ಅಂಕಣ ಬರಹ

ಸೋಲೆ ಗೆಲುವಿನ ಮೆಟ್ಟಿಲು

ಜೀವನದಲ್ಲಿ, ತುಂಬಾ ನೊಂದಿರುವಂತಹ ವ್ಯಕ್ತಿ, ಸತತವಾಗಿ ಸೋಲನ್ನು ಅನುಭವಿಸುತ್ತಿರುವ ವ್ಯಕ್ತಿ ಒಂದೇ ಒಂದು ಸಲ ಅಬ್ರಹಮ್ ಲಿಂಕನ್ ಅವರ ಜೀವನದ ಪುಟವನ್ನು ತೆಗೆದು ನೋಡಲೇಬೇಕು!!, ಲಿಂಕನ್‌ ರು ಜೀವನದಲ್ಲಿ ಅನೇಕ ಸೋಲಿಗೆ ಪ್ರಸಿದ್ಧವಾದ ವ್ಯಕ್ತಿ!! ಅವರೊಬ್ಬ ಉದ್ಯಮಿಯೊಂದಿಗೆ ಕೆಲಸ ಮಾಡಲು ಹೋಗಿ ಸೋತರು.

ನಂತರ ರಾಜ್ಯದ ಚುನಾವಣೆಯಲ್ಲಿ ಸೋಲು. ಮತ್ತೊಮ್ಮೆ ತಾವೇ ವ್ಯಾಪಾರ ಮಾಡಲು ಹೋಗಿ ಅಪಾರ ನಷ್ಟ ಉಂಟಾಗಿ ಸೋಲು ಕಂಡರು. ಮುಂದೆ ಎಷ್ಟೋ ವರ್ಷಗಳ ಕಾಲ ಸಾಲದ ಹಣವನ್ನು ಕಟ್ಟುವು­ದರಲ್ಲೇ ಅವರ ಗಳಿಕೆ ಕರಗಿತು. ಮುಂದೊಮ್ಮೆ ರಾಜ್ಯದ ಚುನಾವಣೆ­ಯಲ್ಲಿ ಗೆಲುವು, ಆದರೆ,, ಆಗ ಅವರ ಹೆಂಡತಿ ತೀರಿಹೋದಳು. ಆಗ ಅವರು ತುಂಬ ಮಾನಸಿಕ ಒತ್ತಡಕ್ಕೆ ಒಳಗಾ­ಗಿದ್ದರು, ಖಿನ್ನತೆ ಬಹುಕಾಲ ಕಾಡಿತು.

ರಾಜ್ಯದ ಶಾಸನಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿ ಸೋತರು.
ಮುಂದೆ ಕಾಂಗ್ರೆಸ್‌ನ ಸ್ಥಾನಕ್ಕೆ ಚುನಾವಣೆಯಲ್ಲಿ ಸೋಲು.
ಅಮೆ­ರಿ­ಕದ ಸೆನೆಟ್‌ಗೆ ಆರಿಸಿ ಬರಲು ಪ್ರಯತ್ನಿಸಿ ಸೋತರು. ಮುಂದೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರಿಗೆ ನೂರು ವೋಟು ಕೂಡ ಬರಲಿಲ್ಲ.

ಕೊನೆಗೊಮ್ಮೆ ರಾಷ್ಟ್ರ­ಪತಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶಸ್ಸು ದೊರಕಿತು ಅದು ಅವರನ್ನು ಅಮೆರಿಕದ ಅತ್ಯಂತ ಯಶಸ್ವಿ ರಾಷ್ಟ್ರಪತಿಯನ್ನಾಗಿ ಮಾಡಿತು. ನೂರು ಸಲ ಸೋತು ಒಂದೇ ಒಂದು ಸಲ ಗೆದ್ದರೂ ಸಹ ಆ ಗೆಲುವು ನೂರು ಪಟ್ಟು ಸೋಲಿನ ಮುಖದ ಮೇಲೆ ಹೊಡೆದ ಹಾಗೆ ಇರುತ್ತದೆ ಎನ್ನುವುದು ಸತ್ಯ#

೧೮೬೪ನ ರಾಷ್ಟ್ರಪತಿ ಚುನಾವಣೆಯಲ್ಲು ಗೆದ್ದು ಎರಡನೇ ಬಾರಿಗೆ ರಾಷ್ಟ್ರಪತಿಯಾದರು. ಇವರು ೧೮೬೩ರಲ್ಲಿ ಗೆಟ್ಟಿಸ್ಬರ್ಗ್ ಅಡ್ರೆಸ್ನಲ್ಲಿ ಮಾಡಿದ ಭಾಷಣ ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾನ ಹಕ್ಕುಗಳು, ಸ್ವಾತಂತ್ರ್ಯ, ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿದಿದೆ. ಆದರೆ ದಕ್ಷಿಣ-ಉತ್ತರ ಸೈನಿಕರು ಪ್ರತಿದಿನ ಸಾಯುತ್ತಿದ್ದರು. ಅಂತಃಕಲಹ ನಿಲ್ಲಲೇ ಇಲ್ಲ. ಆಗ ಲಿಂಕನ್ ನು ಮತ್ತು ಇತರ ರಿಪಬ್ಲಿಕನ್ ನಾಯಕರು ೧೮೬೫ರಲ್ಲಿ ಅಮೇರಿಕಾದ ಸಂವಿಧಾನಕ್ಕೆ ೧೩ನೇ ತಿದ್ದುಪಡಿ ತಂದರು. ಗುಲಾಮಗಿರಿಗೆ ಇತಿಶ್ರೀ ಹಾಡಿದರು.ಹೀಗೆ ಅಲ್ಲಿ ಕಾನೂನಾತ್ಮಕವಾಗಿ ಗುಲಾಮಗಿರಿ ಅಂತ್ಯವಾಯಿತು.

ಸೋಲು ಒಂದು ಘಟನೆ ಮಾತ್ರ, ಅದು ಜೀವನವಲ್ಲ. ಬದುಕಿನಲ್ಲಿ ಲಕ್ಷಾಂತರ ಘಟನೆಗಳು ಜರುಗುತ್ತವೆ. ಅದರಲ್ಲಿ ಕೆಲವು ಮಾತ್ರ ವೈಫಲ್ಯವನ್ನು ಕಾಣಬಹುದು. ಒಂದು ವಿಫಲತೆ ಒಬ್ಬ ಮನುಷ್ಯನ ಪರಿಶ್ರಮದ ವಿಫಲತೆಯಲ್ಲ. ಅದು ಆ ಕ್ಷಣದಲ್ಲಿ ಪ್ರಯತ್ನ ಸಾಕಾಗಲಿಲ್ಲವೆಂಬುದನ್ನು ಹೇಳುತ್ತದೆ. ಸತತ ಪ್ರಯತ್ನದಿಂದ ಮಾತ್ರ ವಿಫಲತೆ ಓಡಿ ಹೋಗುತ್ತದೆ ಎನ್ನುವುದಕ್ಕೆ ಅಬ್ರಾಹಿಂ ಲಿಂಕನ್ ಅವರೇ ಸಾಕ್ಷಿ.

ಪಾಠ:ಅಬ್ರಹಾಂ ಲಿಂಕನ್ ರ ಜೀವನದಿಂದ ನಾವು ದೊಡ್ಡ ಪಾಠ ಕಲಿಯಬಹುದು. ಜೀವನದಲ್ಲಿ ನಾವು ಸಹ ಸಣ್ಣಪುಟ್ಟ ಸೋಲಿಗೆ ಧೃತಿಗೆಡದೆ ಅಚಲ ವಿಶ್ವಾಸ ಇಟ್ಟುಕೊಂಡು ನಮ್ಮ ಗುರಿಯೋಡಗೆ ಸಾಗೋಣ. ಗುರಿ ತಲುಪೋಣ. ಸಾಧನೆ ಸಾಧಕನ ಸ್ವತ್ತು,ನಮ್ಮ ಆಲಸ್ಯವೆ ನಮ್ಮ ದೊಡ್ಡ ಶತ್ರು. ಸಾಧನೆಗೆ ಯಾವುದೇ ಶಾರ್ಟ್ ಕಟ್ ಮಾರ್ಗವಿಲ್ಲ.ಗುರಿ ತಲುಪಲು ಬೇಕಾಗಿರುವುದು ಕನಸು, ಅಪಾರ ಪರಿಶ್ರಮ ಮತ್ತು ಭೂಮಿಯಷ್ಟು ತಾಳ್ಮೆ ಮಾತ್ರ.

ನಾವು ಇಂದಿನಿಂದ ಕನಸು ಕಟ್ಟೋಣ.ಕಣ್ಣಿಲ್ಲದೇ ಬದುಕಬಹುದು, ಕನಸ್ಸಿಲ್ಲದೆ ಬದುಕಲು ಸಾಧ್ಯವಿಲ್ಲ.ಅದು ಯಾವುದೇ ಸತ್ವಯಿಲ್ಲದ ನಿರ್ಜೀವ ಬದುಕು.ಕನಸು ಕಾಣುವುದು ಒಬ್ಬ ವ್ಯಕ್ತಿಯ ಜೀವಂತಿಕೆ ಲಕ್ಷಣ.

ಮೇನಕಾ ಪಾಟೀಲ್ ಬೀದರ್-

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago