ಬಿಸಿ ಬಿಸಿ ಸುದ್ದಿ

ಮತ್ತೆ ಹುಟ್ಟಿ ಬಾ ಬಸವಣ್ಣ

ಬಸವಣ್ಣ ಲೋಕ ಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನಗೆ ತಾನೆ ಕಾಲ್ತೆಗೆಯುವುದೋ ಹಾಗೆ ಬವವಣ್ಣ ಇರುವಲ್ಲಿ ಜಾತಿ ಸೂತಕ ಇಲ್ಲ. ಮತ ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ, ಜಾಣ-ದಡ್ಡನಿಲ್ಲ, ಸ್ತ್ರೀ-ಪುರುಷ ಎಂಬ ಲಿಂಗಭೇಧವಿಲ್ಲ. ಲಂಚ-ವಂಚನೆಗಳಿಲ್ಲ, ದರ್ಪ-ದಬ್ಬಾಳಿಕೆ ಇಲ್ಲ. ಇಲ್ಲಿ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು, ಒಟ್ಟಿನ ಮೇಲೆ ಈ ನೆಲ ನೆಮ್ಮದಿಯ ನೆಲೆವನೆಯಾಗಬೇಕು. ಇದು ಬಸವಮಾರ್ಗ, ಶರಣಮಾರ್ಗದ ಕನಸು.

೮೫೦ ವರ್ಷಗಳ ಹಿಂದೆ ಇದನ್ನು ನನಸು ಮಾಡಿದ್ದ ಬಸವಣ್ಣ ಇಂದು ಇಲ್ಲ. ಬಸವಣ್ಣ ಹೋದ ಮೆಲೆ ಇಲ್ಲಿ ಎಲ್ಲ ಬಗೆಯ ಅಸಮಾನತೆ ತಲೆ ಎತ್ತಿವೆ. ಜಾತಿ ವ್ಯತ್ಯಾಸ ಕುಣಿಯುತ್ತಿದೆ. ಮತ ಮೌಢ್ಯ ಮೇರೆ ಮೀರಿದೆ. ಬಡವ-ಬಲ್ಲಿದರ ಅಂತರ ನಿರಂತರ ನಡೆದಿದೆ. “ಸಾಕ್ಷರ” ಎಂಬುದು ತಿರುವು-ಮುರುವು ಆಗಿ”ರಾಕ್ಷಸ” ಆಗಿದೆ. ಧರ್ಮದೊಂದಿಗೆ ದಯೆ ಬೆರೆಯುತ್ತಿಲ್ಲ. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಮಿತಿ ಎಂಬುದಿಲ್ಲ. ಲಂಚ-ವಂಚನೆ-ಭ್ರಷ್ಟಾಚಾರಕ್ಕೆ ಇಲ್ಲಿ ಅಗ್ರಪಟ್ಟ್ಟ! ಸಮಬಾಳು ಸಮಪಾಲುಗಳು ಸಾವಿರ ಮೈಲು ದೂರ!

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೆ?
ಕೂಡಲಸಂಗಮದೇವ.

ಬದುಕಿಗೆ ಬೆಲೆ ಕೊಟ್ಟ ವಚನಕಾರರು ಬದುಕನ್ನು ಸ್ವೀಕರಿಸುವ ಕ್ರಮ, ಮಾರ್ಗದರ್ಶನ ಮಾಡಿದರು. ಅವು ಇಂದಿಗೂ ಪ್ರಸ್ತುತ ಪ್ರೇರಣೆಯಾಗಿವೆ. ಆಧುನಿಕ ತಾಂತ್ರಿಕ ಉತ್ಕರ್ಷದಲ್ಲಿರುವ ಈ ಹೊತ್ತಿಗೂ ವಚನ ಅನ್ನುವುದು ಒಂದು ಪ್ರಜ್ಞೆಯಾಗಿಯೇ ಕಾಡುವ ಮಹತ್ವ ಪಡೆದಿದೆ. “ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ” ಎಂಬ ನಾಣ್ನುಡಿಯಂತೆ ಸತ್ಯಕ್ಕೆ ಮುಖಾಮುಖಿಯಾಗುವ ಬದುಕಿನ ಬಹುದೊಡ್ಡ ಎಚ್ಚರವನ್ನು ವಚನ ಸಾಹಿತ್ಯ ನಮಗೆ ಕಲಿಸಿದೆ. ಬಸವಣ್ಣನವರ ಈ ವಚನವು ಜೀವನದ ಉದ್ದೇಶವನ್ನು ಸಾರುವಂತಿದೆ. ೧೨ನೇ ಶತಮಾನ ಸಾಮಾಜಿಕ,ರಾಜಕೀಯ,ಧಾರ್ಮಿಕ,ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಮರಣೀಯವಾದದು. ಬಸವಣ್ಣ ಅಪರೂಪದ ವ್ಯಕ್ತಿ. ಕಲ್ಯಾಣವನ್ನು-ಬಸವಕಲ್ಯಾಣ, ಬಾಗೇವಾಡಿಯನ್ನು-ಬಸವನ ಬಾಗೇವಾಡಿಯನ್ನಾಗಿಸಿದ ಪಾರದರ್ಶಕ ವ್ಯಕ್ತಿತ್ವ ಅವರದು.

ಶರಣರು ಮಾನವೀಯ ಸಂಬಂಧಗಳಿಗೆ ಬೆಲೆ ಕೊಟ್ಟರು. ಇಂತಹ ಶರಣರ ಜೀವನ ದರ್ಶನ ಮಾಡಿಕೊಂಡು ಒಂದೇ ಒಂದು ದಿನ ಲೇಸೆನಿಸಿಕೊಂಡು ಬದುಕುವುದು ಉಚಿತ ಎಂಬುದನ್ನು ತಿಳಿಸಿದ್ದಾರೆ. ಇಲ್ಲಿ ಐದುದಿನ, ನಾಲ್ಕುದಿನ, ಮೂರುದಿನ, ಎರಡುದಿನ ಕೊನೆಗೆ ಒಂದು ದಿನ ಎನ್ನುವ ಸಂಖ್ಯಾ ಸೂಚಕ ಪದಗಳು ಕೇವಲ ಐದುದಿನ, ನಾಲ್ಕುದಿನ, ಮೂರುದಿನ, ಎರಡುದಿನ ಅಥವಾ ಒಂದುದಿನ ಮಾತ್ರ ಸೂಚಿಸುವುದಿಲ್ಲ. ನಮ್ಮ ಬದುಕಿನ ಅನಿಶ್ಚಿತ ಆಯುಷ್ಯವನ್ನು ಸೂಚಿಸುತ್ತದೆ. ಆಯುಷ್ಯ ತೀರುವ ಮುನ್ನ ಜೀವನದ ಸಾರ್ಥಕತೆ ಪಡೆದುಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ.

“ಕೆರೆ ಹಳ್ಳ ಬಾವಿಗಳು ಮೈತೆಗೆದರೆ ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು, ವಾರಿದಿ ಮೈತೆಗೆದರೆ ಮುತ್ತು ರತ್ನಂಗಳ ಕಾಣಬಹುದು, ನಮ್ಮ ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೇ ಕಾಣಬಹುದು” ಎಂಬಂತಿರುವ ಬಸವಣ್ಣ ಹಾಗೂ ಶರಣರು ನಮ್ಮೊಳಗೆ ಆವಿರ್ಭವಿಸಬೆಕು. ಕಲ್ಯಾಣ ರಾಜ್ಯವನ್ನು ನಾವೆ ಕಟ್ಟಬೇಕಲ್ಲದೆ ಇನ್ನಾರೂ ಕಟ್ಟಲಾರರು. ಬಸವಣ್ಣನ ಕಲ್ಯಾಣ ರಾಜ್ಯ ಪ್ರತಿಷ್ಠಾಪನೆಗೆ ನಾವು-ನೀವೆಲ್ಲ ಪುನಃ ಸನ್ನದ್ಧರಾಗಿ ನಿಲ್ಲಬೇಕು. “ಮತ್ತೆ ಹುಟ್ಟಿ ಬಾ ಬಸವಣ್ಣ” ಅಂತ ಗೋಗರೆದರೆ ಬಸವಣ್ಣ, ಯಾವುದೋ ಲೋಕದಿಂದ ಕೆಳಕ್ಕೆ ಉದುರಿ ಬೀಳುವುದಿಲ್ಲ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago