ಸುರಪುರ: ಇದುವರೆಗೆ ಕೊರೊನಾ ಗ್ರೀನ್ ಝೋನ್ ಆಗಿದ್ದ ಯಾದಗಿರಿ ಜಿಲ್ಲೆ ಹಾಗೂ ಸುರಪುರ ತಾಲೂಕು ಈಗ ಆರೆಂಜ್ ಝೋನ್ ಆಗಿ ಪರಿವರ್ತನೆಯಾಗಿದೆ.ಸುರಪುರ ನಗರದ ಆಸರ ಮೊಹಲ್ಲಾದ ದಂಪತಿಗಳಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದರಿಂದ ಇಡೀ ಆಸರ ಮೊಹಲ್ಲಾವನ್ನು ಜಿಲ್ಲಾಡಳಿತ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಿತ್ತು.
ಕಂಟೋನ್ಮೆಂಟ್ ಝೋನ್ ಆಗಿರುವ ಆಸರ ಮೊಹಲ್ಲಾಕೆ ತಲಪುವ ಎಲ್ಲಾ ರಸ್ತೆಗಳನ್ನು ಮುಳ್ಳು ಬೇಲಿ ಹಾಕಿ ಬಂದ್ ಮಾಡಿದ ನಗರಸಭೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಜನರು ಹೊರಗೆ ಬರದಂತೆ ಎಚ್ಚರ ವಹಿಸಲಾಗುವುದು. ಅಲ್ಲದೆ ಕಂಟೋನ್ಮೆಂಟ್ ಝೋನ್‍ಲ್ಲಿರುವ ಕುಟುಂಬಗಳಿಗೆ ಬೇಕಾದ ವಸ್ತುಗಳ ಬಗ್ಗೆ ನಗರಸಭೆಯಿಂದ ನೀಡಲಾದ ಮೊಬೈಲ್ ನಂಬರ್‍ಗಳಿಗೆ ಕರೆ ಮಾಡಿ ತಿಳಿಸಿದಲ್ಲಿ ಮನೆ ಬಾಗಿಲಿಗೆ ತಲುಪಿಸುವುದಾಗಿ ತಿಳಿಸಿದ್ದರು.
ಆದರೆ ಬುಧವಾರ ಕಂಟೋನ್ಮೆಂಟ್ ಝೋನ್‍ನ ಜನರು ಯಾವುದೇ ಭೀತಿಯಿಲ್ಲದೆ ಹೊರಗೆ ಓಡಾಡುತ್ತಿರುವುದು ಕಂಡುಬಂತು.ಇದರ ಜೊತೆಗೆ ಕಂಟೋನ್ಮೆಂಟ್ ಝೋನ್ ಮುನ್ನ ನಗರಸಭೆಯಿಂದ ಹಾಕಲಾದ ಟೆಂಟ್‍ಲ್ಲಿ ಯಾವುದೇ ಸಿಬ್ಬಂದಿ ಮತ್ತು ಅಧಿಕಾರಿಗಳಿಲ್ಲದೆ ಮೇಕೆಗಳು ಮಲಗಿರುವುದು ಕಂಡುಬಂದಿದ್ದರಿಂದ ನಗರಸಭೆ ಕಂಟೋನ್ಮೆಂಟ್ ಝೋನ್ ಬಗ್ಗೆ ಇರುವ ನಿರ್ಲಕ್ಷ್ಯದ ನಿಜ ದರ್ಶನ ಮಾಡಿಸಿತು.
ಕೊರೊನಾ ವೈರಸ್ ಮಹಾಮಾರಿಯಂತೆ ಒಬ್ಬರಿಂದ ನೂರಾರು ಜನರಿಗೆ ಹಬ್ಬುತ್ತಿದೆ.ಆಸರ ಮೊಹಲ್ಲಾದ ದಂಪತಿಗಳಲ್ಲಿ ಕಾಣಸಿದ ಕೊರೊನಾ ಸೊಂಕು,ಅವರ ಮಕ್ಕಳು ಈ ಸೊಂಕಿತ ದಂಪತಿಗಳು ಅಹಮದಾಬಾದ್‍ನಿಂದ ಬಂದಾಗ ಕಾರ್ ಬಳಿಗೆ ಹೋಗಿ ಬಟ್ಟೆಯ ಬ್ಯಾಗನ್ನು ಮನೆಗೆ ತಂದಿರುವ ಬಗ್ಗೆ ಜನರು ಮಾತಾಡಿಕೊಳ್ಳುತ್ತಿದ್ದು,ಈ ಬ್ಯಾಗ್ ತಂದಿರುವ ಮಕ್ಕಳನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಹೀಗಿರುವಾಗ ಕಂಟೋನ್ಮೆಂಟ್ ಝೋನ್ ಬಗ್ಗೆ ನಗರಸಭೆಯ ನಿರ್ಲಕ್ಷ್ಯ ನಮ್ಮಲ್ಲಿ ಆತಂಕ ಮೂಡಿಸುತ್ತಿದೆ.ನಗರಸಭೆ ಹಾಗು ತಾಲೂಕು ಆಡಳಿತ ಕೂಡಲೆ ಕಾಂಟೋನ್ಮೆಂಟ್ ಝೋನ್ ಮತ್ತು ಬಫರ್ ಝೋನ್ ಬಗ್ಗೆ ಲಕ್ಷ್ಯ ವಹಿಸಿ ಮುಂದೆ ಯಾವುದೆ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕೆಂದು ಅನೇಕರು ಮನವಿ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…