ಹಿರಿಯ ಪತ್ರಕರ್ತ ಬಿ ಎಂ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ ಬರೆದ ಎರಡೇ ಸಾಲಿನ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ. ಫೇಸ್ ಬುಕ್ ನಲ್ಲಿ ಯಾರು ಬಶೀರಾ ? ಬಶೀರನ ಸಾಧನೆಗಳು ಏನು ? ನಾವು ಮಾಡಿದ್ದಷ್ಟು ಹೋರಾಟಗಳನ್ನು ಬಶೀರ ಮಾಡಿದ್ದಾನಾ ? ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗುತ್ತಿದೆ.
ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ಜನಿಸಿದ ಬಿ ಎಂ ಬಶೀರರು ಪತ್ರಿಕೋದ್ಯಮ ಚಳುವಳಿ ಕಾರಣಕ್ಕಾಗಿಯೇ ಸಹೋದರ ಬಿ ಎಂ ರಶೀದರನ್ನು ಕಳೆದುಕೊಂಡರು. ಲಂಕೇಶ್ ನಲ್ಲಿ ಕೆಲಸ ಮಾಡುತ್ತಿದ್ದ ಬಿ ಎಂ ರಶೀದರ ಅನುಮಾಸ್ಪದ ಸಾವು ಬಿ ಎಂ ಬಶೀರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿಲ್ಲ. ಅಷ್ಟೊಂದು ಸೈದ್ದಾಂತಿಕ ಬದ್ದತೆ, ದೈರ್ಯವಂತಿಕೆ ಬಿ ಎಂ ಬಶೀರ್ ಗೆ ಇತ್ತು. ಪತ್ರಿಕೋಧ್ಯಮದಲ್ಲಿ ಜನಪರ ಚಳುವಳಿಗಳ ಜೊತೆ ನಿಂತ ಬಿ ಎಂ ಬಶೀರರು ನಾಡಿನ ಚಳುವಳಿಗಳ ಪ್ರಮುಖ ಭಾಗವೇ ಆಗಿದ್ದರು.
ಮುಂಬಯಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ೫ ವರ್ಷಗಳ ಕಾಲ ದುಡಿದ ನಂತರ ಜನವಾಹಿನಿ ಪತ್ರಿಕೆಯಲ್ಲಿ ಹಿರಿಯ ಸಂಪಾದಕರಾಗಿ ೫ ವರ್ಷ ಕೆಲಸ ಮಾಡಿದ್ದಾರೆ. ಪ್ರಸ್ತುತ “ವಾರ್ತಾ ಭಾರತಿ” ಕನ್ನಡ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿ ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೇಸ್ ಬುಕ್, ವಾಟ್ಸಪ್ ಗಳಂತಹ ಸಾಮಾಜಿಕ ಜಾಲತಾಣ ಇಲ್ಲದೇ ಇದ್ದ ಸಂಧರ್ಭದಲ್ಲಿ ವಾರ್ತಾಭಾರತಿ ಪತ್ರಿಕೆ ಕನ್ನಡಿಗರು, ರೈತರ ಜೊತೆ ಗಟ್ಟಿಯಾಗಿ ನಿಂತಿತ್ತು. ವಿಶೇಷ ಅರ್ಥಿಕ ವಲಯಕ್ಕೆ ಒಎನ್ ಜಿಸಿ ಕಂಪನಿಯು 3000 ಎಕರೆ ರೈತರ ಭೂಮಿ ಸ್ವಾಧೀನ ಮಾಡಿದಾಗ ರೈತರ ಜೊತೆ ನಿಂತ ಮೂರು ಪತ್ರಿಕೆಗಳಲ್ಲಿ ವಾರ್ತಾಭಾರತಿಯೂ ಒಂದು. ಅದಕ್ಕಾಗಿ ಅದು ನಷ್ಟ ಮಾಡಿಕೊಂಡಿದ್ದು ಕೋಟಿ ಕೋಟಿ ರೂಪಾಯಿಗಳ ಜಾಹೀರಾತು. ಎಲ್ಲಾ ಪತ್ರಿಕೆಗಳು ಮುಖಪುಟ ಜಾಹೀರಾತು ಹಾಕಿ ಕಂಪನಿ ಪರ ಇದ್ರೆ ವಾರ್ತಾಭಾರತಿ ಮಾತ್ರ ಅಭಿಯಾನದ ರೀತಿಯಲ್ಲಿ ರೈತರ ಪರ ನಿಂತಿತ್ತು.
ಕನ್ನಡ ಸಾಹಿತ್ಯ ಲೋಕಕ್ಕೆ ಬಿ ಎಂ ಬಶೀರರ ಕೊಡುಗೆಯೂ ಮಹತ್ವದ್ದು. ಕನ್ನಡದಲ್ಲಿ ಹನಿಗತೆ ಪ್ರಾಕಾರವನ್ನು ಸಮರ್ಥವಾಗಿ ಬಳಸುತ್ತಿರುವರಲ್ಲಿ ಬಶೀರರು ಪ್ರಮುಖರು. ಜೊತೆಗೆ ಉತ್ತಮ ಕವಿಯೂ ಹೌದು. ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದಿದ್ದ ಬಿ ಎಂ ಬಶೀರರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಪ್ರವಾದಿಯ ಕನಸು (ಕವನ ಸಂಕಲನ), ಬಾಳೆಗಿಡ ಗೊನೆ ಹಾಕಿತು (ಕಥಾ ಸಂಕಲನ), ಅಂಗೈಯಲ್ಲಿ ಆಕಾಶ (ಹನಿಗತೆಗಳ ಸಂಕಲನ), ಬಾಡೂಟದ ಜೊತೆಗೆ ಗಾಂಧೀ ಜಯಂತಿ (ಲೇಖನಗಳ ಸಂಗ್ರಹ), ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿ ಕಣ್ಣಲ್ಲಿ ಹನಿಗಳು(ಹನಿ ಕವಿತೆಗಳು), ಅಮ್ಮ ಹಚ್ಚಿದ ಒಲೆ(ಕವನ ಸಂಕಲನ) ಅವರ ಪ್ರಮುಖ ಪ್ರಕಟಿತ ಪುಸ್ತಕಗಳು. ಈ ರೀತಿಯ ಸಾಹಿತ್ಯ ಸೇವೆಗಾಗಿ ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರು ಚದುರಂಗ ಪ್ರತಿಷ್ಥಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.
ಕರಾವಳಿಯ ಮುಸ್ಲಿಂ ಕೋಮುವಾದ ಮತ್ತು ಹಿಂದೂ ಕೋಮುವಾದವನ್ನು ಸಮಾನಾಗಿ ನೋಡುವ ಬಿ ಎಂ ಬಶೀರರು ಎರಡೂ ವರ್ಗಗಳಿಂದ ದಾಳಿಗೆ ಒಳಗಾದವರು. ಎರಡೂ ವಾದಿಗಳ ನೈತಿಕ ಪೊಲೀಸ್ ಗಿರಿ, ಹಿಡನ್ ಅಜೆಂಡಾಗಳನ್ನು ಪತ್ರಿಕೆಯ ಮೂಲಕ ಬಯಲುಗೊಳಿಸಿದವರು. ಎಲ್ಲಾ ಕನ್ನಡ ಪತ್ರಿಕೆಗಳು ಹಿಂದಿ ಗುಲಾಮಗಿರಿ, ಹಿಂದುತ್ವವಾದ, ಶ್ರೀಮಂತರ ಪರ ಇರೋ ಸಂಧರ್ಭದಲ್ಲಿ ಅದರ ಪ್ರವಾಹಕ್ಕೆ ಎದುರಾಗಿ ವಾರ್ತಾಭಾರತಿ ಹಾಗೋ ಹೀಗೋ ಈಜಾಡುತ್ತಾ ಜನರಿಗಾಗಿ ಹೋರಾಡುತ್ತಿದೆ. 25 ವರ್ಷದ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬದುಕಿನಲ್ಲಿ ಬಿ ಎಂ ಬಶೀರರು ಸಮಾಜಕ್ಕಾಗಿ ತನ್ನ ಕುಟುಂಬದವರನ್ನು, ಹಣವನ್ನು ಕಳೆದುಕೊಂಡರೇ ಹೊರತು ಬಂಗಲೆಗಳನ್ನು ಕಟ್ಟಲಿಲ್ಲ, ಆದಾಯದ ಮೂಲಕ್ಕಾಗಿ ಉದ್ಯಮಗಳನ್ನು ಸ್ಥಾಪಿಸಲಿಲ್ಲ. ಆದ್ದರಿಂದಲೇ ರಾಜಿರಹಿತ ಬದುಕು ಸಾದ್ಯವಾಯಿತು.
ಬಿ ಎಂ ಬಶೀರ್ ಮತ್ತು ಅವರ ಕುಟುಂಬದ ತ್ಯಾಗ, ಬಲಿದಾನದ ಇತಿಹಾಸ, ರಾಜಿರಹಿತ ಪತ್ರಿಕೋದ್ಯಮದ ಹಿನ್ನಲೆಯೇ ಒಂದು ದೊಡ್ಡ ಹೋರಾಟದ ಇತಿಹಾಸ. ಇಂತವರನ್ನು ಯಾವುದೋ ಆಶಯದ ಪ್ರತಿಕ್ರಿಯೆಯನ್ನು ತಿರುಚಿ ಗುರಿಯಾಗಿಸೋದು ಕನ್ನಡದ ಜನ ಚಳುವಳಿಗೆ ಮಾಡುವ ದ್ರೋಹವಲ್ಲದೆ ಇನ್ನೇನೂ ಅಲ್ಲ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…