ಕಲಬುರಗಿ: ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನದಲ್ಲಿ ಐವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 27ಕ್ಕೆ ತಲುಪಿದ್ದು, ಮೂವರು ಸಾವನಪ್ಪಿದ್ದಾರೆ.
ಐವರಿಗೆ ಸೋಂಕು ಪತ್ತೆಯಾಗಿದ್ದು, ಓರ್ವ ಮಹಿಳೆಯಾಗಿದ್ದಾರೆ. ಸುಲ್ತಾನ್ ಸಿಲ್ಕ್ ಹೌಸ್ ರೋಗಿ ಸಂಖ್ಯೆ P205 ಸಂಪರ್ಕದಿಂದ 19 ಮತ್ತು 13 ವರ್ಷದ ಯುವಕರಿಗೆ ಸೇರಿ 30 ವರ್ಷದ ಮಹಿಳೆಗೆ ತಗುಲಿದೆ. ಅದೇ ರೀತಿ ಕಲಬುರಗಿಯ ಇನ್ನೊಂದು ರೋಗಿ ಸಂಖ್ಯೆ P175 ಸಂಪರ್ಕದಿಂದ 17 ವರ್ಷದ ಯುವಕನಿಗೆ ಹರಡಿದೆ. P177 ರೋಗಿಯ ಸಂಪರ್ಕದಿಂದ 50 ವರ್ಷದ ವ್ಯಕ್ತಿಗೆ ತಗಲಿರುವುದಾಗಿ ಖಚಿತ ಪಟ್ಟಿದೆ.
ಸದ್ಯ ಪೀಡಿತರ ಮನೆಗಳ ಸುತ್ತಮುತ್ತ ನಿವಾಸಿಗಳಿಗೆ ಏಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಜಿಲ್ಲಾಡಳಿತ ಸೋಂಕು ಪೀಡಿತರ ಸಂಪರ್ಕ ಹೊಂದಿದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದೆ.
ಪೀಡಿತರನ್ನು ಕಲಬುರಗಿಯ ಇ.ಎಸ್.ಐ.ಸಿ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಂದೇ ದಿನದಲ್ಲಿ ಐವರು ಪೀಡಿತರ ಸಂಖ್ಯೆ ಪತ್ತೆಯಾಗಿದ್ದು, ಜಿಲ್ಲೆಯನ್ನು ಬೆಚ್ಚಿ ಬಿಳಿಸಿದೆ. ಆತಂಕಕ್ಕೆ ಎಡೆಮಾಡಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…