ಶಹಾಬಾದ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ತಾಲೂಕಾಢಳಿತ ನಗರದಲ್ಲಿ ಬೇಕಾಬಿಟ್ಟಿಯಾಗಿ ತಿರುಗುವವರಿಗೆ ಬ್ರೇಕ್ ಹಾಕಲು ಕಠಿಣ ಕ್ರಮಕೈಗೊಂಡಿದೆ.
ಈಗಾಗಲೇ ಮಡ್ಡಿ ರೇಲ್ವೆ ಗೇಟ್ ಬಡಾವಣೆ ಹೋಗುವ ರಸ್ತೆ ಹಾಗೂ ಹಳ್ಳದ ರಸ್ತೆ ಎರಡು ಕಡೆ ಬಡಾವಣೆಯ ಹೊರಗೆ ಹಾಗೂ ಒಳಗೆ ಹೋಗದಂತೆ ಸಂಪೂರ್ಣ ಬಂದ್ ಮಾಡಲಾಗಿದೆ.ಅನಾವಶ್ಯಕವಾಗಿ ಔಷಧ ಅಂಗಡಿಗೆ, ಬ್ಯಾಂಕ್‌ಗೆ, ಕಿರಾಣಾ ತರಲು ಹೋಗುವದಿದೆ ಎಂದು ಬೇಕಾಬಿಟ್ಟಿಯಾಗಿ ಜನರು ನಗರದಲ್ಲಿ ತಿರುಗಾಡುತ್ತಿದ್ದಾರೆ.ಎಷ್ಟೇ ತಿಳಿಹೇಳಿದರೂ ಕೇಳುತ್ತಿಲ್ಲ.ಆದ್ದರಿಂದ ಮುಂಜಾಗೃತವಾಗಿ ಕ್ರಮವಾಗಿ ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕುವುದರ ಮೂಲಕ ನಗರದೊಳಗೆ ಹೋಗದಂತೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ಕೇವಲ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನಿತರ ವ್ಯಕ್ತಿಗಳು ಬಂದರೆ ಅವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ.
ನಗರದಲ್ಲಿ ಕಿರಾಣಾ ಪದಾರ್ಥಗಳನ್ನು ಖರೀದಿಸುವವರು ಅಂಗಡಿಗೆ ನಡೆದುಕೊಂಡು ಒಬ್ಬರೇ ಬರಬೇಕು.ಬೈಕ್, ವಾಹನವನ್ನು ತರಲು ಅವಕಾಶವಿಲ್ಲ. ಅದನ್ನು ತಮ್ಮ ಏರಿಯಾದ ಸಮೀಪದ ಕಿರಾಣಾ ಅಂಗಡಿಯಲ್ಲೇ ಖರಿದಿಸತಕ್ಕದ್ದು.ಅದನ್ನು ಬಿಟ್ಟು ಬಜಾರ ಬರುವುದಕ್ಕೆ ನಿರ್ಬಂಧಿಸಲಾಗಿದೆ. ಒಂದು ವೇಳೆ ನಿಯಮವನ್ನು ಗಾಳಿಗೆ ತೂರಿ ಬೈಕ್ ತಂದರೆ ಸೀಜ್ ಮಾಡಲಾಗುವುದು. ಜನಸಂದಣಿ ತಡೆಯಲು ಕಿರಾಣಾ ಅಂಗಡಿಗಳಿಗೆ ಬೆಳಿಗ್ಗೆ ೫ರಿಂದ ೧೨ರವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಅಂಗಡಿಗಳಲ್ಲಿ ೬೦ ವರ್ಷದ ಮೇಲ್ಪಟ್ಟ ವ್ಯಕ್ತಿಗಳು ಇರಕೂಡದು.ಅಲ್ಲದೇ ಅಂಗಡಿಯವರು ಒಬ್ಬ ವ್ಯಕ್ತಿ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಪಾಡಲು ನಿಯೋಜಿಸಬೇಕು. ಒಂದು ವೇಳೆ ಸಾಮಾಜಿಕ ಅಂತರ ಕಾಪಾಡದಿದ್ದರೇ ಅಂತ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯದ ಸಮಸ್ಯೆ ಇದ್ದರೇ ಮಾತ್ರ ಬೈಕ್ ಮೇಲೆ ರೋಗಿಗಳನ್ನು ತರಬಹುದು.ಅದನ್ನು ಬಿಟ್ಟು ಅನಾವಶ್ಯಕವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ನಿರ್ಧರಿಸಿದ್ದೆವೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…