ಅಂಕಣ ಬರಹ

ಕಾಯಕವ ಮಾಡುತ್ತಾ ಕೈಲಾಸದ ಕಡೆ ಹೊರಟೆ ಹೋದಳು ನನ್ನ ಅಜ್ಜಿ …

ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು

ಕುಂಬಾರಿಕೆ ನಮ್ಮ ವೃತ್ತಿ ಬದುಕು ಅದನ್ನು ತನ್ನ ಜೀವಿತಾವಧಿಯಲ್ಲಿ ಒಂದು ದಿನವೂ ಬಿಡುವಿಲ್ಲದೆ ದುಡಿದು ಸಂಸಾರದ ನೊಗವನ್ನು ಹೊತ್ತು ಸಂಸಾರ ಸಾಗಿಸಿದವಳು ನಮ್ಮ  ಅಜ್ಜಿ. ಅಜ್ಜನನ್ನ ನಾವು ಯಾರು ನೋಡಿಲ್ಲ.‌ ಆದರೆ ಅವರ ಒಂದು ಫೋಟೋ ಮನೆಯಲ್ಲಿ ಇರುವುದರಿಂದ ಅದನ್ನೆ ನೋಡಿ ಖುಷಿ ಗೊಂಡವರು ನಾವು. ಆದರೆ  ಅಜ್ಜನ ಬಗ್ಗೆ ಕೆಲವು ಹಿರಿಯರ ಹೇಳಿದ್ದು ಮಾತ್ರ   ನೆನಪಿದೆ. ಅಜ್ಜನ ಕಾಯಕ ವೆಂದರೆ ನ್ಯಾಯ ಪಂಚಾಯಿತಿ ಮಾಡುವುದು ಮತ್ತು ನಾಟಕದಲ್ಲಿ ಪಾತ್ರವನ್ನು ಮಾಡುವುದು ಹಾಗು ನಮ್ಮದು ಒಂದು ಸೋಡಾ ಅಂಗಡಿ ಕೂಡಾ ಇತ್ತಂತೆ. ಅದರ ಜೊತೆಗೆ ಫೋಟೋ ಪ್ರೇಮ್ ಹಾಕುವುದು ಮಾಡುತ್ತಿದ್ದರಂತೆ!

ಆದರೆ ಅಜ್ಜಿ ಮಾತ್ರ ನಮ್ಮ ಕುಲಕಸುಬು ಕುಂಬಾರಿಕೆಯನ್ನು ಮಾಡುತಿದ್ದಳು. ಅಜ್ಜಿ ನಮ್ಮ ತಿಳುವಳಿಕೆ ಬಂದಾಗಿನಿಂದಲೂ ಕಾಯಕವನ್ನು ಒಂದು ದಿನವು ನಿಲ್ಲಸಿರಲಿಲ್ಲ. ದಿನ ನಿತ್ಯ  ಮುಚುಳಾ, ಪರಾಣ ,ಅಂಚು,ಪಣತಿ, ಇನ್ನಿತರ ಮಣ್ಣಿನ ವಸ್ತುಗಳನ್ನು ಮಾಡುತ್ತಿದ್ದಳು. ಅವುಗಳನ್ನು ಸ್ವತಃ ತಾನೆ ಸುಟ್ಟು  ಮುಸಲ್ಮಾನರ ಓಣಿಯಲ್ಲಿ (ಆಸರ್ ಮಹಲ್) ಹಳೆಪೇಟೆ ಜಂಗಳೆಯ ಓಣಿಗೆ ಓಣಿ ಓಣಿ  ಸುತ್ತುತ್ತಾ ಮಾರಾಟ ಮಾಡಿಕೊಂಡು ಬರುತ್ತಿದ್ದಳು. ಬರುವಾಗ ಅಜ್ಜಿ ತರಕಾರಿ ನಮಗೆ ತಿಂಡಿ ತಿನಿಸುಗಳು ಮರೆಯದೆ ತರುತ್ತಿದ್ದಳು. ಇದು ಅಜ್ಜಿಯ ದಿನ ನಿತ್ಯದ ಕಾಯಕ  ಇದರ ಜೊತೆಗೆ ಶಹಾಪುರದ ಸಂತೆ ಪ್ರತಿ ಶುಕ್ರವಾರದಂದು  ನಡೆಯುತ್ತಿತ್ತು. ಸಂತೆಯಲ್ಲೂ ಅಜ್ಜಿ ತಾನು ಮಾಡಿದ ವಸ್ತುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಳು ನಾವು ಕೂಡ ಅಜ್ಜಿಗೆ ಸಹಾಯ ಮಾಡುತ್ತಿದ್ದೆವು.

ಮುಸ್ಲಿಂ ಬಾಂಧವರ ಹಬ್ಬಗಳು ಬಂದೆ  ಮಣ್ಣಿನ ವಸ್ತುಗಳಿಗೆ ಹೆಚ್ಚು ಬೇಡಿಕೆ ಆಗ ನಾವು ಕೂಡ ಅಜ್ಜಿಯ ಜೊತೆ  ಮಾರಾಟಕ್ಕೆ ಜಲ್ಲಿ ಹೊತ್ತುಕೊಂಡು ಹೋಗುತ್ತಿದ್ದೆವು  ದೇಶಮುಖರ ಮನೆಯ ಹತ್ತಿರ ರ್ಯಾವಪ್ಪನ ಹೋಟೆಲ್ ನಲ್ಲಿ ನಮ್ಮಗೆ ಒಗ್ಗರಾಣಿ, ಮಿರ್ಚಿ ಬಜಿ ಕೊಡಿಸುತ್ತಿದ್ದಳು.  ಮಾರಾಟ ಮಾಡುವ ಸಂದರ್ಭದಲ್ಲಿ ಕೆಲವರು ಕಡಿಮೆ ದುಡ್ಡಿಗೆ ಕೇಳುವರು ಕೆಲವರು  ರೊಟ್ಟಿ ಮಾಡಿದ ತವುಡು, ಬೇಳೆಕಾಳುಗಳು ಒಡೆದ ತವುಡು ಗಳಿಗೆ ತಗೆದು ಕೊಳ್ಳುತ್ತಿದ್ದರು . ಅವುಗಳನ್ನು ಹೊತ್ತುಕೊಂಡು ನಾವು ಬರುತ್ತಿದೆವು . ಒಮ್ಮೊಮ್ಮೆ ನಾವು ತಗೆದು ಕೊಂಡು ಹೊದ ವಸ್ತುಗಳು ವ್ಯಾಪಾರ ವಾಗುತ್ತಿದ್ದಿದಿಲ್ಲ.ಅಲ್ಲೆ ಪರಿಚಿತರ ಮನೆಯಲ್ಲಿ ಇಟ್ಟು ಬರುತ್ತಿದ್ದೆವು.  ವ್ಯಾಪಾರವಾಗದ್ದಿದರು ಕೂಡ ಯಾವತ್ತು ನಮಗೆ ತಿಂಡಿ ತರುವುದನ್ನು ಮರೆಯುತ್ತಿರಲ್ಲಿಲ್ಲ ಅಜ್ಜಿ. ನಮ್ಮ ಜೊತೆಗೆ ದನಕರುಗಳಿಗೆ ಕಬ್ಬಿನ ಸ್ವಾಗಿ ಮತ್ತೆ ವ್ಯಾಪಾರ ವಾಗದೆ ಉಳಿದ ತರಕಾರಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ ದನಕರುಗಳಿಗೆ ಮೇಯುಸುತ್ತಿದ್ದಳು. ಒಂದೊಮ್ಮೆ  ಆಗಿನ ಕಾಲಕ್ಕೆ ಒಂದು ಕಟ್ ಸೊಪ್ಪಿ (ಕಣಿಕಿ) 100 ರೂಪಾಯಿ ಯಾಗಿತ್ತು. ಆದರು ಕೂಡ ನಮ್ಮ ಅಜ್ಜಿ ಖರೀದಿಸಿ ದನಕರುಗಳಿಗೆ ಮೆಯಿಸಿದ್ದ ನೆನಪು ಇನ್ನು ಆಗೆ ಇದೆ. ದನಕರುಗಳಿಗೆ ನಮ್ಮ ಅಜ್ಜಿ ಬರುವುದೆ ಕಾಯಿತ್ತಿರುತ್ತಿದ್ದವು. ಬಂದ ತಕ್ಷಣವೇ ಅವುಗಳಿಗೆ ಏನಾದರು  ತಗೆದು ಕೊಂಡು ಬಂದಿರುತ್ತಿದ್ದಳು.  ನಮ್ಮ ಅಜ್ಜಿಗೆ ಮೈ ಹುಶಾರ ಇಲ್ಲದಾಗ ಡಾಕ್ಟರ್ ರಾಮರಾವ್ ಕುಲಕರ್ಣಿ

ಅವರ ಹತ್ತಿರ ತೊರಿಸುತ್ತಿದ್ದರು.  ಆವಾಗ  ಡಾಕ್ಟರ್  ಅಂದ ಮಾತು ‘ಏನಮ್ಮ ಪರಮವ್ವ ನಿನಗೆ ಆರೋಗ್ಯ ಸರಿ ಇಲ್ಲವಾ ಅಥವಾ ನಿಮ್ಮ ಎಮ್ಮೆ ಆರಾಮ ಇಲ್ಲವಾ’ ಎಂದು ಕೇಳುತ್ತಿದ್ದರು ಯಾಕೆಂದೆ ಅಜ್ಜಿಯ ಜೊತೆಗೆ  ಎಮ್ಮೆ ಹೋಗುತ್ತಿತ್ತು  ಅಷ್ಟೊಂದು ಅಚ್ಚಿಕೊಂಡಿದ್ದವು ದನಕರುಗಳು.    ಯಾವಾಗಲೂ ಅಜ್ಜಿಗೆ ಚಹಾ ಕುಡಿಯುವ ಚಟ ದಿನಾಲು 5 ರಿಂದ 7,8ಬಾರಿ ಚಹಾ ಬೇಕಾಗುತ್ತಿತ್ತು ಅಜ್ಜಿಗೆ ಮನೆಯಲ್ಲಿ ಮಾಡಿದ ಚಹಾಗಿಂತಹ ಹೋಟೆಲ್ ನಲ್ಲಿ ಮಾಡಿದ ಚಹಾ ಜಾಸ್ತಿ ಕುಡಿಯುತ್ತಿದ್ದಳು.ಇದರಿಂದ ನಮ್ಮ ಚಾಹಾ ತರಲ್ಲಿಕ್ಕೆ ಹೊದರೆ ನಮ್ಮಗೆ 10 ಪೈಸೆ ಕೊಡುತ್ತಿದ್ದಳು ಅದರ ಜೊತಗೆ  ಚಹಾದ ಹೋಟೆಲ್ ಮಾಲಿಕ ಇಬ್ರಾಹಿಂ ನಮಗೆ ಸಕ್ಕರಿ ಕೊಡುತ್ತಿದ್ದ ತಿನ್ನಲು. ಇದರಿಂದ  ನಾನು ತರುತ್ತೆನೆ ಅನ್ನುವ ಹಠ ಮಾಡುತ್ತಿದೆವು

ಅಜ್ಜಿಗೆ ತಮ್ಮ ತಮ್ಮನೆ ಮೇಲೆ ಎಲ್ಲಿಲ್ಲದ ಪ್ರೀತಿ ಆಗಾಗ ಕುಂಬಾರಪೇಟೆಗೆ ಹೋಗುತ್ತಿದ್ದಳು.  ಅದರಿಂದ ನಮಗೆ ತುಂಬಾ ಬೇಜಾರು. ಯಾಕೆಂದರೆ ಅಜ್ಜಿ ಬರುವ ವರೆಗೆ ತಿಂಡಿ, ತಿನಿಸುಗಳು ಇಲ್ಲ   ನಮ್ಮ ಅಜ್ಜಿ ಮಾಡುತ್ತಿದ್ದ ಪಲ್ಯ ಈಗಲು ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತೆ ಅಷ್ಟು ರುಚಿಕರವಾದ ಅಡಿಗೆ ಮಾಡುತ್ತಿದ್ದಳು ಅಜ್ಜಿ. ಈಗ ಎಷ್ಟೊಂದು  ಮಸಾಲೆ ಪದಾರ್ಥಗಳನ್ನು ಹಾಕಿದರು ಕೂಡಾ ಅಜ್ಜಿ ಮಾಡುತಿದ್ದ ಅಡಿಗೆ ಅಷ್ಟು ರುಚಿ ಈಗಿನ ಅಡಿಗೆಯಲ್ಲಿ ಇಲ್ಲ. ಬರೆ ಕಾರ ಉಪ್ಪು ಹಾಕಿದರೆ ಅಷ್ಟೊಂದು ರುಚಿಕರವಾಗಿರುತ್ತಿತ್ತು. ಅಜ್ಜಿ ಮಾಡಿದ ಅಡಿಗಿ ಅಜ್ಜಿ ಮಾತ್ರ ಯಾವಾಗಲೂ ಬಿಸಿ ರೊಟ್ಟಿಗಿಂತ ಹೆಚ್ಚಾಗಿ ಕಡಕ ರೊಟ್ಟಿ ಯನ್ನೆ ಊಟಾಮಾಡುತ್ತಿದ್ದಳು ಕೊನೆಯವರೊ ಅಷ್ಟೊಂದು ಗಟ್ಟಿಯಾಗಿದ್ದವು ಅಜ್ಜಿಯ ಹಲ್ಲುಗಳು.

ಅದೊಂದು ದಿನ 2/5/2013 ರಂದು ನಾನು  ಎಂದಿನಂತೆ  ಕೆಲಸಕ್ಕೆ ಹೋಗಿದ್ದೆ. ಕೆಲಸ ಮಾಡುತ್ತಿರುವಾಗಲೆ ಸಹೋದರ ವಿಶ್ವಾರಾಧ್ಯ ಸತ್ಯಂಪೇಟೆ ಅವರಿಂದ ನನಗೆ ಕೆರೆ ಬರುತ್ತೆ. ಅಜ್ಜಿ ಇನ್ನಿಲ್ಲ ಅಂತಹ ಕೆಳಿ ಆಘಾತ ವಾಗುತ್ತದೆ.ಕ್ಷಣ ಒತ್ತು ಸುದಾರಿಸಿಕೊಂಡು ಮನೆಗೆ ಬಂದೆ ಕೊನೆಗೆ ನನ್ನ ಅಜ್ಜಿ ಹೇಳದೆ ಕೇಳದೆ ಬಾರದ ಊರಿಗೆ ಹೋಗಿಯೇ ಬಿಟ್ಟಿದ್ದಳು.

ಸಾಯಿಕುಮಾರ ಇಜೇರಿ, ಶಹಾಪುರ
emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago