ಸುರಪುರ: ಹೊರ ರಾಜ್ಯದಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ತೆರಳಿದ ತಾಲೂಕಿನ ಜನತೆಯನ್ನು ಮರಳಿ ತಾಲೂಕಿಗೆ ಕರೆತರಲು ಸರ್ಕಾರ ನಿರ್ಧರಿಸಿದ್ದು ಕಾರಣ ಅವರು ನಮ್ಮ ತಾಲೂಕಿಗೆ ಬರುವ ಮುಂಚೆಯ ಅವರ ಆರೋಗ್ಯ ದೃಷ್ಠಿ ಮತ್ತು ತಾಲೂಕನ್ನು ಹಸಿರು ವಲಯದಲ್ಲಿ ಇರಿಸಲು ಎಲ್ಲಾ ರೀತಿಯಿಂದಾಗಿ ಸನ್ನದ್ಧರಾಗಬೇಕು ಎಂದು ತಹಶಿಲ್ದಾರ ನಿಂಗಣ್ಣ ಬಿರಾದರ್ ತಿಳಿಸಿದರು.
ತಹಶಿಲ್ದಾರ ಚೇರಿ ಸಭಾಂಗಣದಲ್ಲಿ ನಡೆದ ಕರೊನಾ ಟಾಸ್ಕ ಫೊರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೆ ಸರ್ಕಾರವು ನೀಡಿರುವ ಮಾರ್ಗಸೂಚಿಯಂತೆ ಎಲ್ಲ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಅದರಂತೆ ಈಗ ಹೊರರಾಜ್ಯದಲ್ಲಿ ನಮ್ಮ ತಾಲೂಕಿನವರು ಎಷ್ಟು ಜನರಿದ್ದಾರೆ ಎನ್ನುವುದು ನಿಖರ ಮಾಹಿತಿ ಇಲ್ಲ ಆದರೂಕೂಡಾ ನಮ್ಮ ಜನರ ರಕ್ಷಣೆಗೆ ಬೇಕಾಗುವ ಕ್ವಾರಂಟೈನ್ ವಾರ್ಡ ಮತ್ತು ಆರೋಗ್ಯ ತಪಾಸಣೆಗೆ ಬೇಕಾಗುವ ಎಲ್ಲಾ ಅಗತ್ಯ ಕ್ರಮವನ್ನು ವಹಿಸಲಾಗಿದೆ. ಹಾಗೆ ನಗರದ ಪಾಲಿಟ್ಕೆಕ್ನಿಕ್ ಕಾಲೇಜನ್ನು ಕ್ವಾರಂಟೈನ್ ಸೆಂಟರ್ ಆಗಿ ಮಾಡಲಾಗಿದೆ ಅದರಲ್ಲಿ ಸುಮಾರು 200 ರಿಂದ 300 ಜನರು ಇರಬಹುದು ಸುಜ್ಜಿತವಾದ ಕಟ್ಟಡ ಹಾಗೂ ಎಲ್ಲಾ ವ್ಯವಸ್ಥೆಯನ್ನು ಈಗಾಗಲೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ತಹಶಿಲ್ದಾರ ಸುಫಿಯಾ ಸುಲ್ತಾನ, ತಾಪಂ ಇಒ ಅಂಬ್ರೇಶ್, ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ, ಪಿಐ ಎಸ್.ಎಮ್.ಪಾಟೀಲ್, ಪೌರಾಯುಕ್ತ ಜೀವನ ಕುಮಾರ ಸೇರಿದಂತೆ ಇತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…