ವಾಡಿ:ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ಲಾಕ್ ಡೌನ್ ನಿಯಮ ಪಾಲಿಸಿ ಸರಳವಾಗಿ ಆಚರಿಸುವಂತೆ ಚಿತ್ತಾಪುರ ಸಿಪಿಐ ಪಂಚಾಕ್ಷರಿ ಸಾಲಿಮಠ ತಿಳಿಸಿದರು.
ರಂಜಾನ್ ಹಬ್ಬ ಹಾಗೂ ಬಸವ ಜಯಂತಿ ಪ್ರಯುಕ್ತ ವಾಡಿ ಪೋಲಿಸ್ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋರೊನಾ ಹಿನ್ನೆಲೆ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು. ಈ ಬಾರಿಯ ರಂಜಾನ್ ಹಾಗೂ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಾಮಾಜೀಕ ಅಂತರ ಕಾಯ್ದುಕೊಂಡು ಸರಳವಾಗಿ ಆಚರಿಸುವ ಮೂಲಕ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಒಂದು ವೇಳೆ ನಿಯಮ ಉಲ್ಲಂಘಿಸಿ ಆಚರಣೆಗೆ ಮುಂದಾದರೆ ಅಂತವ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕ್ಕೆ ನೀಡಿದರು.
ಕೋರೋನಾ ಕಪ್ರ್ಯೂ ಹಿನ್ನೆಲೆ ಈ ಬಾರಿಯ ರಂಜಾನ್ ಉಪವಾಸ ಪ್ರಾರ್ಥನೆಯನ್ನು ಮನೆಯಲ್ಲಿ ಆಚರಿಸಿ. ಯಾವುದೆ ಕಾರಣಕ್ಕೂ ಮಸೀದಿಗಳಲ್ಲಿ ಗುಂಪು ಸೇರಿ ಪ್ರಾರ್ಥನೆ ಮಾಡುವುದು ಉಪವಾಸ್ ಬಿಡುವುದು ಮಾಡದೆ ಸರಳವಾಗಿ ನಿಷೇಧಾಜ್ಞೆ ಉಲ್ಲಂಘನೆ ಮಾಡದೆಂತೆ ಸರ್ಕಾರದ ಆದೇಶ ಪಾಲಿಸಿ ಹಬ್ಬ ಆಚರಿಸುವ ಮೂಲಕ ಕೋರೋನಾ ಹೊಡೆದೊಡಿಸಲು ಸಹಾಕರಿಸುವಂತೆ ಮನವಿ ಮಾಡಿದರು.
ವಾಡಿ ಅಪರಾಧ ವಿಭಾಗ ಪಿಎಸ್ಐ ದಿವ್ಯ ಮಾಹದೇವ, ಮುಖಂಡರಾದ ಮಹಮೂದ್ ಸಾಹೇಬ್, ಫಿರೋಜ್ ಖಾನ್, ವೀರಣ್ಣ ಯಾರಿ, ಬಾಬು ಮಿಯಾ, ಮೊಹಮ್ಮದ್ ಗೌಸ್, ಅಶೋಕ್ ಸೂರ್ಯವಂಶಿ, ಶರಣಗೌಡ ಚಾಮನೂರ್, ಸಿದ್ದು ಪಂಚಾಳ, ಸುಧಾಕರ ಗಾಯಕವಾಡ, ಶರಣು ನಾಟೇಕರ್, ಶಮ್ಶೀರ್ ಅಹ್ಮದ್, ರವಿಕುಮಾರ ಸಿಂಗೆ, ಜಹೂರ್ ಖಾನ್, ಶರಣಪ್ಪ ವಾಡೇಕರ್, ಪೋಲಿಸ್ ಸಿಬ್ಬಂದಿಗಳಾದ ದತ್ತಾತ್ರೇಯ ಜಾನೆ, ದೊಡ್ಡಪ್ಪ, ಶಬ್ಬಿರ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…