ಬಿಸಿ ಬಿಸಿ ಸುದ್ದಿ

ಚಿತ್ತಾಪುರ ತಹಶೀಲ್ ಕಚೇರಿ ಸುತ್ತ ಎಂಪಿ ಕಾರ್ಮಿಕರ ಗಿರಕಿ

ವಾಡಿ: ಲಾಕ್‍ಡೌನ್ ನಂತರ ಹೊರ ರಾಜ್ಯಗಳಲ್ಲಿ ತೊಂದರೆಗೀಡಾದ ಕರ್ನಾಟಕದ ಗುಳೆ ಕಾರ್ಮಿಕರನ್ನು ಸರಕಾರ ವಾಪಸ್ ಕರೆಯಿಸಿಕೊಳ್ಳುತ್ತಿದೆ. ಆದರೆ ರಾಜ್ಯದೊಳಗೆ ಬಂಧಿಯಾಗಿ ಸಂಕಷ್ಟ ಅನುಭವಿಸುತ್ತಿರುವ ಹೊರ ರಾಜ್ಯದ ವಲಸಿಗ ಕಾರ್ಮಿಕರನ್ನು ಅವರವರ ಸ್ಥಳಕ್ಕೆ ಕಳುಹಿಸಿಕೊಡುವಲ್ಲಿ ಸರಕಾರ ವಿಳಂಬ ಮಾಡುತ್ತಿದ್ದು, ಕಾರ್ಮಿಕರ ಗೋಳಾಟಕ್ಕೆ ಕಾರಣವಾಗಿದೆ.

ಸಿಮೆಂಟ್ ನಗರಿ ವಾಡಿ ಪಟ್ಟಣದ ರೈಲ್ವೆ ಕಾಮಗಾರಿಗಾಗಿ ಮಧ್ಯಪ್ರದೇಶದಿಂದ ಕುಟುಂಬ ಸಮೇತ ವಲಸಿ ಬಂದಿರುವ 25ಕ್ಕೂ ಹೆಚ್ಚು ಗುತ್ತಿದೆ ಕಾರ್ಮಿಕರು, ಲಾಕ್‍ಡೌನ್ ಜಾರಿಯಾದ ನಂತರ ಗೃಹಬಂಧನದ ಬದುಕು ಅನುಭವಿಸುತ್ತಿದ್ದಾರೆ. ಸಾರ್ವಜನಿಕರು ಮತ್ತು ಪುರಸಭೆ ಅಧಿಕಾರಿಗಳು ನೀಡುತ್ತಿರುವ ಅನ್ನ ಸಾರು ತಿಂದು ಉಸಿರು ಬಿಗಿಹಿಡಿದುಕೊಂಡಿದ್ದಾರೆ. ಲಾಕ್‍ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಬೇರೆ ರಾಜ್ಯಗಳ ಕಾರ್ಮಿಕರನ್ನು ಕರೆಯಿಸಿಕೊಂಡಂತೆ ನಮ್ಮನ್ನೂ ನಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ ಎಂಬ ಮನವಿಪತ್ರವನ್ನು ಹಿಡಿದುಕೊಂಡು ಚಿತ್ತಾಪುರ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ಮನವಿ ಪತ್ರಗಳನ್ನು ಸ್ವೀಕರಿಸುತ್ತಿರುವ ತಹಶೀಲ್ದಾರ ಉಮಾಕಾಂತ ಹಳ್ಳೆಯವರು, ಯಾವಾಗ ಊರಿಗೆ ಕಳುಹಿಸಲಾಗುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಹೇಳುತ್ತಿಲ್ಲ. ಇದು ಹೊರ ರಾಜ್ಯದ ಕಾರ್ಮಿಕರ ಮನಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ ಎನ್ನಬಹುದು.

ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ದುಡಿಯಲು ಬಂದಿರುವ ವಿವಿಧ ರಾಜ್ಯಗಳಿಗೆ ಸೇರಿದ ಸುಮಾರು 300ಕ್ಕೂ ಹೆಚ್ಚು ವಲಸಿಗ ಕಾರ್ಮಿಕರಿದ್ದಾರೆ. ರೈಲ್ವೆ ಹಳಿ ಕಾಮಗಾರಿಗೆಂದು ಮಧ್ಯಪ್ರದೇಶದಿಂದ ಬಂದಿರುವ 25 ಜನ ಕಾರ್ಮಿಕರು, ರೈಲ್ವೆ ಕಾಲೋನಿಯ ಗಣೇಶ ಹಾಲ್‍ನಲ್ಲಿ ಲಾಕ್‍ಡೌನ್ ಸಂಕಟ ಅನುಭವಿಸುತ್ತಿದ್ದಾರೆ. ಇತ್ತ ಕೆಲಸವೂ ಇಲ್ಲ, ಅತ್ತ ಊರಿಗೆ ಹೋಗಲು ಅವಕಾಶವೂ ಇಲ್ಲ. ಕರ್ನಾಟಕ ಸರಕಾರ ಬೇಗ ಕಳಿಸುವ ವ್ಯವಸ್ಥೆ ಮಾಡುತ್ತಿಲ್ಲ. ಕಾರ್ಮಿಕರ ಸ್ವರಾಜ್ಯ ಇವರನ್ನು ಕರೆಯಿಸಿಕೊಳ್ಳುತ್ತಿಲ್ಲ. ಇಂಥಹ ಬಿಕ್ಕಟ್ಟಿನಲ್ಲಿ ಸಿಕ್ಕುಹಾಕಿಕೊಂಡಿರುವ ಕಾರ್ಮಿಕರು, ಕುಳಿತಲ್ಲೇ ಕುಳಿತು ಹಿಂಸೆ ಅನುಭವಿಸುತ್ತಿದ್ದಾರೆ.

ಕಾರ್ಮಿಕರ ಸಂಪೂರ್ಣ ಮಾಹಿತಿ ಸರಕಾರದ ಆನ್‍ಲೈನ್ ಯ್ಯಾಪ್‍ನಲ್ಲಿ ದಾಖಲಿಸಿದ್ದೇವೆ. ಸರಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ರಾತ್ರೋರಾತ್ರಿ ಎದ್ದು ಹೆಂಡಿರು ಮಕ್ಕಳೋಂದಿಗೆ ಕಾಲ್ನಡಿಗೆ ಯಾತ್ರೆ ಹೊರಡುವ ಮುಂಚೆಯೇ ಇವರನ್ನು ಅವರ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಉಪಾಧ್ಯಕ್ಷ ಭಾಗಣ್ಣ ಬುಕ್ಕಾ, ನಗರ ಸಂಚಾಲಕ ಶರಣು ಹೇರೂರ, ಮುಖಂಡರಾದ ಸಾಯಿನಾಥ ಚಿಟೇಲಕರ್, ಸುಂದರಲಾಲ ವಿ.ಕೆ ಆಗ್ರಹಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago