ಬಿಸಿ ಬಿಸಿ ಸುದ್ದಿ

ಘನತ್ಯಾಜ್ಯ ಘಟಕ ಸೇರಿದ ಬಡವರ ಅಕ್ಕಿ: ಆಕ್ರೋಶ

ವಾಡಿ: ಕೊರೊನಾ ಸಾಂಕ್ರಾಮಿಕ ರೋಗದ ಬಾಹುವಿನಲ್ಲಿ ಬಂಧಿಯಾಗಿರುವ ಸೀಲ್‌ಡೌನ್ ಬಡಾವಣೆಗಳ ಬಡ ಕುಟುಂಬಗಳಿಗೆ ವಿತರಿಸಬೇಕಾದ ಆಹಾರ ದಾಸ್ತಾನಿನ ಕಿಟ್‌ಗಳು ಘನತ್ಯಾಜ್ಯ ಘಟಕದಲ್ಲಿ ಬಿದ್ದು ಕೊಳೆಯುತ್ತಿವೆ. ಅರ್ಹರಿಗೆ ಹಂಚಿಕೆ ಮಾಡದೆ ಅಧಿಕಾರಿಗಳು ಬಡವರ ಹೊಟ್ಟೆಗೆ ಹೊಡೆಯುತ್ತಿದ್ದಾರೆ ಎಂದು ಸ್ಥಳೀಯ ಪುರಸಭೆ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ದೇವಿಂದ್ರ ಕರದಳ್ಳಿ ಆರೋಪಿಸಿದ್ದಾರೆ.

ಪುರಸಭೆಯಲ್ಲಿರುವ ತಮ್ಮದೇ ಆಡಳಿತದ ವಿರುದ್ಧ ಗುಡುಗಿರುವ ಕರದಳ್ಳಿ, ರವಿವಾರ ಘನತ್ಯಾಜ್ಯ ಘಟಕದ ಮೇಲೆ ದಾಳಿ ನಡೆಸುವ ಮೂಲಕ ಕಸದೊಂದಿಗೆ ಕೊಳೆಯುತ್ತಿದ್ದ ೩೦೦ ಆಹಾರ ದಾಸ್ತಾನಿನಿ ಕಿಟ್‌ಗಳನ್ನು ಪತ್ತೆಹಚ್ಚಿದ್ದಾರೆ. ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣಕ್ಕೆ ವಾಡಿ ಪುರಸಭೆ ವ್ಯಾಪ್ತಿಯ ೧೧, ೧೨, ೧೩, ೧೪ ವಾರ್ಡ್‌ಗಳನ್ನು ಎಸ್‌ಪಿ ಯಾಡಾ ಮಾರ್ಟೀನ್ ಅವರು ಸೀಲ್‌ಡೌನ್ ಮಾಡಿದ್ದಾರೆ. ಒಟ್ಟು ಒಂಬತ್ತು ಸ್ಲಂ ಬಡಾವಣೆಗಳಿವೆ.

ಕೊರೊನಾ ಸೋಂಕು ಪತ್ತೆಯಾದ ವಾಡಿ ನಗರದ ಸೀಲ್‌ಡೌನ್ ಬಡಾವಣೆಗಳ ಪಡಿತರ ಚೀಟಿ ವಂಚಿತ ಅತ್ಯಂತ ಕಡುಬಡ ಕುಟುಂಬಗಳಿಗಾಗಿ ಒಟ್ಟು ೩೦೦ ಆಹಾರ ಕಟ್‌ಗಳು ಬಂದಿವೆ. ಅಕ್ಕಿ, ಬೇಳೆ, ಎಣ್ಣೆ ಜತೆಗೆ ಈರುಳ್ಳಿ ಮತ್ತು ಆಲುಗಡ್ಡೆ ಸೇರಿಸಿ ಕಿಟ್ ಸಿದ್ಧಪಡಿಸಿರುವುದರಿಂದ ಈರುಳ್ಳಿ ವಾಸನೆ ಹೊಡೆಯುತ್ತಿವೆ. ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸೀಲ್‌ಡೌನ್ ಏರಿಯಾಗಳಲ್ಲಿ ಪಡಿತರ ಚೀಟಿ ವಂಚಿತರನ್ನು ಮೊದಲು ಪತ್ತೆ ಹಚ್ಚಲಾಗುತ್ತಿದೆ. ಇದಕ್ಕಾಗಿಯೇ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಹಾಗೂ ಫುಡ್ ಅಫೀಸರ್ ಮನೋಹರ ಹಾದಿಮನಿ ಅವರನ್ನೊಳಗೊಂಡ ತಂಡ ರಚಿಸಲಾಗಿದೆ. ಪಡಿತರ ಚೀಟಿ ಇಲ್ಲದವರು ಪುರಸಭೆ ಕಚೇರಿಯನ್ನು ಸಂಪರ್ಕಿಸಿ ಆಹಾರ ಸಾಮಾಗ್ರಿಯ ಕಿಟ್ ಪಡೆದುಕೊಳ್ಳಬೇಕು. ಪಡಿತರ ಚೀಟಿ ಇದ್ದವರಿಗೂ ಆಹಾರದ ಕಿಟ್ ಕೊಡುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ಇದು ನಿಯಮ ಬಾಹೀರ. – ವೆಂಕನೌಡ ಪಾಟೀಲ, ಉಪ ತಹಶೀಲ್ದಾರ್ ನಾಲವಾರ.

ದಿನಗೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಲಾಕ್‌ಡೌನ್ ಘೋಷಣೆಯಾದಂದಿನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲ. ಹೊಟ್ಟೆಗೆ ಹಿಟ್ಟು ಸಹ ಸಿಗದಂತಹ ಪರಸ್ಥಿತಿ ಸೃಷ್ಠಿಯಾಗಿದೆ. ಬಡವರು ಅನ್ನಕ್ಕೆ ಕೈಚಾಚುತ್ತಿದ್ದಾರೆ. ಇಂಥಹ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಂಚಿಕೆ ಮಾಡಲು ಬಿಡುಗಡೆಯಾಗಿರುವ ಅಕ್ಕಿ, ಬೆಳೆ, ಎಣ್ಣೆ, ಆಲುಗಡ್ಡೆ, ಈರುಳ್ಳಿ ಒಳಗೊಂಡ ಕಿಟ್‌ಗಳು ಘನತ್ಯಾಜ್ಯ ಘಟಕದಲ್ಲಿಟ್ಟು ಕೊಳೆಸಲಾಗುತ್ತಿದೆ. ಈರುಳ್ಳಿಗಳು ಕೊಳೆತು ಗಬ್ಬೆದ್ದು ನಾರುತ್ತಿವೆ. ಆದರೂ ಪುರಸಭೆ ಅಧಿಕಾರಿಗಳು ಬಡವರಿಗೆ ಕಿಟ್ ವಿತರಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ದೂರಿರುವ ದೇವಿಂದ್ರ ಕರದಳ್ಳಿ, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಸೇರಿದಂತೆ ಬೇಜವಾಬ್ದಾರಿ ತೋರಿದ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago