ಬಿಸಿ ಬಿಸಿ ಸುದ್ದಿ

‘ಕೊರೊನಾ ರೋಗದ ವಿರುದ್ಧ ಹೋರಾಡಬೇಕು ವಿನಃ ರೋಗಿಯ ವಿರುದ್ಧ ಅಲ್ಲ’

ಕೊರೊನಾ ಮಹಾಮಾರಿ ವಿಶ್ವವನ್ನೇ ಕಾಡಿದ್ದು, ಕೋವಿಡ್-19 ನ್ನು ನಾನು ಹತ್ತಿರದಿಂದ ನೋಡಿದೆ ಎಂದು ಅನಿಸುತ್ತದೆ.  ಕೊರೊನಾಗೆ ದೇಶದ ಮೊದಲ ಬಲಿ ನಾನು ವಾಸಿಸುವ ಕಲಬುರಗಿ ಜಿಲ್ಲೆಯ ಓರ್ವ ವೃದ್ಧರಾಗಿದ್ದು, ಇದು ಒಂದು ದಾಖಲೆಯಾಗಿ ಉಳಿಯಲಿದೆ.

ಅಷ್ಟಕ್ಕೂ ಕೊರೊನಾ ವಿಶ್ವದ ಎಲ್ಲ ದೇಶ, ರಾಜ್ಯ, ಜಿಲ್ಲೆ, ಬಡಾವಣೆ ಮತ್ತು ಗ್ರಾಮಗಳ ಮನೆ ಮನೆ ಬಾಗಿಲು ತಟ್ಟಿದಂತಹ  ಸ್ಥಿತಿ ಅನುಭವಿಸಿದ್ದೇವೆ.

ವೈರಸ್ ನಿಂದ ತಪ್ಪಿಸಿಕೊಳ್ಳು ಪ್ರಯತ್ನ ಪ್ರತಿಯೊಬ್ಬ ನಾಗರಿಕರು ಮಾಡಿದು ಕಂಡಿದ್ದೇವೆ. ಅಲ್ಲದೇ ಆರೋಗ್ಯ ಇಲಾಖೆ, ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಪಟ್ಟಿರುವ ಕಷ್ಟಗಳು  ಶಬ್ದಗಳಲ್ಲಿ ವ್ಯಕ್ತ ಪಡಿಸಲು ಸಾಧ್ಯವಿಲ್ಲ.

ಆದರೆ ಈ ಕೊರೊನಾ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಕೆಲವೊಂದು ದುಃಖ ಮತ್ತು ಕೆಟ್ಟ ನೆನಪುಗಳು ನನ್ನೊಂದಿಗೆ ಉಳಿಯಲಿವೆ ಎಂಬ ಆತಂಕ ನನ್ನಲ್ಲಿದೆ.  ಚೀನಾದಿಂದ ಹರಡಿದ ಈ ಮಹಾಮಾರಿ ಕೊರೊನಾ, ಭಾರತದಲ್ಲಿ ಪ್ರವೇಶಿದಂತೆ ಅದು ಮಹಾಮಾರಿ ಕೊರೊನಾ ಆಗಿ ಉಳಿದಿರಲಿಲ್ಲ. ಅದು ಮತಾಂತರವಾಯಿತು. ಚೀನಾದಿಂದ ವಿಸ್ತರಿಸಲಾದ ಕೊರೊನಾ ಎಲ್ಲಾ ದೇಶದ ನಾಗರಿಕರಿಗೆ ಸೋಂಕು ತಗುಲಿ ಸಾವನಪ್ಪಿದರು ಮತ್ತು ಹಲವರು ಗುಣಮುಖರಾದ ಘಟನೆಗಳು ವಿಶ್ವವೇ ಗಮನಿಸಿದೆ.

ಆದರೆ ಇಲ್ಲಿ ಒಕ್ಕರಿಸಿದ ಕೋವಿಡ್-19, ಸೋಂಕು ತಗುಲಿದ ಜನರನ್ನು ಬಲಿ ಪಡೆಯುವ ಅಟ್ಟಹಾಸ ನಡೆಸುತ್ತಿದ್ದರೆ ಇನ್ನೊಂದು ಕಡೆಗೆ ರೋಗಿಗಳ ಬಗ್ಗೆ ಸಹನೆ ಮತ್ತು ಅನುಕಂಪ ತೋರಿ ಮಾನವೀಯ ಧರ್ಮ ಎತ್ತಿಹಿಡಿಬೇಕಾದ ಸಂದರ್ಭದಲ್ಲಿ ಅದಕ್ಕೆ ಸೋಕು ತಗುಲಿದ ರೋಗಿಗಳನ್ನು ಅಪರಾಧಿಯಾಗಿ ನೋಡುವಂತೆ ವಾತಾವರಣ ಸೃಷ್ಠಿಸಿ ತಿಲಾಂಜಲಿ ಇಡುವ ಕಾರ್ಯವು ಬಲು ಜೋರಾಗಿ ನಡೆಯಿತು.

ರೋಗದ ವಿರುದ್ಧ ಹೋರಾಟ ನಡೆಸಬೇಕಾದ ಪ್ರಜೆಗಳು, ರೋಗಿಯ ವಿರುದ್ಧ ಹೋರಾಟಕ್ಕೆ ಇಳಿವಂತೆ ಸೋಷಿಯಲ್ ಮೀಡಿಯಾ ಮತ್ತು ನಮ್ಮ ದೇಶದ ಕೆಲವು ಸುದ್ದಿ ಮಾಧ್ಯಮಗಳು ಪ್ರೇರಿಪಿಸಿದವು. ಸೋಂಕು ತಗಲಿದ ವ್ಯಕ್ತಿಗಳನ್ನು ಇಟ್ಟುಕೊಂಡು ಇಡೀ ದೇಶದ ನಾಗರಿಕರಿಗೆ ಸಂಪ್ರದಾಯಿಕ ಆಪರಾಧಿಕರಣಕ್ಕೆ ಅಸ್ತ್ರವಾಗಿಸುವ ಹುನ್ನಾರ ನಡೆಯುತ್ತಿದ್ದವು.

ಭಾರತಕ್ಕೆ ಮಹಾಮಾರಿಗಳು ಹರಡಿರುವುದು ಇದು ಮೊದಲೇನೂ ಅಲ್ಲ. ಪುರಾತನ ಕಾಲದಿಂದಲೂ ದೇಶದ ಎಲ್ಲಾ ನಾಗರಿಕರು ಒಗ್ಗಟ್ಟಾಗಿ ಹಲವು ಮಹಾಮಾರಿಗಳನ್ನು ಸಾವು ನೋವುಗಳ ಮದ್ಯೆ ತನ್ನದೆ ಆದ ರೀತಿಯಲ್ಲಿ  ಎದುರಿಸಿ ಗೆದ್ದಿರುವ ಉದಾಹರಣೆಗಳು ಹಿರಿಯರಿಂದ ಕೇಳಬಹುದು.

ಜಾಗತಿಕ ಯುಗದಲ್ಲಿ ನಾನು ಕಂಡ  ಏಡ್ಸ್ ರೋಗ, ಸೋಂಫ್ಲೋ, ಎನ್.1, ಎಚ್.1, ಮತ್ತು ಚಿಕನ್ ಗುನಿಯಾ, ಈಗ ಕೊರೊನಾದಂತ ಹಲವು ಮಹಾಮಾರಿ ಕಂಡಿದೆ ಆದರೆ ಸಾವು ಮತ್ತು ರೋಗವನ್ನು ದೇಶದ ನಾಗರಿಕರು ಸಂಪ್ರದಾಯಿಕ ಚೌಕಟಿನಲ್ಲಿ ನೋಡಿರಲಿಕ್ಕಿಲ್ಲ. ಆದರೆ 2020ರಲ್ಲಿ ಭಾರತಕ್ಕೆ ಕಾಲಿಟ್ಟ ಕೊರೊನಾ ಮಹಾಮಾರಿ ತಬ್ಲಿಘಿ ಎಂಬ ಹೆಸರನ್ನು ಬಳಸಿಕೊಂಡು ಇಡೀ ಸಮುದಾಯಕ್ಕೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸಿದ ಶ್ರೇಯಸ್ಸು ನಮ್ಮ ನಡುವೆ ಇರುವ ಮಾನವೀಯತೆ ಕಳೆದುಕೊಂಡ ದ್ವೇಷ ಕಾರು ಮತಾಂಧರಿಗೆ ಸಲ್ಲುತದೆ.

ಅಷ್ಟೆ ಅಲ್ಲದೇ ಈ ಮೂಲಕವೇ  ರೋಗಗಳಿಗೂ ಮತ್ತು ಸಾವುಗಳಿಗೆ ಸಂಭ್ರಮಿಸುವ ಹೊಸ ಸಂಪ್ರದಾಯವನ್ನೆ ನಮ್ಮಗೆ ಗೊತ್ತಿಲ್ಲದೆ ನಮ್ಮ ಮೇಲೆ ಹೇರಿದಂತೆ ಕಾಣುತ್ತದೆ. ಭಾವೈಕ್ಯ ಸಂಗಮದ ನೆಲದಲ್ಲಿ ಬೆಳೆದ ನನಗೆ ಇದನ್ನು ಅರಗಿಸಿಕೊಳ್ಳಲು

ಸಾಧ್ಯವಾಗಿಲ್ಲ. ಕೊರೊನಾದಂತಹ ಕಷ್ಟ ಮತ್ತು ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗಳ ನೆಪದಲ್ಲಿ ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಯುವುದಿದ್ದರೆ ನಿರ್ಧಿಷ್ಟ ಸಮುದಾಯದವೆ ಸಾಯಿಲಿ ಎಂಬ ಮನಸ್ಸಿನ ಕೆಲ ಜನರು ಒಂದೇ ತಕ್ಕಡಿಯಲ್ಲಿ ಇಟ್ಟು ತೂಕಮಾಡಿ ಅಪರಾಧಿಯಂತೆ ನೋಡಲು ಪ್ರಾರಂಭಿಸಿದರು.

ರೋಗ, ಮತ್ತು ಸಾವು ಬಡವ, ಶ್ರೀಮಂತ, ದೊಡ್ಡ ವ, ಚಿಕ್ಕವ ಎಂಬ ಬೇಧ ಮಾಡಲ್ಲ. ಅದು ಪ್ರಕೃತಿದತ್ತ ನಿಯಮದಲ್ಲಿ ಚಲಿಸಿ ಹರಡುವ ರೋಗವಾಗಿತ್ತು. ಆದರೆ ಈ ಪ್ರಕೃತಿಯ ನಿಯಮವನ್ನು ಚಾಲೆಂಜ್ ಮಾಡಿದಂತೆ ವಿದ್ಯಾವಂತರಿಂದ ಅವಿದ್ಯಾವಂತರ ಜ್ಞಾನಕ್ಕೂ ಯೋಚಿಸಿದಂತೆ ಮಾಡಿತು.

ಸಂಪ್ರದಾಯದ ಅಮಲಿನಲ್ಲಿರುವ ಅಮಾಯಕರಿಗೆ ಧರ್ಮ ಚೌಕಟ್ಟಿನ ಸಿದ್ದಾಂತವನ್ನು ಪುಡಿ ಮಾಡಿ, ಆರಾಧಿಸುವ ಧೈವ ತತ್ವದ ಸಿದ್ಧಾಂತವು ನಮ್ಮ ಯೋಚನೆಗಳನ್ನು ತಡೆಯಲು ಸಾಧ್ಯವಾಗಿತೆಂಬ ಅಭಿಪ್ರಾಯಗಳು ನಮ್ಮ ಫೇಸ್ ಬುಕ್, ವಾಟ್ಸಪ್, ಮತ್ತು ನಮ್ಮ ದೂರವಾಣಿಗಳ ಕತೆಗಳಲ್ಲಿ ಸೆರೆಯಾಗಿವೆ.

  • ಸಾಜಿದ ಅಲಿ, ಕಲಬುರಗಿ
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago