ಅಲ್ಲಮಪ್ರಭು ಎಂತಹ ಘನ ವ್ಯಕ್ತಿತ್ವ ಹಾಗೂ ದಿವ್ಯತೆಯನ್ನು ಹೊಂದಿದ್ದರೂ ಎಂಬುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿ. ಈ ವಚನದ ಮೂಲಕ ಬಸವಣ್ಣನವರು ಅಲ್ಲಮನ ಭವ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ. ಅಲ್ಲಮನ ಇಡೀ ವ್ಯಕ್ತಿತ್ವವೇ ಈ ವಚನದಲ್ಲಿ ಅಡಗಿದೆ.
ಕರದಲ್ಲಿಯ ಲಿಂಗದಲ್ಲಿಯೇ ನೋಟಪ್ರಾಣವಿರಿಸಿದ ಅನಿಮಿಷಯ್ಯ ಎಂಬ ತಪಸ್ವಿಯು ತನ್ನ ಯೋಗಶಕ್ತಿಯ ಮೂಲಕ ಬಸವಣ್ಣನವರ ಕರಸ್ಥಲದಲ್ಲಿನ ಲಿಂಗವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಅಂತಹ ಮಹಾನ್ ಯೋಗಿಯ ಕರಸ್ಥಲದ ಲಿಂಗವನ್ನು ಪ್ರಾಪ್ತಿ ಮಾಡಿಕೊಂಡ ಅಲ್ಲಮರ ಕರಸ್ಥಲವೇ ಪರಸ್ಥಲವಾಯಿತ್ತು. ಅಂದರೆ ಅದು ಬಯಲಾಯಿತು ಎಂದರ್ಥ.
ಕೈಯಲ್ಲಿರುವ ಇಷ್ಟಲಿಂಗವೆಂಬ ಕುರುಹು ಅಳಿದು ಮತ್ತೆ ಆ ಕುರುಹು ನೆಲೆಗೊಳಿಸಿಕೊಳ್ಳುವುದು ಸಣ್ಣ ಮಾತೇನಲ್ಲ. ಇಂಥ ದಿವ್ಯ ಅನುಭೂತಿ ಮಾಡಿಕೊಂಡ ಅಲ್ಲಮನಿಗೆ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಈ ಎಲ್ಲ ವಿಚಾರಗಳನ್ನು ಹೇಳುವ ಅಗತ್ಯವಿಲ್ಲ ಎಂಬುದು ಬಸವಣ್ಣನವರ ಅಭಿಪ್ರಾಯ. ದೇವರ ಬಗ್ಗೆ ಇಂತಹ ತತ್ವದರ್ಶನ ಮಾಡಿಸಿದ ಅಲ್ಲಮ ಬಹುದೊಡ್ಡ ಮೇಧಾವಿ ಎಂಬುದು ಇದರಿಂದ ವಿಧಿತವಾಗುತ್ತದೆ.
ದೇವರು ಅಮೂರ್ತ ಕಲ್ಪನೆ, ಆತನಿಗೆ ಆಕಾರವಿಲ್ಲ. ಆತ ನಿರಾಕಾರ ಸ್ವರೂಪಿ. ಆದರೆ ಅಲ್ಲಮಪ್ರಭು ಅದಕ್ಕೆ ಆಕಾರ ತರುತ್ತಾನೆ. ನಿರಾಕಾರದೊಳಗೆ ಪ್ರವೇಶಿಸಿ ನಿರಾಕಾರವನ್ನು ಆಕಾರಕ್ಕೆ ತಂದು ಬಿತ್ತಿ, ಬೆಳೆದು ನಾನು ಬಯಲಾದೆ ಎನ್ನುತ್ತಾನೆ.
ಮಹಾ ಚೈತನ್ಯವಾಗಿರುವ ಲಿಂಗಾಂಗ ಸಾಮರಸ್ಯ ಸಾಧಿಸಲು ಇಷ್ಟಲಿಂಗವೆಂಬ ಕುರುಹು ಅಹತ್ಯ. ಇಷ್ಟಲಿಂಗ ಬೇರೆ ಅಲ್ಲ. ಬಯಲು ಬೇರೆ ಅಲ್ಲ. ನಿರಾಕಾರವಾದ ದೇವರನ್ನು ಆಕಾರದ ಮೂಲಕ ತಂದು ಮತ್ತೆ ಮತ್ತೆ ನಿರಾಕಾರವಾಗಿ ಸಾಗುವುದೇ (ಬಯಲಿನೆಡೆಗೆ) ಶರಣತತ್ವ ಸಿದ್ಧಾಂತ. ಅಂತಹ ಶರಣ ಸಿದ್ಧಾಂತವನ್ನೇ ಅಲ್ಲಮರು ಈ ವಚನದಲ್ಲಿ ವಿವರಿಸುತ್ತರೆ.
ಚೈತನ್ಯದ ಆಚೆ ಇರುವುದು ಅವಿನಾಶಿ. ಹೀಗಾಗಿ ಅದಕ್ಕೆ ಅಳಿವಿಲ್ಲ. ಅಂಥ ಅಳಿವಿಲ್ಲದ ಸ್ಥಿತಿ ತಲುಪುವುದು ಎಂದರೆ ಬಯಲಾಗುವುದು ಎಂದರ್ಥ. ಈ ಬ್ರಹ್ಮಾಂಡ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಭ್ರಹ್ಮಾಂಡದಲ್ಲಿ ಕಾಣುವ ಬೆಳಕಿನಾಟ ಇರುವುದೇ ಕತ್ತಲು. ಕಪ್ಪು ವಿಸ್ತಾರವಾಗಿ ಹರಡಿದೆ ಎಂದು ವಿಜ್ಞಾನಿಗಳು ಕಂಡುಕೊಂಡ ಸತ್ಯ. ಆದರೆ ಅಲ್ಲಮ ಇಂತಹ ಅಂತಿಮ ಸತ್ಯದ ಬಗ್ಗೆ ಅಂದೆಯೇ ಮಾತನಾಡಿದ್ದಾರೆ.
ಯಾವುದರಿಂದ ಏನಾಗಬಲ್ಲದು ಎಂಬ ಪ್ರಜ್ಞೆ ಎಲ್ಲರಿಗೂ ಇದೆ. ಆದರೆ ಅದನ್ನು ಬಳಸಿಕೊಳ್ಳುವ ಪರಿ ನಮಗಿನ್ನೂ ಸಾಧ್ಯವಾಗಿಲ್ಲ. ಈ ದ್ವಂದ್ವವನ್ನು ಮೀರಿ ನಿಲ್ಲುವ ಗುಣ ವಿಶೇಷತೆಗಳು ನಮ್ಮೊಳಗೆ ಇದ್ದರೂ ಅದನ್ನು ದೂರಿ ದೂರ ಸರಿಸುವವರೇ ಹೆಚ್ಚು. ಮಾಯಾ, ಮೋಹದಂಥ ಆಕರ್ಷಕ ಸಂಗತಿಗಳೇ ನಮ್ಮನ್ನು ಆಳಲು ಆರಂಭಿಸುತ್ತವೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡಿದಾಗ ನಾವೇ ಮಾಯಾ ಕೋಲಾಹಲರಾಗುತ್ತೇವೆ. ಅಂತೆಯೇ ಶೂನ್ಯಪೀಠದ ಪೀಠಾಧ್ಯಕ್ಷರಾದ ಶೂನ್ಯಸಿಂಹಾಸನಾಧೀಶ್ವರ ಎನಿಸಿಕೊಂಡ, ಕಾಮ, ಕದಳಿ ಎಂಬ ದೇಹದೊಳಗೆ ಬಯಲಾಗುವ ಪರಿಯನ್ನು ವಿವರಿಸಿ ಈ ಲೋಕದಲ್ಲಿ ಬಯಲಾಗಿ ಹೋದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…