ಕಲಬುರಗಿ: ರಾಜ್ಯ ಸರಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸುಗ್ರಿವಾಜ್ಞೆ ಹೊರಡಿಸುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹರಿಸುವ ರೈತರಿಗೆ ವ್ಯಾಪಾರಸ್ಥರಿಗೆ ತುಂಬಾ ಸಂಕಷ್ಟದಲ್ಲಿ ಸಿಲುಕಿದಂತಾಗಿದೆ ಆದ್ದರಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸುಗ್ರಿವಾಜ್ಞೆ ತುರುವುದಕ್ಕೆ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಕಲಬುರಗಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಶಿವಕುಮಾರ ಘಂಟಿ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವರ್ತಕರು ಶೇ.1.5 ರಷ್ಟು ಮಾರುಕಟ್ಟೆ ಶುಲ್ಕವನ್ನು ಭರಿಸಿ ವ್ಯಾಪಾರ ಮಾಡುತ್ತಿದ್ದಾರೆ. ರಾಜ್ಯ ಸರಕಾರವು ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವುದರಿಂದ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ವರ್ತಕರಿಗೆ, ಮುನಿಮರಿಗೆ, ಹಮಾಲರಿಗೆ ಹಾಗೂ ಇದರ ಹಿಂದೆ ದುಡಿಯುವ ಸಾವಿರಾರು ಕಾರ್ಮಿಕರು ಈ ಹೊಸ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವುದರಿಂದ ಉಪ ಜೀವನಕ್ಕೆ ತೊಂದರೆಯಾಗುತ್ತದೆ ಅದಲ್ಲದೆ ಲಕ್ಷ ಗಟ್ಟಲೆ ದುಡಿಯುವ ವರ್ಗಕ್ಕೆ ಹಾನಿ ಉಂಟಾಗುತ್ತದೆ ಆದ್ದರಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಸುಗ್ರಿವಾಜ್ಞೆ ತರುವುದಕ್ಕೆ ಕಲಬುರಗಿ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ (ರಿ) ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದರು.
ರೈತರ ಹಾಗೂ ವ್ಯಾಪಾರಸ್ತರ ಸಂಬಂಧ ಬಹಳ ಚೆನ್ನಾಗಿ ಇದೆ ಅದಲ್ಲದೇ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರಸ್ಥರು ಶೇ.1.5 ರಷ್ಟು ಮಾರುಕಟ್ಟೆ ಶುಲ್ಕವನ್ನು ಭರಿಸಿ ವ್ಯಾಪಾರ ಮಾಡುತ್ತಾರೆ. ಆದ್ದರಿಂದ ಸರಕಾರಕ್ಕೆ ಕೋಟಿ ಗಟ್ಟಲೆ ಶುಲ್ಕ ಸರಕಾರ ಖಜಾನೆಗೆ ಸಂದಾಯವಾಗುತ್ತದೆ. ಈ ಕಾಯ್ದೆ ತರುವುದರಿಂದ ರೈತಾಪಿ, ವ್ಯಾಪಾರ ವರ್ಗಕ್ಕೆ ಸೂಕ್ತ ಬೆಲೆ ಸಿಗುವುದಿಲ್ಲ ಹಾಗೂ ಅನಾನುಕೂಲತೆ ಹೆಚ್ಚಾಗುತ್ತದೆ ರೈತರ ಹಾಗೂ ವ್ಯಾಪಾರಸ್ಥರಿಗೆ ಕೊಡಲಿ ಪೆಟ್ಟು ಬಿಳುವುದರಿಂದ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತೇವೆ ಹಾಗೂ ಪ್ರತಿಭಟಿಸಲಾಗುತ್ತದೆ ಎಂದರು.
ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸುಮಾರು 1000 ವರ್ತಕರು ಸಮಿತಿಯಿಂದ ಲೈಸನ್ಸ್ ಪಡೆದು ವ್ಯವಹರಿಸುತ್ತಿದ್ದಾರೆ. ಈ ಕಾನೂನು ಜಾರಿಯಾದರೆ ರೈತರ ಹಿತ ಬಲಿ ಕೊಟ್ಟಂತ್ತಾಗುತ್ತದೆ ಎಂದರು.
ದೇಶವು ಕೋವಿಡ್-19 ರೋಗಾಣುದಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ರೈತರ ಬೆಳೆದ ದವಸ ಧಾನ್ಯಗಳನ್ನು ಮಾರಾಟವಾಗದೆ ಇರುವ ಸಂದರ್ಭದಲ್ಲಿ ರೈತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಗಲು ರಾತ್ರಿ ಎನ್ನದೆ ರೈತರ ಶ್ರೇಯೋಭಿವೃದ್ದಿಗಾಗಿ ಕಾಂiÀರ್iನಿರ್ವಹಿಸುತ್ತಿದ್ದು ಹಾಗೂ ತೋಟಗಾರಿಕೆ ಬೆಳೆಗಳಿಂದ ರೈತರಿಗೆ ಸೂಕ್ತ ಮಾರಾಟ ವ್ಯವಸ್ಥೆ ಇರದೇ ಸಾಕಷ್ಟು ರೈತರು ಕಂಗಾಲಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರೈತರ ಕೈ ಹಿಡಿದು ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಕಲ್ಪಿಸಿ ಅವರ ಜೀವನಕ್ಕೆ ದಾರಿ ದೀಪವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಪಿಎಂಸಿಗಳಿಗೆ ತಿದ್ದುಪಡಿ ತರುವುದು ಸೂಕ್ತವಾಗಿರುವುದಿಲ್ಲ. ಆದ್ದರಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ ತರುವುದು ಸೂಕ್ತವಾಗಿರುವುದಿಲ್ಲ. ಇದನ್ನು ಸಂಘವು ತೀವೃವಾಗಿ ವಿರೋಧ ವ್ಯಕ್ತಪಡಿಸುತ್ತದೆ ಸದರಿ ಕಾಯ್ದೆ ತಂದಲ್ಲಿ ಮುಂಬರುವ ದಿನಗಳಲ್ಲಿ ರಾಜಾದ್ಯಂತ ಘೋರ ಹೋರಾಟ ಮಾಡಬೇಕಾಗುತ್ತದೆ. ಆದಕಾರಣ ಸದರಿ ಕಾಯ್ದೆ ಜಾರಿಗೆ ತರುವುದನ್ನು ಕೈ ಬಿಡಲು ಸಂಘವು ಮನವಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ಬಸವರಾಜ. ಎಸ್.ಕಣ್ಣಿ, ಕಾರ್ಯದರ್ಶಿ ಬಸವರಾಜ್ ಎಚ್.ತಡಕಲ್, ಸಹ ಕಾರ್ಯದರ್ಶಿ ರವಿಂದ್ರ ಎಸ್.ದೇವರಮನಿ, ಖಜಾಂಚಿ ಕಲ್ಯಾಣರಾವ ಎಸ್.ಮೂಲಗೆ, ಅಮರನಾಥ ಪಾಟೀಲ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…