ಕಲಬುರಗಿ: ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿ ಸಾವಿರಾರು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಇದರ ಭೀತಿ ಮತ್ತು ಲಾಕ್ ಡೌನ್ ದಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಡೀ ದೇಶವೆ ಅಪಾಯ ಮತ್ತು ದುಃಖದಲ್ಲಿರುವ ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಈ ಬಾರಿ ಹೊಸ ಬಟ್ಟೆ ಖರೀದಿಸಿ ರಂಜಾನ್ ಮಾಸವನ್ನು ಸಂಭ್ರಮದಿಂದ ಆಚರಿಸುವ ಬದಲು, ಈ ವಿಪತ್ತು ಪರಿಹಾರಕ್ಕಾಗಿ ಎಲ್ಲಾಬಾಂಧವರು ಶೃದ್ಧಾಭಾವದಿಂದ ಪ್ರಾರ್ಥನೆ ಮಾಡಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, “ಕರ್ನಾಟಕ ಪೀಪಲ್ಸ್ ಫೋರಂ” ಸಂಸ್ಥಾಪಕರಾದ ಡಾ.ಮಹ್ಮದ್ ಅಜಗರ್ ಚುಲಬುಲ್ ಮನವಿ ಮಾಡಿದ್ದಾರೆ.
ಈ ಕುರಿತು ಸುಮಾರು ನಾಲ್ಕು ದಿನಗಳಿಂದ ಧರ್ಮ ಗುರುಗಳು ಮತ್ತು ಸಮುದಾಯದ ಪ್ರಮುಖ ಮುಖಂಡರೊಂದಿಗೆ ಹಾಗೂ ಇಲ್ಲಿನ ಬಟ್ಟೆ ವ್ಯಾಪರಿಗಳೊಂದಿಗೆ ಅವರು ಸತತ ಸಭೆ ನಡೆಸಿ ಇಂದು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ (ಸ.ಅ) ಹೇಳಿದಂತೆ ನಿಮ್ಮ ನೆರೆಹೊರೆಯವರು ಸಂಕಷ್ಟ ಮತ್ತು ದುಃಖದಲ್ಲಿ ಸಿಲುಕಿದಾಗ ಅವರ ಮುಂದಿದೆ ನೀವು ಸಂಭ್ರಮಿಸಬಾರದು ಎಂಬ ಸಂದೇಶವನ್ನು ನಾವು ಚಾಚು ತಪ್ಪದೆ ಪಾಲಿಸಬೇಕಿದೆ. ಅಲ್ಲದೇ ಅವರು ಕಷ್ಟದಲ್ಲಿ ಇರುವ ಜನರಿಗೆ ಝಕಾತ್, ಫಿತ್ರಾ ನೀಡುವ ಮೂಲಕ ಅವರಿಗೆ ನೇರವಾಗಿ ಎಂದು ಮುಸ್ಲಿಂ ಬಾಂಧವರಿಗೆ ನೀಡಿರುವ ಸಹಾಬಾಳ್ವೆ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದರು.
ಮುಸ್ಲಿಂ ಬಾಂಧವರೆಲ್ಲರು ಈ ಬಾರಿ ರಂಜಾನ್ ಹಬ್ಬದ ಸಮಯವನ್ನು ಹೊಸ ಬಟ್ಟೆ ಖರೀದಿಗೆ ಮತ್ತು ಮಾರುಕಟ್ಟೆಯಲ್ಲಿ ಕಳೆಯದೆ ಆ ದೇವರನ್ನು ರಾಜಿ ಮಾಡುವ ನಿಟ್ಟಿನಲ್ಲಿ ಕಳೆಯಬೇಕು. ಸರಕಾರ ಮತ್ತು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ, ಅತ್ಯಂತ ಸರಳವಾಗಿ ಪವಿತ್ರ ರಂಜಾನ್ ಹಬ್ಬ ಆಚರಿಸೋಣ ಎಂದು ಇದೇ ವೇಳೆ ಕರೆ ನೀಡಿದ್ದಾರೆ.
ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ನಾಸೀರ್ ಹುಸೇನ್ ಉಸ್ತಾದ, ನಮ್ಮ ಸಮುದಾಯದ ಬಡ ಮತ್ತು ಮಧ್ಯಮ ವರ್ಗದವರು ಲಾಕ್ ಡೌನ್ ದಿಂದಾಗಿ ಹಬ್ಬದ ಹೊಸ ಬಟ್ಟೆಗಳು ಖರೀದಿಸುವ ಸ್ಥಿತಿಯಲ್ಲಿ ಇಲ್ಲ, ಶ್ರೀಮಂತರು ಹೊಸ ಬಟ್ಟೆ ಖರೀದಿಸಿ ರಂಜಾನ್ ಆಚರಿಸುವುದು ಸೂಕ್ತವಲ್ಲ ಮತ್ತು ಆ ರೀತಿ ಮಾಡುವುದು ಇಸ್ಲಾಂಗೆ ವಿರುದ್ಧವಾಗಿದೆ ಎಂದರು.
ದೇಶದಲ್ಲಿ ಸಿಎಎ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ನಂತರ ದೇಶ ವಿರೋಧಿ ಕಾನೂನು ಮಾಡಿ ಮುಸ್ಲಿಂ ಬಾಂಧವರಿಗೆ ‘ಸ್ಟೇಟ್ ಲೇಸ್’ ಮಾಡಲು ಹೊರಟಿದ್ದಾರೆ. ಅಲ್ಲದೇ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ದೆಹಲಿಯ ಗಲಭೆ, ಜಾಮೀಯಾ, ನಿಜಾಮಿಯ ಘಟನೆಗಳು ನಡೆಸಲಾಗುತ್ತಿದೆ. ಇದನ್ನು ಖಂಡಿಸಿ ಈ ಬಾರಿ ಹೊಸ ಬಟ್ಟೆ ಖರೀದಿಸದೇ ಸರಳವಾಗಿ ಪವಿತ್ರ ರಂಜಾನ್ ಆಚರಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಸ್ತಾದ ತಿಳಿಸಿದ್ದಾರೆ. ಇದಕ್ಕೆ ಇಲ್ಲಿನ ಬಟ್ಟೆ ವ್ಯಾಪಾರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದುಬಂದಿದೆ.
ಸಭೆಯಲ್ಲಿ ನ್ಯಾಯವಾದಿ ವಹಾಜ್ ಬಾಬಾ, ನಜರ್ ಮೊಹಮ್ಮದ್ ಖಾನ್, ಇಲಿಯಾಸ್ ಸೇಠ್ ಬಾಗಬಾನ್, ಅಬ್ದುಲ್ ರಹೀಮ್ ಮಿರ್ಚಿ, ಡಾಮ ಇರ್ಫಾನ್, ಆರೀಫ್ ಅಲಿ ಮನಿಯಾರ್ ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…