ಬಿಸಿ ಬಿಸಿ ಸುದ್ದಿ

ಸುರಪುರದಲ್ಲಿನ ಕೊರೊನಾ ಕ್ವಾರಂಟೈನ್‍ಗಳಲ್ಲಿ ಅವ್ಯವಸ್ಥೆ: ಅನ್ನ ನೀರಿಗಾಗಿ ಸಂತ್ರಸ್ತರ ಮನವಿ

ಸುರಪುರ: ಕೊರೊನಾ ಸೊಂಕು ತಗಲಿರುವ ಕುರಿತು ಮುಂಜಾಗ್ರತೆಗಾಗಿ ಇರಿಸಲಾದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋದವರನ್ನು ಕರೆತಂದು ನಗರದಲ್ಲಿನ ಪಾಲಿಟೆಕ್ನಿಕ್ ಕಾಲೇಜ್ ಮತ್ತು ನ್ಯಾಯಾಲಯದ ಬಳಿಯಲ್ಲಿನ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ನಿರ್ಮಿಸಿ ಇರಿಸಲಾಗಿದ್ದು,ಕ್ವಾರಂಟೈನ್ ಸೆಂಟರ್‍ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದಾಗಿ ಕೊರೊನಾ ಶಂಕಿತರು ಆರೋಪಿಸಿದ್ದಾರೆ.

ನಮ್ಮನ್ನು ಕರೆತಂದು ಇಲ್ಲಿ ಇರಿಸಿದ್ದಾರೆ.ಆದರೆ ಇಲ್ಲಿ ನಮಗೆ ಕುಡಿಯಲು ನೀರಿಲ್ಲ,ಬೆಳಿಗ್ಗೆಯಿಂದ ಹತ್ತು ಗಮಟೆಯಾದರೂ ಇದುವರೆಗೆ ಊಟ ತಿಂಡಿ ನೀಡಿಲ್ಲ.ನಮಗೆ ಸಣ್ಣ ಸಣ್ಣ ಮಕ್ಕಳಿದ್ದು ಮಕ್ಕಳಿಗೆ ಹಾಲು ಮತ್ತು ಬ್ರೇಡ್ ಬಿಸ್ಕೆಟ್ ನೀಡುವುದಾಗಿ ಹೇಳಿದ್ದರು.ಆದರೆ ಇದುವರೆಗೂ ಹಾಲು ನೀಡಿಲ್ಲ,ಮಕ್ಕಳು ಅಳುತ್ತಿದ್ದಾರೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸರಿಯಾದ ವ್ಯವಸ್ಥೆಯನ್ನೆ ಮಾಡಿಲ್ಲ.ನಾವೆಲ್ಲರು ಇಲ್ಲಿ ತುಂಬಾ ತೊಂದರೆ ಪಡುವಂತಾಗಿದೆ.ಹೀಗಿದ್ದ ಮೇಲೆ ನಮನ್ಯಾಕೆ ಇಲ್ಲಿ ತಂದು ಇರಿಸಬೇಕಿತ್ತು? ನಮ್ಮ ಮನೆಗಳಲ್ಲಿ ನಾವು ಇರುತ್ತಿದ್ದೇವು.ಶಾಸಕರು ನಮ್ಮ ನೋವನ್ನು ಅರಿತು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳಿಗೆ ತಾಕೀತು ಮಾಡಿ ನಮಗೆ ಸರಿಯಾದ ಊಟ ನೀರಿನ ವ್ಯವಸ್ಥೆ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.

ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ಕ್ವಾರಂಟೈನ್‍ಲ್ಲಿ ಇರುವ ಯಾರೂ ನಿರ್ಗತಿಕರಲ್ಲ,ಅವರಿಗೂ ಒಂದು ಬದುಕಿದೆ.ಅವರೆಲ್ಲರಿಗೂ ಸರಕಾರ ಕೊರೊನಾ ಸೊಂಕಿನ ಶಂಕೆಯಿಂದ ಇಲ್ಲಿ ಇರಿಸಿದೆ.ಇದಕ್ಕೆ ಅವರೆಲ್ಲರು ಸಹಕರಿಸಿ ಇಲ್ಲಿದ್ದಾರೆ.ಆದರೆ ಅವರಿಗೆ ಒಂದಿಷ್ಟು ಅವಶ್ಯಕ ವಸ್ತುಗಳ ನೀಡುವುದು ತಾಲೂಕು ಆಡಳಿತದ ಕರ್ತವ್ಯ.

ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರು ಕ್ವಾರಂಟೈನ್‍ಲ್ಲಿರುವವರಿಗೆ ಸರಿಯಾದ ಸಮಯಕ್ಕೆ ತಿಂಡಿ ಊಟ ಮತ್ತು ಮಕ್ಕಳಿಗೆ ಹಾಲು ಬಿಸ್ಕೆಟ್ ನೀಡಬೇಕು. ಮುಖ್ಯವಾಗಿ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago