ಸುರಪುರ: ಕೊರೊನಾ ಸೊಂಕು ತಗುಲಿರುವ ನಗರದ ಆಸರ ಮೊಹಲ್ಲಾಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ಜನರಲ್ಲಿನ ಆತಂಕ ದೂರಗೊಳಿಸುವ ಪ್ರಯತ್ನ ಮಾಡಿದರು.ಬೆಳಿಗ್ಗೆ ಆಸರ ಮೊಹಲ್ಲಾದ ಇಬ್ಬರಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ಎಲ್ಲೆಡೆ ಹರಡುತ್ತಿದ್ದಂತೆ ಜನರು ಭಯಭೀತರಾಗಿ ಆಸರ ಮೊಹಲ್ಲಾದ ಕಡೆಗೆ ಯಾರೂ ಹೋಗದಂತೆ ಹಾಗು ಅಲ್ಲಿಯ ಜನರು ಬಾರಂತೆ ದಿಗ್ಬಂಧನ ಹರಡಿದ್ದರು.
ಮದ್ಹ್ಯಾನದ ಸುಮಾರಿಗೆ ಶಾಸಕ ರಾಜುಗೌಡ ಆಸರ ಮೊಹಲ್ಲಾಕೆ ಭೇಟಿ ನೀಡಿ ಜನರಿಗೆ ಭೇಟಿ ಮಾಡಿ,ತಾವ್ಯಾರು ಆತಂಕಗೊಳ್ಳುವ ಅವಶ್ಯವಿಲ್ಲ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ಹಸ್ತ ನೀಡಿದರು. ಕೊರೊನಾ ಸೊಂಕು ಇರುವವರನ್ನು ಈಗಾಗಲೆ ಆರೋಗ್ಯ ಇಲಾಖೆಯವರು ಇಲ್ಲಿಗೆ ಬರದಂತೆ ನೋಡಿಕೊಂಡಿದ್ದಾರೆ.ಇದರಿಂದ ಯಾರಿಗೂ ತೊಂದರೆಯಾಗದು.ಆದರೆ ತಾವುಗಳು ಮಾಸ್ಕ್ ಇಲ್ಲದೆ ಹೊರಗೆ ಬರಬೇಡಿ,ಸದಾಕಾಲ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ,ಅನಾವಶ್ಯಕವಾಗಿ ಹೊರಗೆ ಬರುವುದನ್ನು ಬಿಡಿ,ಮನೆಯಲ್ಲಿದ್ದು ಆಗಾಗ ಕೈಗಳನ್ನು ತೊಳೆಯುತ್ತಿರುವಂತೆ ತಿಳಿಸಿದರು.
ನಿಮಗೆ ಏನಾದರು ತೊಂದರೆಯಾದರೆ ತಿಳಿಸಿ ಹಾಗು ಈಗಾಗಲೆ ಆಸರ ಮೊಹಲ್ಲಾ ಸೀಲ್‍ಡೌನ್ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದರಿಂದ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸೊಂಕಿತರ ಮನೆಯಿಂದ ನೂರು ಮೀಟರ್ ವರೆಗೆ ಸೀಲ್‍ಡೌನ್ ಇರಲಿದೆ ಇದಕ್ಕೆ ಜನರು ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್,ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ,ಆರಕ್ಷಕ ನಿರೀಕ್ಷಕ ಎಸ್.ಎಂ.ಪಾಟೀಲ್,ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಸೇರಿದಂತೆ ಅನೇಕ ಜನ ಅಧಿಕಾರಿಗಳಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…