ಬಿಸಿ ಬಿಸಿ ಸುದ್ದಿ

ಭ್ರಷ್ಟಾಚಾರಮುಕ್ತ ಭಾರತಕ್ಕೆ ಮುನ್ನುಡಿ ಬರೆದ ಸತ್ಯಕ್ಕ

ಭಾರತದಲ್ಲಿ ಎರಡು ಕ್ಷೇತ್ರಗಳನ್ನು ವಿಶ್ವದ ಅತ್ಯಂತ ಸುಂದರ ತಾಣಗಳು, ರಮಣೀಯ ತಾಣಗಳು ಎಂದು ಗುರುತಿಸುತ್ತೇವೆ. ಒಂದು ಭಾರತದ ಉತ್ತರದಲ್ಲಿರುವ ಭೂಸ್ವರ್ಗವೆಂದು ಕರೆಯಲಾಗುವ ಕಾಶ್ಮೀರ. ಇನ್ನೊಂದು ಕರ್ನಾಟಕದ ಶಿವಮೊಗ್ಗೆ. ಈ ಜಿಲ್ಲೆ ಬಹಳ ವೈಶಿಷ್ಟ್ಯತೆಯಿಂದ, ವೈವಿಧ್ಯತೆಯಿಂದ ಕೂಡಿದ ಜಿಲ್ಲೆ. ಇದೇ ಜಿಲ್ಲೆಯ ಉಡುತಡಿಯಿಂದ ಶರಣೆ ಅಕ್ಕಮಹಾದೇವಿ, ಬಳ್ಳಿಗಾವಿಯ ಶರಣ ಅಲ್ಲಮಪ್ರಭು ಮುಂತಾದವರು ಬಸವತತ್ವ ಪರಿಮಳ ಹುಡುಕಿಕೊಂಡು ಕಲ್ಯಾಣದೆಡೆಗೆ ಬಂದರು. ಅಂಥವರಲ್ಲಿ ಇದೇ ಜಿಲ್ಲೆಯ ಹಿರೇಜಂಬೂರಿನಿಂದ ಒಬ್ಬ ಶರಣೆ ಬಂದಳು. ಅವಳ ಹೆಸರು ಸತ್ಯಕ್ಕ.

ಕಸಗುಡಿಸುವುದು ಇವಳ ಕಾಯಕವಾಗಿತ್ತು. ಇಂದು ನಾವು ಸ್ವಚ್ಛ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ. ಈ ಹೆಸರಿನಲ್ಲಿ ಅಭಿಯಾನ ಕೂಡ ಶುರು ಮಾಡಿದ್ದೇವೆ. ಆದರೆ ಸತ್ಯಕ್ಕ ಶರಣೆ ಆಗಲೇ ಸ್ವಚ್ಛ ಭಾರತದ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಳು ಎಂಬುದು ಗಮನಾರ್ಹ ಸಂಗತಿ. ಶರಣರು ೧೨ನೇ ಶತಮಾನದಲ್ಲಿಯೇ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದರು ಎಂಬುದು ನಿಜಕ್ಕೂ ಗಮನಾರ್ಹವಾಗಿದೆ.

ಲಂಚ ವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ ನೀವಿಕ್ಕಿದ
ಬಿಕ್ಷೆಯಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿ ಮವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೆ ಎನ್ನ ನರಕದಲ್ಲದ್ದಿ
ನೀನೆದ್ದು ಹೋಗಾ ಶಂಭು ಜಕ್ಕೇಶ್ವರಾ.

ಶರಣರು ಕೇವಲ ಸ್ವಚ್ಛ ಭಾರತದ ಕಲ್ಪನೆ ಅಷ್ಟೇ ಅಲ್ಲ, ಭ್ರಷ್ಟಾಚಾರಮುಕ್ತ ಭಾರತದ ಕನಸು ಸಹ ಕಂಡಿದ್ದರು ಎಂಬುದಕ್ಕೆ ಸತ್ಯಕ್ಕನ ಈ ವಚನವೇ ನಮಗೆ ಸಾಕ್ಷಿಯಾಗಿದೆ. ಪ್ರಾಮಾಣಿಕತೆಯ ಪ್ರತೀಕದಂತಿದ್ದ ಸತ್ಯಕ್ಕ ಶರಣರ ಬೀದಿಯ ಕಸಗುಡಿಸುವ ಕಾಯಕ ಮಾಡುತ್ತಿದ್ದಳು. ಆಕೆಯ ಮೇಲಿನ ಈ ವಚನವು ಬೀದಿಯ ಕಸಗುಡಿಸುವಾಗ ಹೊನ್ನು, ವಸ್ತ್ರ ಬಿದ್ದಿದ್ದರೂ ನಿಮ್ಮಾಣೆ, ಪ್ರಮಥರಾಣೆಯಾಗಿ ಮುಟ್ಟುವುದಿಲ್ಲ. ಒಂದುವೇಳೆ ನನ್ನಲ್ಲೇನಾದರೂ ಅಪ್ರಮಾಣಿಕ ನಡೆ ಕಂಡು ಬಂದರೆ ನನ್ನನ್ನು ನರಕದಲ್ಲಿ ಅದ್ದುವ ಕಠಿಣ ಶಿಕ್ಷೆಗೆ ಒಳಪಡಿಸು ಎಂದು ಪ್ರತಿಜ್ಞೆ ಸ್ವೀಕರಿಸುವ ಅವಳ ಗುಣಸ್ವಭಾವವನ್ನು ವಿವರಿಸುತ್ತದೆ.

ಸತ್ಯಕ್ಕ ಮೇಲ್ನೋಟಕ್ಕೆ ಬಹಿರಂಗವಾಗಿ ಬೀದಿಯ ಕಸಗುಡಿಸುವ ಕಾಯಕ ಮಾಡುವಂತೆ ಕಂಡುಬಂದರೂ, ಸಮಾಜದ ಅಂತರಂಗದಲ್ಲಿನ ಕಸ, ಕೊಳೆ, ಮಲಿನತೆಯನ್ನು ತೆಗೆಯುವ ಕಾಯಕ ಮಾಡುತ್ತಿದ್ದಳು ಎಂಬುದಾಗಿ ತಿಳಿದು ಬರುತ್ತದೆ. ಭ್ರಷ್ಟಾಚಾರ ಎನ್ನುವುದು ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಅಧಿಕಾರದ ಹೆಸರಿನಲ್ಲಿ ಅದು ತನ್ನ ಕರಾಳ ಮುಖವನ್ನು ಪ್ರದರ್ಶಿಸುತ್ತಿದ್ದು, ಇದಕ್ಕೆ ಮಂಗಳ ಹಾಡಬೇಕಾದರೆ ಆತ್ಮಗೌರವ ಕಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ, ಲಂಚ, ವಂಚನೆ ಸಾಮಾನ್ಯವಾಗಿರುವ ಮತ್ತು ಅವುಗಳು ನಮ್ಮ ಬದುಕಿನ ಒಂದು ಭಾಗವಾಗಿರುವ ಅದನ್ನು ಸುಮ್ಮನಿದ್ದು ಸಹಿಸಿಕೊಂಡು ಬರುತ್ತಿರುವುದು ಕೂಡ ಒಂದರ್ಥದಲ್ಲಿ ಅದಕ್ಕೆ ಪ್ರೋತ್ಸಾಹ ಮಾಡಿದಂತೆಯೇ! ಇಂತಹ ಸಂದಿಗ್ಧ ಕಟ್ಟ ಕಾಲದಲ್ಲಿ ಸತ್ಯಕ್ಕ ನಮಗೆ ಮಾದರಿಯಾಗಬೇಕಿದೆ. ನಾನು ಇನ್ನೊಬ್ಬರ ಹಣ ಮುಟ್ಟುವುದಿಲ್ಲ. ಆ ಹಣ ನನಗೆ ಬೇಕಿಲ್ಲ. ಅನ್ಯಾಯದ ಧನದಿಂದ ದೂರವಿದ್ದೇನೆ ಎಂದು ಎದೆ ತಟ್ಟಿ ಹೇಳುವ ಎದೆಗಾರಿಕೆ ಸತ್ಯಕ್ಕನಿಗೆ ಮಾತ್ರ ಸಾಧ್ಯ ಎಂದೆನಿಸುತ್ತದೆ.

ಕಸಗುಡಿಸುವ ಕಾಯಕದ ವೇಳೆಯಲ್ಲಿ ಬಂಗಾರದ ಆಭರಣ, ರೇಷ್ಮೆ ವಸ್ತ್ರ ಮುಂತಾದ ಬೆಲೆಬಾಳುವ ವಸ್ತುಗಳು ಬೀದಿಯಲ್ಲಿ ಬಿದ್ದಿದ್ದರೂ ಅವುಗಳನ್ನು ಮುಟ್ಟುವುದಿಲ್ಲ ಮಾತ್ರವಲ್ಲ ಆ ಆಭರಣ ಮತ್ತು ರೇಷ್ಮೆ ವಸ್ತ್ರಗಳನ್ನು ಕಾಲ ಕಸದಂತೆ ನೋಡುತ್ತೇನೆ. ಇನ್ನೊಬ್ಬರ ವಸ್ತು, ಒಡವೆಗಳನ್ನು ಕದಿಯುವ ಹೀನ ಮನ ನನ್ನದಲ್ಲ. ಕನಸು ಮನಸಿನಲ್ಲೂ ಈ ಬಗ್ಗೆ ಆಸೆ ಪಡುವವಳಲ್ಲ ಎಂದು ಹೇಳುತ್ತಾಳೆ “ಶಂಭು ಜಕ್ಕೇಶ್ವರ” ಅಂಕಿತದಲ್ಲಿ ಬರೆದ ಸತ್ಯಕ್ಕನ ೨೮ ವಚನಗಳು ಪರಧನ, ಪರಸತಿ, ಪರದ್ರವ್ಯ ಈ ಮೂರು ವಿಷಯ ಕುರಿತಾಗಿಯೇ ಬರೆದವುಗಳಾಗಿವೆ. ಇಂದು ನಾಳೆಗೆ ಎಂದು ತೆಗೆದಿರಿಸುವ ಸಂಗ್ರಹಬುದ್ಧಿ ಶರಣರಿಗೆ ಇರಲಿಲ್ಲ. ಪರಮಾತ್ಮನಲ್ಲಿ ಮತ್ತು ಕಾಯಕದಲ್ಲಿ ದೃಢವಾದ ನಂಬಿಕೆ ಇದ್ದವರಿಗೆ ನಾಳಿನ ಭಯ ಇರುವುದಿಲ್ಲ ಎಂಬುದನ್ನು ಸತ್ಯಕ್ಕನ ಈ ವಚನದಿಂದ ತಿಳಿದುಬರುತ್ತದೆ. ಕಾಯಾ,ವಾಚಾ, ಮನಸಾ ಏಕೋಭಾವ ಹೊಂದಿದಾಗ ಮಾತ್ರ ದೇವರ ಒಲುಮೆ, ನಿಲುಮೆ ಸಾಧ್ಯ ಎಂಬುದನ್ನು ಸತ್ಯಕ್ಕನ ಈ ವಚನ ಮನವರಿಕೆ ಮಾಡಿಕೊಡುತ್ತದೆ.

ಕಾಯಕವೇ ಕೈಲಾಸವಾದ ಕಾರಣ ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗ ದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು ಎನ್ನುವ ಶರಣೆ ಆಯ್ದಕ್ಕಿ ಲಕ್ಕಮ್ಮ ಹಾಗೂ ಇತರ ಶರಣೆಯರ ವಚನಗಳು ಸಮಾಜವೆಂಬ ಭೂಮಿಯಲ್ಲಿ ಅಧ್ಯಾತ್ಮವೆಂಬ ಬೆಳೆ ಬೆಳಯುವ ಪ್ರಯತ್ನವನ್ನು ಗುರುತಿಸಬಹುದಾಗಿದೆ. ಕೆಟ್ಟ ನಡೆ ನುಡಿ ಉಳ್ಳವರನ್ನು ದೇವರು ಒಪ್ಪಿಕೊಳ್ಳುವುದಿಲ್ಲ. ಅಪ್ಪಿಕೊಳ್ಳುವುದೂ ಇಲ್ಲ. ದೇವರ ಮೆಚ್ಚುಗೆಗೆ ಪಾತ್ರರಾಗಬೇಕಾದರೆ ಉತ್ತಮ ನಡೆ-ನುಡಿ ನಮ್ಮದಾಗಬೇಕಾಗಿದೆ ಎಂದು ಹೇಳುತ್ತಾಳೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago