ಬಿಸಿ ಬಿಸಿ ಸುದ್ದಿ

‘ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಗಿಮಿಕ್’: ಶಾಸಕ ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಘೋಷಿಸಿದ ರೂ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಇದೊಂದು ಗಿಮಿಕ್ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಕೊರೋನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ನಿಂದಾಗಿ ಸ್ತಬ್ಧವಾಗಿದೆ. ಬಡ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೀಡಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತಾಪಿ ವರ್ಗ ಲಾಕ್ ಡೌನ್ ನಿಂದಾಗಿ ತೀವ್ರ ಹಾನಿ ಅನುಭವಿಸಿದ್ದಾರೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆ ಸಾಗಿಸಲಾಗದೆ ನಷ್ಢ ಅನುಭವಿಸಿದ್ದಾರೆ.

ಆ ವರ್ಗದ ಜನರು ಇಂದು ಪ್ರಧಾನಿಯವರ ಭಾಷಣದಲ್ಲಿ ಅವರ ಬದುಕಿಗೆ ಸ್ಥಿರವಾದ ಭರವಸೆಗಳನ್ನು ನಿರೀಕ್ಷಿಸಿದ್ದರು. ಆದರೆ ಪ್ರಧಾನಿಗಳು ತಮ್ಮ ಅರ್ಧತಾಸಿಗೂ ಹೆಚ್ಚಿನ ಅವಧಿಯ ಭಾಷಣದಲ್ಲಿ ಹೆಚ್ಚಿನ ಅವಧಿಯನ್ನು ಪ್ರಮುಖವಲ್ಲದ ವಿಷಯಕ್ಕೆ ಮೀಸಲಿಟ್ಟು ಕೇವಲ ಎರಡು ನಿಮಿಷದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಈ ಪ್ಯಾಕೇಜ್ ಘೋಷಿಸಿದರು. ಇದು ದೇಶದ ಬಹುಪಾಲ ಜನರಿಗೆ ನಿರಾಶೆ ಉಂಟು ಮಾಡಿದೆ. ಹಾಗಾಗಿ ಇದೊಂದು ಕೂಡಾ‌ ಗಿಮಿಕ್ ಎಂದು ಶಾಸಕರು ದೂರಿದರು.

20 ಲಕ್ಷ ಕೋಟಿ ಮೊತ್ತದಲ್ಲಿ ಈ ಹಿಂದೆ ಘೋಷಿಸಲಾದ ಕೇಂದ್ರ ಸರಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಪ್ರಧಾನಿಗಳು ಯಾವುದೇ ಸ್ಪಷ್ಟತೆ ನೀಡಲಿಲ್ಲ.

ನಾಳೆ‌ ಹಣಕಾಸು ಸಚಿವರು ವಿವರವಾಗಿ ಹೇಳಲಿದ್ದಾರೆ ಎಂದು ಅವರು ಹೇಳಿದರು. ಆ ಬಗ್ಗೆ ಪ್ರಧಾನಿಗಳೇ ಸ್ವತಃ ಜನರಿಗೆ ತಿಳಿಸಬಹುದಿತ್ತಲ್ಲ? ಅವರಿಗಿಂತ‌ದೊಡ್ಡವರು ಯಾರಿದ್ದಾರೆ ಎಂದು ಶಾಸಕ ಖರ್ಗೆ ಪ್ರಶ್ನಿಸಿದ್ದಾರೆ.

emedialine

Recent Posts

ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ: ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ| ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ‌.ಪಿ‌.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ…

5 hours ago

ಕುಂಬಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ನೀಡಲು ಒತ್ತಾಯ

ಶಹಾಬಾದ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಮೂಲಕ ಕಲಬುರಗಿ…

7 hours ago

ಪರಿಸರಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ

ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ…

7 hours ago

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. 'ವ' ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ…

7 hours ago

ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ…

7 hours ago

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

7 hours ago