ಬಿಸಿ ಬಿಸಿ ಸುದ್ದಿ

ಮುಂಬೈನಿಂದ ಕಲಬುರಗಿಗೆ 1241 ವಲಸಿಗರ ಆಗಮನ

ಕಲಬುರಗಿ: ಮುಂಬೈನಿಂದ ಕಲಬುರಗಿಗೆ ಶುಕ್ರವಾರ ಬೆಳಗಿನ ಜಾವ “ಶ್ರಮಿಕ್” ವಿಶೇಷ ರೈಲಿನಲ್ಲಿ 1241 ವಲಸಿಗರು ಬಂದಿದ್ದು,ಈ ಪೈಕಿ ನೆರೆಯ ಯಾದಗಿರಿ ಜಿಲ್ಲೆಯ 345 ಹಾಗೂ ಮಹಾರಾಷ್ಟ್ರ ದ ಸೋಲಾಪುರದ ಅಕ್ಕಲಕೋಟೆಯ 4 ಮಂದಿ ಸೇರಿದ್ದಾರೆ.

ಕಲಬುರಗಿ ಜಿಲ್ಲೆಯ 892 ವಲಸಿಗರ ಪೈಕಿ 843 ಮಂದಿ ಚಿತ್ತಾಪುರ ತಾಲ್ಲೂಕಿಗೆ ಸೇರಿದವರಾಗಿದ್ದಾರೆ. ಉಳಿದಂತೆ ಶಹಾಬಾದ್ 17 ಮಂದಿ, ಜೇವರ್ಗಿ 11, ಕಲಬುರಗಿ 9,ಅಫಜಲಪುರ 5, ಅಳಂದ 4,ಚಿಂಚೋಳಿ 2 ಮಂದಿ ಹಾಗೂ ಸೇಡಂ ತಾಲ್ಲೂಕಿನ ಒಬ್ಬರು ಬಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಶರತ್. ಬಿ ಅವರು ತಿಳಿಸಿದ್ದಾರೆ.

ಎಲ್ಲಾ ವಲಸಿಗರಿಗೂ ರೈಲು ನಿಲ್ದಾಣದಲ್ಲಿ ಕೋವಿಡ್ ಆರೋಗ್ಯ ತಪಾಸಣೆ (ಸ್ಕ್ರೀನಿಂಗ್) ಮಾಡಿಸಿ ಆಯಾ ತಾಲ್ಲೂಕಿನ ಕ್ವಾರಾಂಟೈನ್ ಕೇಂದ್ರ ಗಳಿಗೆ ಕಳುಹಿಸಲಾಗಿದೆ. ಚಿತ್ತಾಪುರ 16,ನಾಲವಾರ 3, ಯಾದಗಿರಿ 13 ಸೇರಿ ಒಟ್ಟು 39 ಎನ್ಇಕೆಆರ್ಟಿಸಿ ಬಸ್ ಗಳಲ್ಲಿ ವಲಸಿಗರನ್ನು ಕ್ವಾರಾಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ.

2393 ಮಂದಿ ಆಗಮನ: ಮೇ 11 ರಂದು ಥಾಣೆಯಿಂದ 1152 ವಲಸಿಗರು ಮತ್ತು ಮೇ 14ರಂದು ಮುಂಬೈನಿಂದ 1241 ಮಂದಿ ಬಂದಿದ್ದು, ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಮಹಾರಾಷ್ಟ್ರ ದ ಅಕ್ಕಲಕೋಟೆಯ ಒಟ್ಟಾರೆ 2,393 ವಲಸಿಗರು ಇದುವರೆಗೆ ಕಲಬುರಗಿ ರೈಲು ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಈ ಪೈಕಿ ಉಭಯ ರೈಲುಗಳಲ್ಲಿ ಕರೆತರಲಾದ ಕಲಬುರಗಿ ಜಿಲ್ಲೆಯ ಎಲ್ಲಾ 1770 ಜನರನ್ನ ಆಯಾ ತಾಲ್ಲೂಕಿನ ಕ್ವಾರಾಂಟೈನ್ ಕೇಂದ್ರಗಲ್ಲಿಟ್ಟು ನಿಗಾವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago