ಕಲಬುರಗಿ: ಕೊರೊನಾ ವೈರಸ್ ಬಳಸಿಕೊಂಡು, ಇಡಿ ದೇಶವನ್ನು ಲಾಕ್ ಡೌನ್ ಮಾಡಿಬಿಟ್ಟು, ಬಿಜೆಪಿ ತನ್ನ ಬೇಳೆಯನ್ನು ಎಷ್ಟು ಅಚ್ಚುಕಟ್ಟಾಗಿ ಬೇಯಿಸಿಕೊಂಡಿದೆ ಎಂದು ಬಿ.ಎಸ್.ಪಿ ಪಕ್ಷದ ಜಿಲ್ಲಾ ಮುಖಂಡರಾದ ಜೈಭೀಮ ಶಿಂಧೆ ಆರೋಪಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಜನ ಕೊರೊನಾ ಪರಿಣಾಮದಿಂದ ಮನೆಯಲ್ಲಿ ಅಡಗಿಕೊಂಡು ಮೂಲಭೂತ ಸೌಕರ್ಯ ಮೂಲಭೂತ ಸೌಲಭ್ಯಗಳಿಲ್ಲದೆ ತತ್ತರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ದೇಶದ ಜನತೆಗೆ ಏನು ಒದಗಿಸಬೇಕೋ ಅದನ್ನು ಒದಗಿಸಿ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳದೆ, ದೇಶದ ಹಣವನ್ನು ಲೂಟಿ ಮಾಡಿ ಹೊರದೇಶಗಳಲ್ಲಿ ಠೀಕಾಣಿ ಹೂಡಿರುವ ಬ್ಯಾಂಕ್ ದರೋಡೆ ಕೋರ ಬಂಡವಾಳ ಶಾಹಿಗಳ 68 ಸಾವಿರ ಕೋಟಿ ಭಾರೀ ಮೊತ್ತದ ಸಾಲದ ಹಣವನ್ನು RBI ಸಮ್ಮುಖದಲ್ಲಿ ಮನ್ನಾ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಸಾಲಾ ಮನ್ನಾ ಮಾಡಿದರೆ ಜನ ಬೀದಿಗೆ ಬಂದು ಪ್ರತಿಭಟಿಸುತ್ತಾರೆ ಎಂದು ತಿಳಿದು ಅವರನ್ನು ಬೇಕೆಂದೇ ಜನಥಾ ಕರ್ಪ್ಯೂ, 144, ಸೀಲ್ಡೌನ್, ಹಾಟ್ ಸ್ಪಾಟ್, ರೆಟ್ ಜೋನ್, ಆರೆಂಜ್ ಜೋನ್, ಗ್ರೀನ್ ಜೋನ್ ಹೆಸರಿನಲ್ಲಿ ಲಾಕ್ಡೌನ್ ಮಾಡಿದ ಸಂದರ್ಭವನ್ನು ಸಮರ್ಪಕವಾಗಿ ಬಳಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಇಂಥ ಜನದ್ರೋಹಿ, ದೇಶ ದ್ರೋಹದ ಕೆಲಸಗಳನ್ನು ಪ್ರಪಂಚದಲ್ಲಿ ಮತ್ತಾರೂ ಮಾಡಿರಲಾರರು. 68 ಸಾವಿರ ಕೋಟಿ ಹಣವನ್ನು ಸಾಲವಾಗಿ ಪಡೆದ 50 ಜನ ಬಂಡವಾಳಿಗರಿಂದ ದೇಶಕ್ಕೆ ನಷ್ಟವೇ ಆಗಿದೆ ಹೊರತು, ಯಾವ ಲಾಭವೂ ಆಗಿಲ್ಲ, ಪ್ರಗತಿಯೂ ಆಗಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಅನ್ಯಾಯವನ್ನು ಮಾಡುತ್ತಿರುವುದು ಬಹುಜನ ಸಮಾಜ ಪಕ್ಷ ತೀವ್ರವಾಗಿ ಖಂಡಿಸಿದೆ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…