜೆ ಮತ್ತು ಪ್ರಾರ್ಥನೆ ಮಾಡುವ ಮೂಲಕ ಸರಳವಾಗಿ ಆಚರಿಸಲು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಸೂಚಿಸಿದ್ದಾರೆ. ಎಲ್ಲ ಸದ್ಭಕ್ತರು ಸಹಕರಿಸಲು ಕೋರಲಾಗಿದೆ.
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಮಣಿಹ ಹೊತ್ತು ಇಪ್ಪತ್ತನೇ ಶತಮಾನದಲ್ಲಿ ಶರಣ ತತ್ವವನ್ನು ಕೇವಲ ಉಪದೇಶ ಮಾಡದೆ ಬದುಕಿನ ಭಾಗವಾಗಿಸಿಕೊಂಡ ’ಕಾಯಕ ಪರಿಣಾಮಿಗಳು. ಪರಭಾಷೆ ಒಡೆತನದಿಂದ ಕಮರಿ ಹೋಗಿದ್ದ ಕನ್ನಡ ಭಾಷೆಗೆ ಎಲ್ಲ ಕಷ್ಟಗಳನ್ನು ಎದುರಿಸಿ ಕಾಯಕಲ್ಪ ನೀಡಿ ಬಸವತತ್ವ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದವರು. ಜನತೆಯ ಅರಿವಿನ ಪರಿಧಿ ವಿಸ್ತರಿಸಲು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಈ ಭಾಗದ ಶೈಕ್ಷಣಿಕ ಶಿಸ್ತನ್ನು ಬೆಳೆಸಿದವರು. ಬಸವಕಲ್ಯಾಣದಲ್ಲಿ ಹನ್ನೆರಡು ವರ್ಷಗಳ ಕಾಲ ನಿಂತು ಅಭಿನವ ಅನುಭವಮಂಟಪ ನಿರ್ಮಾಣ ಮಾಡಿಸಿದ್ದು ಐತಿಹಾಸಿಕ ದಾಖಲೆಗಳಾಗಿವೆ. ಹೀಗೆ ಹತ್ತು ಹಲವು ವಿಧಾಯಕ ಕಾರ‍್ಯಯೋಜನೆಗಳ ಮೂಲಕ ಶ್ರೀಗಳು ಜನಮಾನಸದಲ್ಲಿ ಈವತ್ತಿಗೂ ನಡೆದಾಡುವ ದೇವರಾಗಿ ನೆಲೆನಿಂತಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…