ಬಿಸಿ ಬಿಸಿ ಸುದ್ದಿ

ಬಸವಣ್ಣನವರ ವಚನದಲ್ಲಿ ಅಡಗಿರುವ ರೇಖಾಗಣಿತ

ನಮ್ಮ ಹಳ್ಳಿಗಾಡಿನ ಜನ ಇಂದಿಗೂ ಕುಳಿತರೂ ಬಸವ, ನಿಂತರೂ ಬಸವ, ಎದ್ದರೂ ಬಸವ, ಬಿದ್ದರೂ ಬಸವ ಎನ್ನುವುದನ್ನು ಕಾಣುತ್ತೇವೆ. ಬಸವ ಎನ್ನುವ ಶಬ್ದವೇ ಅಂಥದ್ದು. ಅದು ಮಂತ್ರಶಕ್ತಿ ಸ್ವರೂಪದ್ದು, ಬಸವ ಎಂಬ ಮೂರಕ್ಷರ ನಮ್ಮಲ್ಲಿ ನೆಲೆಗೊಂಡರೆ ಅಸಾಧ್ಯವೂ ಸಾಧ್ಯವಾಗುತ್ತದೆ. ಅಂತೆಯೇ ಇಂದು ಜಗತ್ತಿನ ಎಲ್ಲೆಡೆ ಬಸವನ ಮೂರ್ತಿ ಸ್ಥಾಪನೆ, ಬಸವಣ್ಣನವರ ವಿಚಾರಗಳ ಚಿಂತನ-ಮಂಥನ ನಡೆಯುತ್ತಿದೆ. ಕೇರಾಫ್ ಅಡ್ರೆಸ್ ಹೊಂದಿದ್ದ ನಮಗೆಲ್ಲ ಶಾಶ್ವತ ವಿಳಾಸ ಒದಗಿಸಿದ ಬಸವಣ್ಣನವರು ಗುರು ಗುಹೇಶ್ವರನಿಗೂ ವಿಳಾಸದವರು ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ.

ಆದರೆ ಬಸವಣ್ಣ ನಮ್ಮ ಜನಕ್ಕೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಬಸವ ಎನ್ನುವುದು ಕೇವಲ ಹೆಸರಲ್ಲ. ವ್ಯಕ್ತಿಯಲ್ಲ. ಅದೊಂದು ಶಕ್ತಿ. ಅದೊಂದು ದೊಡ್ಡ ಸಿದ್ಧಾಂತ. ಬಸವಣ್ಣ ಕಲ್ಪವೃಕ್ಷ, ಬಸವಣ್ಣ ಕಾಮಧೇನು. ಬಸವಣ್ಣನಿಂದಲೇ ಓದು ಕಲಿತರು ಜನರು. ಬಸವಣ್ಣನಿಂದಲೇ ಹೊಸ ಮಾತುಗಳು ಹುಟ್ಟಿಕೊಂಡವು. ಬಸವಣ್ಣನಿಂದಲೇ ಮೇದಿನಿಗೆ ಬಂತು ಹೊಸ ಬೆಳಕು ಎಂದು ಜನಪದರು ಬಸವಣ್ಣನವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

“ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ” ಎಂದು ಆಕಾಶದ ಕಡೆ ಕೈ ತೋರಿಸಿ ನೆಮ್ಮಲ್ಲರನ್ನು ದಿಕ್ಕು ತಪ್ಪಿಸಿದ್ದ ಸಂದರ್ಭದಲ್ಲಿ ಇಲ್ಲಿರುವುದೇ ನಮ್ಮ ಮನೆ. ಅಲ್ಲಿರುವುದು ಸುಳ್ಳು ಎಂಬ ವಾಸ್ತವ ವಿಚಾರಗಳನ್ನು ಹೇಳಿದವರು ಬಸವಣ್ಣನವರು. ಕಣ್ಣಿಗೆ ಕಾಣದ ದೇವರಗಳನ್ನು ನಮಗೆ ತೋರಿಸಿ ತಮ್ಮ ಹೊಟ್ಟೆ ಹೊರೆದುಕೊಳ್ಳುವ, ಅದೇ ವೇಳೆಗೆ ದೇವರು-ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ದೇವರ ಇರುವಿಕೆಯನ್ನು ಸ್ಪಷ್ಟವಾಗಿ ತೋರಿದ ವಿಶ್ವದ ಮಹಾ ಬೆಳಕು ಬಸವಣ್ಣ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದ ಅತ್ತತ್ತ ನಿಮ್ಮ ಶ್ರೀ ಚರಣ
ಅಗಮ್ಯ ಅಗೋಚರ, ಅಪ್ರಮಾಣ ಲಿಂಗವೇ
ಕೂಡಲಸಂಗಮದೇವ ನೀವೆನ್ನ ಕರಸ್ಥಲಕ್ಕೆ
ಬಂದು ಚುಳುಕಾದಿರಯ್ಯ

ಈ ವಚನಕ್ಕೆ ನಾವು ರೇಖಾಗಣಿತ (ಜಾಮೆಟ್ರಿ) ಕೂಡ ಅಳವಡಿಸಬಹುದು. ಒಂದು ಚಿಕ್ಕದಾದ ವೃತ್ತ ಇಳಿಸಿ ಅದರ ಮೇಲೆ ಮತ್ತೊಂದು, ಮಗದೊಂದು ಬಿಡಿಸಿದಾಗ ಕೊನೆಗೊಂದು ದೊಡ್ಡದಾದ ವೃತ್ತಾಕಾರ ನಿರ್ಮಾಣವಾಗುತ್ತದೆ. ಭೂಮಿಯ ಆಕಾರ ದುಂಡಾಗಿದೆ ಎಂಬುದನ್ನು ಅವರು ಈ ವಚನದಲ್ಲಿ ತಿಳಿಸಿದ್ದಾರೆ. ಈ ವೃತ್ತಾಕಾರ ಸ್ವರೂಪದಲ್ಲಿಯೇ ದೇವರು ಸರ್ವಾಂತರ್ಯಾಮಿಯಾಗಿದ್ದಾನೆ.

ಅಂತಹ ವಿಶ್ವರೂಪಿಯಾದ ದೇವರು ಎನ್ನ ಕರಸ್ಥಲದಲ್ಲಿ ಚುಳುಕಾಗಿದ್ದಾನೆ ಎಂದು ಹೇಳುವ ಮೂಲಕ ಇಷ್ಟಲಿಂಗ ಎಂಬ ಹೊಸ ಪರಿಕಲ್ಪನೆಯನ್ನು ಬಸವಣ್ಣನವರು ಕೊಟ್ಟಿದ್ದಾರೆ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ ಆತನ ರೂಪ, ಸ್ವರೂಪ ಎಂಥದ್ದು? ಆತನ ಇರುವು ಎಲ್ಲಿ? ಹೇಗೆ? ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಕಾಡುವ, ಬೇಡುವ, ದೇವರು ಇರುವುದಿಲ್ಲ. ದೇವರಿಗೆ ನಾದ, ವೇದಗಳು ಗೊತ್ತಿಲ್ಲ. ಆತ ಗುಡಿ-ಗುಂಡಾರ, ಜಗುಲಿಗಳಲ್ಲಿ ವಾಸವಾಗಿರುವುದಿಲ್ಲ. ಆತನ ಇರುವು ಸರ್ವವ್ಯಾಪಿಯಾದುದು. ದೇವರು ಕೇಳುವುದು ನಮ್ಮ ನಿರ್ಮಲವಾದ ಭಕ್ತಿ. ಅಂಥವರ ಬಳಿ ಮಾತ್ರ ದೇವರು ನೆಲೆಸಿರಲು ಸಾಧ್ಯ ಎಂದು ಹೇಳಿದ್ದಾರೆ.

ಇಂತಹ ಇನ್ನೂ ಅನೇಕಾನೇಕ ಹೊಸ ಆಲೋಚನಾ ಕ್ರಮವನ್ನು ತನ್ನ ಒಡಲಲ್ಲಿ ಅಡಗಸಿಟ್ಟುಕೊಂಡಿರುವ ವಚನ ಸಾಹಿತ್ಯವೆಂಬ ತವನಿಧಿಯನ್ನು ವೈಚಾರಿಕ, ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಇಂದಿನ ಅಗತ್ಯವಾಗಿದೆ. ವರ್ತಮಾನಕ್ಕೆ ಹತ್ತಿರವಾದ ಸರ್ವಕಾಲಕ್ಕೂ ಅನ್ವಯಿಸಬಹುದಾದ ಈ ವಚನ ಸಾಹಿತ್ಯದಿಂದ ಕನ್ನಡ ವಿಶ್ವ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಾಗಿದೆ. ಹೀಗಾಗಿಯೇ ಶರಣರು ನಮಗೆ ಇಂದಿಗೂ ಬೆರಗಾಗಿ ಕಂಗೊಳಿಸುತ್ತಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago