ಬಿಸಿ ಬಿಸಿ ಸುದ್ದಿ

ಕೆನಡಾದಲ್ಲಿದ್ದು ಸುರಪುರದ ಬಡ ಜನತೆಯ ನೆರವಿಗೆ ಬಂದ ರಾಜಾ ಪಾಮ್ ನಾಯಕ್

ಸುರಪುರ: ಕಳೆದ ಎರಡು ದಿನಗಳ ಹಿಂದೆ ರಾಜಾ ಪಾಮನಾಯಕ ಅವರು ದೂರವಾಣಿ ಕರೆಮಾಡಿ ಲಾಕ್ ಡೌನನಿಂದಾಗಿ ದೇಶದಲ್ಲಿ ಸಾಕಷ್ಟು ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ತಾಲೂಕಿನಲ್ಲಿ ಬಡ ಜನರಿಗೆ ನಾವು ಒಂದು ತಂಡವನ್ನು ರಚಿಸಿಕೊಂಡು ಆಹಾರ ಧಾನ್ಯಗಳ ಕಿಟ್ ವಿತರಿಸುವ ಕೆಲಸವಾಗಬೇಕು ಆದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾನೆ ಭರಿಸುತ್ತೇನೆ ನನ್ನಿಂದ ನಮ್ಮ ಜನರಿಗೆ ಸ್ವಲ್ಪವಾದರು ಸಹಾಯ ದೊರಕುವಂತೆ ಮಾಡಿ ಎಂದು ತಿಳಿಸಿದರು ಅದರಂತೆ ನಾವುಗಳು ಅವರ ನಿರ್ದೇಶನದಂತೆ ಒಂದುವಾರಕ್ಕಾಗುವಷ್ಟು ಬಡ ಜನರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿದ್ದೆವೆ ಎಂದು ಮಾಜಿ ನಗರಸಭೆ ಸದಸ್ಯ ಮಲ್ಲಪ್ಪ ಹುಬ್ಬಳ್ಳಿ ತಿಳಿಸಿದರು.

ನಗರದ ಕುಂಬಾರಪೇಟೆಯಲ್ಲಿನ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿ,ಕರೊನಾ ಮಹಾಮಾರಿಯಿಂದ ದೇಶವೆ ಲಾಕ್ಡೌನಾಗಿದೆ ಇದರಿಂದಾಗಿ ಬಡ ಕೂಲಿಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ ಮನೆಯಲ್ಲಿರುವ ಆಹಾರ ಧಾನ್ಯಗಳು ಮುಗಿದು ಒಂದು ಹೊತ್ತಿನ ಊಟಕ್ಕೆ ಪರಿತಪಿಸುತ್ತಿದ್ದಾರೆ.

ನಾನು ಕೆನಡಾದಲ್ಲಿದ್ದರು ನಗರದಲ್ಲಿನ ನಮ್ಮ ಬಡ ಜನರು ತೊಂದರೆ ಪಡಬಾರದು ಎಂದು ಸಾಧ್ಯವಾದಷ್ಟು ಜನರ ನೆರವಿಗೆ ನಿಂತಿದ್ದೇವೆ.ಅಗತ್ಯ ವಸ್ತುಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ನಮ್ಮೆಲ್ಲ ಸ್ನೇಹಿತರ ಕೆಲಸವೂ ಶ್ಲಾಘನೀಯವಾಗಿದೆ-ರಾಜಾ ಪಾಮ್ ನಾಯಕ ಸುರಪುರ ಕೆನಡಾ ನಿವಾಸಿ.

ಇತಂಹ ಸಮಯದಲ್ಲಿ ದೇಶದಲ್ಲಿರುವ ಹಲವರು ಬಡವರ ಸಹಾಯಕ್ಕೆ ಬರುತ್ತಿದ್ದಾರೆ ಅದರಲ್ಲು ನಗರದ ನಿವಾಸಿಯಾಗಿರುವ ಸಧ್ಯ ಉತ್ತರ ಅಮೇರಿಕಾದ ಕೆನಡಾದಲ್ಲಿರುವ ರಾಜಾ ಪಾಮನಾಯಕ ಅವರು ಈ ವಿಷಯವನ್ನು ಅರಿತು ನಮ್ಮ ದೇಶದ ಜನರು ಯಾವುದೆ ಕಾರಣಕ್ಕೂ ಊಟವಿಲ್ಲದೆ ಇರಬಾರದು ಎನ್ನುವ ಉದ್ದೇಶವನ್ನಿಟ್ಟುಕೊಂಡು ಬಡವರಿಗಾಗಿ ತಮ್ಮ ಅಭಿಮಾನಿಗಳಿಂದ ಆಹಾರ ಧಾನ್ಯವನ್ನು ವಿತರಿಸಿ ಮಾನವೀಯತೆ ಮೇರೆದಿದ್ದಾರೆ ಎಂದರು.

ಈ ಕಾರ್ಯದಲ್ಲಿ ಸೂಗುರಾಜ ಪಾಣಿ,ಜುಮ್ಮಣ್ಣ, ರವಿಕುಂಬಾರ, ಗೋಪಾಲ ಚಲುವಾದಿ, ಬಸವರಾಜ ಗುಡ್ಡಕಾಯಿ, ಯಂಕಪ್ಪ ಗುಡ್ಡಕಾಯಿ ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago