ಕಲಬುರಗಿ: ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಕಲಬುರಗಿ ಜಿಲ್ಲೆಯ 11 ಜನರಲ್ಲಿ ಮಂಗಳವಾರ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
ಮುಂಬೈ ಪ್ರವಾಸ ಹಿನ್ನೆಲೆಯ ಕಾಳಗಿ ತಾಲೂಕಿನ ಕೋಡ್ಲಿ ತಾಂಡಾ ಮೂಲದ 7 ವರ್ಷದ ಬಾಲಕ (P-1257), 32 ವರ್ಷದ ಯುವಕ (P-1262), 30 ವರ್ಷದ ಯುವತಿ (P-1266) ಮತ್ತು ಬುಗಡಿ ತಾಂಡಾ ಮೂಲದ 42 ವರ್ಷದ ಪುರುಷ (P-1258) ಹಾಗೂ 18 ವರ್ಷದ ಯುವತಿ (P-1259) ಕೊರೋನಾ ಸೋಂಕು ಕಂಡುಬಂದಿದೆ.
ಕಾಳಗಿ ತಾಲೂಕಿನ ಅರಣಕಲ್ ತಾಂಡಾ ಮೂಲದ 8 ವರ್ಷದ ಬಾಲಕಿ (P-1260), 21 ವರ್ಷದ ಯುವತಿ (P-1263) ಹಾಗೂ 32 ವರ್ಷದ ಯುವಕನಿಗೆ (P-1267) ಕೊರೋನಾ ಸೋಂಕು ಅಂಟುಕೊಂಡಿದೆ. ಚಿತ್ತಾಪುರ ತಾಲೂಕಿನ ನಾಲವಾರ ಮೂಲದ 35 ವರ್ಷದ ಮಹಿಳೆ (P-1261) ಮತ್ತು 40 ವರ್ಷದ ಪುರುಷ (P-1264) ರಲ್ಲಿಯೂ ಕೋವಿಡ್-19 ದೃಢವಾಗಿದೆ.
ಇನ್ನೂ ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ಪಂಚಶೀಲ ನಗರದ 30 ವರ್ಷದ ಮಹಿಳೆಗೂ (P-1265) ಕೊರೋನಾ ಸೋಂಕು ತಗುಲಿದೆ. 11 ಜನ ಸೋಂಕಿತರ ಪೈಕಿ ಪಂಚಶೀಲ ನಗರದ 30 ವರ್ಷದ ಮಹಿಳೆ ಹೊರತುಪಡಿಸಿ ಉಳಿದೆಲ್ಲ ಕೊರೋನಾ ಸೋಂಕಿತರು ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದಾರೆ.
ಸೋಂಕು ದೃಢವಾದ ನಂತರ ಎಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಡು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…